ಮಂಡ್ಯ ಶಾಸಕ ರವಿಕುಮಾರ್ ಗಣಿಗ ಅವರ ವಿರುದ್ದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿವೆ ಎಂದು ವಿಶ್ವ ಕನ್ನಡ ಕಲಾಕೂಟದ ರಾಜ್ಯಾಧ್ಯಕ್ಷ ಬಿ.ಎನ್.ಸುರೇಶ್ ಬಾಬು ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕನ್ನಡ ನಾಡು, ನುಡಿ,ಜಲ ಹಾಗೂ ಚಿತ್ರರಂಗದ ಉಳಿವಿನ ಹಿತದೃಷ್ಟಿಯಿಂದ ಶಾಸಕ ರವಿಕುಮಾರ್ ನೀಡಿದ್ದ ಹೇಳಿಕೆಯನ್ನು ನಾಚಪ್ಪ ತಿರುಚುವ ಮೂಲಕ ದಾರಿತಪ್ಪಿಸಲು ಹೊರಟ್ಟಿದ್ದಾರೆ. ಅಲ್ಲದೇ ರಶ್ಮಿಕಾ ಮಂದಣ್ಣ ಅವರಿಗೆ ರವಿಕುಮಾರ್ ಬೆದರಿಕೆ ಹಾಕಿದ್ದಾರೆಂಬ ಹೇಳಿಕೆ ನೀಡಿದ್ದಾರೆ, ಇದು ಖಂಡನೀಯ ಎಂದಿದ್ದಾರೆ.
ರವಿಕುಮಾರ್ ಅವರ ವಿರುದ್ದ ನಾಚಪ್ಪ ರಾಷ್ಟೀಯ ಮಹಿಳಾ ಆಯೋಗಕ್ಕೆ ದೂರು ಕೊಡುವುದಾಗಿ ಹೇಳಿರುವುದು ಸರಿಯಲ್ಲ, ಅವರು ಮೊದಲು ರವಿಕುಮಾರ್ ಅವರ ಹೇಳಿಕೆಯನ್ನು ಪರಾಮರ್ಶಿಸಿ ಮಾತನಾಡುವುದು ಒಳ್ಳೆಯರು ಎಂದು ಸಲಹೆ ನೀಡಿದ್ದಾರೆ.




