Friday, September 20, 2024

ಪ್ರಾಯೋಗಿಕ ಆವೃತ್ತಿ

ದೇವಾಲಯಗಳು ಸಂಸ್ಕೃತಿಯ ಪ್ರತಿಬಿಂಬ- ವಿಜಯ್ ರಾಮೇಗೌಡ

ದೇವಾಲಯಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ, ಅವು ನೆಮ್ಮದಿಯ ತಾಣಗಳಾಗಿವೆ ಎಂದು‌ ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ಅಭಿಪ್ರಾಯಪಟ್ಟರು.

ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿ ಯಗಚಗುಪ್ಪೆ ಗ್ರಾಮದಲ್ಲಿ ನೂತನ ಶ್ರೀಬಸವೇಶ್ವರ ಗೋಪುರ ಕಳಸ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಬಹಳಷ್ಟು ಮಹತ್ವವಿದೆ. ದೇವಸ್ಥಾನ ಅಥವಾ ದೇವಾಲಯ ಎಂದರೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳಿಗೆ ಮೀಸಲಾಗಿರುವ ಸ್ಥಳ ಎಂದರೆ ತಪ್ಪಾಗಲಾರದು. ದೇವಸ್ಥಾನಗಳ, ಮಂದಿರಗಳ ಜೀರ್ಣೋದ್ಧಾರಕ್ಕೆ ಸರ್ಕಾರ ಸಂಬಂಧಿಸಿದ ಮುಜರಾಯಿ ಇಲಾಖೆ ವತಿಯಿಂದ ಸಾಕಷ್ಟು ಅನುದಾನ ದೊರೆಯುತ್ತಿದೆ. ಅದನ್ನು ಉಪಯೋಗ ಮಾಡಿಕೊಳ್ಳಬೇಕೆಂದರು.

ಗ್ರಾಮೀಣ ಪ್ರದೇಶಗಳಲ್ಲಿ ಆಚರಿಸುವ ಹಬ್ಬಗಳಲ್ಲಿ ಮಹಿಳೆಯರು, ಯುವತಿಯರು, ಯುವಕರು ಉಲ್ಲಾಸ, ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ದೇವರಿಗೆ ಪೂಜೆ ಸಲ್ಲಿಸಿದರೆ ಸಾಲದು, ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಸದಸ್ಯ ಮಾಧವಪ್ರಸಾದ್, ಅಘಲಯ ಜಗದೀಶ್, ಪತ್ರಕರ್ತ ಹರಿಚರಣತಿಲಕ್, ಮುಖಂಡರಾದ ಶಿವಲಿಂಗಪ್ಪ, ಪುಟ್ಟಸ್ವಾಮಪ್ಪ, ಮಲ್ಲೇಶಪ್ಪ, ಶಂಕ್ರಪ್ಪ, ಶಿವಕುಮಾರಪ್ಪ,ಸಣ್ಣೇಗೌಡ, ಗ್ರಾ.ಪಂ.ಸದಸ್ಯರಾದ ರತ್ನಾಚಾರಿ, ಸಂತೋಷ, ಕುಮಾರ್, ಸೋಮಶೇಖರಪ್ಪ, ಬಾಂಬೆ ರಾಜಶೇಖರಪ್ಪ, ಎಲ್ ಐ ಸಿ ಶಿವಪ್ಪ, ನಾಗಪ್ಪ, ಸಿದ್ದಪ್ಪ, ಗುತ್ತಿಗೆದಾರರಾದ ನಂದೀಶ್, ಮಹೇಶ್ ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!