ತಮ್ಮ ವರ್ಚಸ್ಸು ಮತ್ತು ಘನತೆಗೆ ಧಕ್ಕೆ ತರುವ ದುರುದ್ದೇಶದಿಂದ ಮಾಜಿ ಶಾಸಕ ಸುರೇಶ್ ಗೌಡ ಸಾರ್ವಜನಿಕವಾಗಿ ಆಧಾರರಹಿತ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಮಾಜಿ ಶಾಸಕ ಸುರೇಶ್ ಗೌಡ ಈ ಬಗ್ಗೆ ನ್ಯಾಯಾಲಯದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಚಿವ ಚಲುವರಾಯಸ್ವಾಮಿ ಅವರು ಸಲ್ಲಿಸಲಾಗಿದ್ದ ದೂರಿನಲ್ಲಿ ಸುರೇಶ್ ಗೌಡ ಅವರು ತಮ್ಮ ಘನತೆ, ಗೌರವ ಮತ್ತು ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಚಲುವರಾಯಸ್ವಾಮಿ ದೂರಿದ್ದರು. ಇಂದು ನ್ಯಾಯಾಲಯಕ್ಕೆ ಹಾಜರಾದ ಮಾಜಿ ಶಾಸಕ ಸುರೇಶ್ ಗೌಡ ಸಲ್ಲಿಸಿದ ಜಂಟಿ ಮೆಮೊದಲ್ಲಿ, ತಾವು ಮಾಡಿದ ಯಾವುದೇ ಹೇಳಿಕೆಗಳಿಂದ ಸಚಿವ ಚಲುವರಾಯಸ್ವಾಮಿ ಅವರಿಗೆ ನೋವಾಗಿದ್ದರೆ ಅಥವಾ ಅವರ ಘನತೆಗೆ ಧಕ್ಕೆಯಾಗಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ” ಎಂದು ಪತ್ರ ಸಲ್ಲಿಸಿದ್ದಾರೆ.
ಯಾವುದೇ ದುರುದ್ದೇಶವಿಲ್ಲದೆ ಹೇಳಿಕೆಯನ್ನು ನೀಡಲಾಗಿದೆ, ದೂರುದಾರರಿಗೆ ಅಥವಾ ದೂರುದಾರರ ಘನತೆಗೆ ಧಕ್ಕೆ ತರುವ ಅಥವಾ ದೂರುದಾರರನ್ನು ಮಾನಹಾನಿ ಮಾಡುವ ಯಾವುದೇ ಉದ್ದೇಶವಿರಲಿಲ್ಲ ಎಂದು ಸುರೇಶ್ ಗೌಡ ನ್ಯಾಯಾಲಯಕ್ಕೆ ತಿಳಿಸಿದ್ಧಾರೆ.





