Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ಹೋರಾಟಕ್ಕೆ ಗ್ರಾಮೀಣ ಬ್ಯಾಂಕಿನ ನಿವೃತ್ತ ನೌಕರರ ಬೆಂಬಲ

ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಡ್ಯನಗರದಲ್ಲಿ ನಡೆಯುತ್ತಿರುವ ಸರದಿ ಉಪವಾಸ ಸತ್ಯಾಗ್ರಹದಲ್ಲಿ ಕಾವೇರಿ ಹೋರಾಟದಲ್ಲಿ ಗುರುವಾರ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ನೌಕರರು ಭಾಗವಹಿಸಿ ಬೆಂಬಲ ಸೂಚಿಸಿದರು.

ಸಂಘದ ಅಧ್ಯಕ್ಷ ಕೆ ಪಿ ಅಶ್ವಿನ್ ಕುಮಾರ್, ಕಾರ್ಯದರ್ಶಿ ಅಲಕೆರೆ ಸತ್ಯಾನಂದ ಸ್ವಾಮಿ, ದೊಡ್ಡ ಗರುಡನಹಳ್ಳಿ ಬಸವರಾಜ್,ಮೋಡಚಾಕನಹಳ್ಳಿ ಎಂ. ಲೋಕೇಶ್,ವೈ ಯರಹಳ್ಳಿ ದೇವೇಗೌಡ,ಮೈಸೂರಿನ ಎಸ್.ಕೆ ರಮೇಶ್,ಸೋಮನಹಳ್ಳಿ ಎಸ್.ಕೆ ಸ್ವಾಮಿ,ಮಂಡ್ಯ ಹಾಲಹಳ್ಳಿ ಬಡಾವಣೆಯ ಬಿ.ಬಸವರಾಜ್ ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು.

ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಪರಿಣಾಮ ಕೃಷ್ಣರಾಜಸಾಗರದಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತಿದೆ, ಇದೇ ಪರಿಸ್ಥಿತಿ ಮುಂದುವರೆದರೆ ಬೇಸಿಗೆ ಕಾಲದಲ್ಲಿ ಕುಡಿಯಲು ನೀರು ಸಹ ಸಿಗುವುದಿಲ್ಲ, ಸರ್ಕಾರ ಈ ಕೂಡಲೇ ನೆರೆರಾಜ್ಯಕ್ಕೆ ನೀರು ಹರಿಸುತ್ತಿರುವುದನ್ನು ಸ್ಥಗಿತ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಮಾತನಾಡಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ವಿರೋಧಿಸಿ ನಿರಂತರ ಹೋರಾಟ ನಡೆದಿದ್ದರೂ ಕೂಡ ರಾಜ್ಯ ಸರ್ಕಾರ ಹೋರಾಟಕ್ಕೆ ಪ್ರತಿಕ್ರಿಯೆ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು

ನೀರಾವರಿ ತಜ್ಞರು ಕಾವೇರಿ ನದಿ ನೀರಿನ ಅಂಕಿ ಅಂಶಗಳನ್ನು ಮುಂದಿಟ್ಟು ವಾಸ್ತವ ವಿಚಾರವನ್ನು ತಿಳಿಸಿದ್ದು, ಇಷ್ಟಾದರೂ ರಾಜ್ಯ ಸರ್ಕಾರ ಚಳವಳಿಗಾರರನ್ನು ಅವಹೇಳನ ಮಾಡುವ ರೀತಿಯಲ್ಲಿ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ, ಸರ್ಕಾರದ ವರ್ತನೆ ಚಳವಳಿಯನ್ನು ತೀವ್ರ ಸ್ವರೂಪಕ್ಕೆ ಕೊಂಡೊಯ್ಯುವಂತೆ ಪ್ರೇರೇಪಿಸುತ್ತಿದೆ ಎಂದು ಕಿಡಿಕಾರಿದರು ಕಾನೂನಾತ್ಮಕವಾಗಿ ಕ್ರಮ ವಹಿಸಿ ನ್ಯಾಯ ಪಡೆದುಕೊಳ್ಳಲು ಪ್ರಯತ್ನ ನಡೆಸದಿರುವ ರಾಜ್ಯ ಸರ್ಕಾರ ಸದನ ಆರಂಭವಾಗಿ ನಾಲ್ಕು ದಿನ ಕಳೆದರೂ ಕಾವೇರಿ ವಿಚಾರವಾಗಿ ಚಕಾರ ವೆತ್ತದಿರುವುದು ಅತ್ಯಂತ ನೋವಿನ ಸಂಗತಿ ಎಂದು ಕಿಡಿಕಾರಿದರು.

ಬೆಳಗಾವಿ ಅಧಿವೇಶನ ಇನ್ನೂ ಆರು ದಿನಗಳ ಕಾಲ ನಡೆಯಲಿದ್ದು,ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತು ಪರಿಣಾಮಕಾರಿಯಾಗಿ ಚರ್ಚೆ ನಡೆಸಿ ಯಾವ ಕ್ರಮ ಕೈಗೊಂಡರೆ ಸೂಕ್ತ ಎಂಬುದನ್ನು ಜನತೆಗೆ ತಿಳಿಸಬೇಕು, ಯಾವ ಪಕ್ಷ ಮತ್ತು ಯಾವ ವ್ಯಕ್ತಿ ಎಂಬುದು ನಮಗೆ ಮುಖ್ಯವಾಗುವುದಿಲ್ಲ ಸರ್ಕಾರ ತೆಗೆದುಕೊಳ್ಳುವ ನಿಲುವು ಮುಖ್ಯ. ಸದನದಲ್ಲಿ ಕಾವೇರಿ ಸಮಸ್ಯೆಯನ್ನು ಚರ್ಚಿಸದೆ ಇದ್ದರೆ ಹೋರಾಟವನ್ನು ತೀವ್ರ ಸ್ವರೂಪಕ್ಕೆ ತೆಗೆದುಕೊಂಡು ಹೋಗಬೇಕಾದದ್ದುಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು

ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ನೌಕರರಾದ ಕೆ.ಟಿ ರಘುನಾಥ್, ಈರೇಗೌಡ, ವೆಂಕಟೇಶ್, ಸತ್ಯನಾರಾಯಣ, ಯಶೋರಾಜ್, ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್.ಮುದ್ದೇಗೌಡ, ಎಸ್ ನಾರಾಯಣ್, ಎಂ.ಎಲ್. ತುಳಸಿಧರ್, ಜಯರಾಂ, ಡಿ.ಸಿ.ಮರಿಸ್ವಾಮಿ, ಶಿವರಾಂ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!