Friday, September 20, 2024

ಪ್ರಾಯೋಗಿಕ ಆವೃತ್ತಿ

ಬೆಂಗಳೂರು ರೇವ್ ಪಾರ್ಟಿ ಪ್ರಕರಣ| ತೆಲುಗು ನಟಿ ಹೇಮಾ ಬಂಧನ

ಬೆಂಗಳೂರಿನ ರೇವ್‌ ಪಾರ್ಟಿಯಲ್ಲಿ ಡ್ರಗ್ಸ್‌ ಸೇವನೆ ಮಾಡಿದ ಆರೋಪದ ಮೇಲೆ ತೆಲುಗು ನಟಿ ಹೇಮಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಹೇಮಾ ಈ ಮೊದಲು ತಾನು ಬೆಂಗಳೂರಿನ ರೇವ್‌ ಪಾರ್ಟಿಯಲ್ಲಿ ಭಾಗಿಯಾಗಿರಲಿಲ್ಲ ಎಂದು ಸುಳ್ಳು ಹೇಳಿಕೆ ನೀಡಿದ್ದರು. ಆರೋಪಿಯು ಬುರ್ಖಾ ಧರಿಸಿ ಸಿಸಿಬಿ ಪೊಲೀಸರಿಗೆ ಶರಣಾಗಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ಸ್‌ ಸಿಟಿಯ ಬಳಿಯ ಫಾರ್ಮ್‌ ಹೌಸ್‌ನಲ್ಲಿ ನಡೆದ ರೇವ್‌ ಪಾರ್ಟಿಯಲ್ಲಿ 30 ಮಹಿಳೆಯರು ಸೇರಿ 103 ಮಂದಿ ಭಾಗಿಯಾಗಿರುವುದಾಗಿ ಪೊಲೀಸರು ಎಫ್‌ಐಆರ್‌ ದಾಖಲಿಸಲಿದ್ದಾರೆ.

ಡ್ರಗ್ಸ್‌ ಪರೀಕ್ಷೆಗೆ ಒಳಪಡಿಸಿದಾಗ 59 ಪುರುಷರು ಹಾಗೂ 27 ಮಹಿಳೆಯರು ಡ್ರಗ್ಸ್‌ ಸೇವನೆ ಮಾಡಿರುವುದಾಗಿ ಕಂಡುಬಂದಿತು. ಒಟ್ಟಾರೆ ಭಾಗಿಯಾದ 103 ಮಂದಿಯಲ್ಲಿ 86 ಮಂದಿ ಡ್ರಗ್ಸ್‌ ಸೇವನೆ ಮಾಡಿದ್ದರು.

“>

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!