Tuesday, November 24, 2026

ಪ್ರಾಯೋಗಿಕ ಆವೃತ್ತಿ

ಟಾಟಾ ಎಸಿ ಮಗುಚಿ ಓರ್ವ ಮಹಿಳೆ ಸಾವು:10 ಮಂದಿಗೆ ಗಾಯ

ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ರಾಜೇನಹಳ್ಳಿ ಗ್ರಾಮದ ಬಳಿ ಟಾಟಾ ಎಸಿ ಮಗುಚಿ ಬಿದ್ದ ಪರಿಣಾಮ ಓರ್ವ ಯುವತಿ ಸಾವನ್ನಪ್ಪಿ,10ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವ ಘಟನೆ ಇಂದು ರಾತ್ರಿ ನಡೆದಿದೆ.

ಕಬ್ಬು ಕಟಾವು ಮಾಡಲು ಬಂದಿದ್ದ ವಿಜಯಪುರ ಜಿಲ್ಲೆಯ ಕಡ್ಡಿರಾಮಪುರ ತಾಂಡಾದ ನಿವಾಸಿ ಶಶಿಕಲಾ(20)ಮೃತಪಟ್ಟ ಯುವತಿ. ಅಪಘಾತದಲ್ಲಿ ಪುಟ್ಟ ಮಕ್ಕಳು, ಓರ್ವ ಗರ್ಭಿಣಿ ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ವಿವರ ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಕಬ್ಬು‌ ಕಟಾವು ಮಾಡಲು ಬಂದಿದ್ದ ಶಶಿಕಲಾ ಮತ್ತು ತಂಡದವರು ಮತ್ತೀಕೆರೆ ಬಳಿ ಕಬ್ಬು ಕಟಾವು ಮಾಡಿ ಗಂಜಿಗೆರೆ ಬಳಿ ಆಸ್ಪತ್ರೆಯ ಹಿಂಭಾಗದಲ್ಲಿ ಇರುವ ತಾತ್ಕಾಲಿಕ ನಿವಾಸಕ್ಕೆ ತೆರಳುತ್ತಿದ್ದಾಗ ರಾಜೇನಹಳ್ಲಿ ಬಳಿ ಟಾಟಾ ಏಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಶಶಿಕಲಾ, ಚಂದ್ರನಾಯಕ್, ಗಾಯಿತ್ರಿ, ಲಕ್ಷ್ಮೀ ಬಾಯಿ, ಪರಶುರಾಮ್, ಮಂಗಳನಾಯಕ್, ಸೇರಿದಂತೆ 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಳಾಗಿದ್ದು ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ‌ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕಳುಹಿಸುವ ಸಂದರ್ಭದಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿದ್ದ ಶಶಿಕಲಾ ಮಾರ್ಗಮಧ್ಯೆ ಮೃತ ಪಟ್ಟಿದ್ದಾರೆ.

ಘಟನೆ ತಿಳಿದ ತಕ್ಷಣ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನಿರಂಜನ್, ಪಿಎಸ್ ಐ ಪ್ರಮೋದ್ ಅವರು ಸಿಬ್ಬಂದಿ ವರ್ಗಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಗಾಯಗೊಂಡಿದ್ದ ಐದು ಜನರನ್ನು ತುರ್ತು ವಾಹನ ತಡವಾದ ಕಾರಣ ತಮ್ಮ ವಾಹನದಲ್ಲೇ ಗಾಯಾಳುಗಳನ್ನು ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ