Saturday, May 18, 2024

ಪ್ರಾಯೋಗಿಕ ಆವೃತ್ತಿ

ಭರ್ಜರಿ ಭೇಟೆ| 2 ಟ್ರ್ಯಾಕ್ಟರ್‌, 22 ಬೈಕ್ ಗಳನ್ನು ಕಳವು ಮಾಡಿದ್ದ ಖದೀಮರ ಸೆರೆ !

2 ಮಹೀಂದ್ರ ಟ್ರಾಕ್ಟರ್ ಹಾಗೂ 22 ಬೈಕ್ ಗಳನ್ನು ಕಳವು ಮಾಡಿದ್ದ ಅಸಾಮಿಗಳನ್ನು ಮಂಡ್ಯ ತಾಲ್ಲೂಕಿನ ಬಸರಾಳು ಪೊಲೀಸ್ ಠಾಣೆಯ ಪೊಲೀಸರು ಬಂಧಿಸುವ ಭರ್ಜರಿ ಭೇಟೆಯಾಡಿದ್ದಾರೆ, ಈ ಇಬ್ಬರು ಆರೋಪಿಗಳಿಂದ ಎಲ್ಲಾ ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಈ ಎಲ್ಲಾ ವಾಹನಗಳ ಮೌಲ್ಯ ₹ 20 ಲಕ್ಷ ಎಂದು ಅಂದಾಜಿಸಲಾಗಿದೆ.

ಕಳೆದ ಸೆ.16ರಂದು ಬಸರಾಳು ಪೊಲೀಸ್ ಠಾಣೆಯ ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಬಸರಾಳು ಬಳಿ ವಾಹನಗಳ ತಪಾಸಣೆ ಮಾಡುತ್ತಿದ್ದಾಘ ಈ ಆಸಾಮಿ ನಾಗಮಂಗಲ ಕಡೆಯಿಂದ ಒಂದು ಟ್ರ್ಯಾಕ್ಟರ್‌ ಅನ್ನು ಚಾಲನೆ ಮಾಡಿಕೊಂಡು ಮಂಡ್ಯ ಕಡೆಗೆ ಹೊರಟಿದ್ದ, ಪೊಲೀಸರನ್ನು ನೋಡಿ ಟ್ರಾಕ್ಟರ್ ಅನ್ನು ನಿಲ್ಲಿಸಿ ಓಡಿ ಹೋಗಲು ಪ್ರಯತ್ನಿಸಿದ. ಆಗ ಆತನನ್ನು ಬೆನ್ನಟ್ಟಿದ ಪೊಲೀಸರು ಹಿಡಿದು ವಿಚಾರಣೆ ನಡೆಸಿದಾಗ ತನ್ನ ಸ್ನೇಹಿತನ ಜೊತೆ  ಸೇರಿ ಟ್ರಾಕ್ಟರ್ ಅನ್ನು ಕೆರಗೋಡು ಬಳಿಯ ಆನಸೋಸಲು ಗ್ರಾಮದಲ್ಲಿ ಕಳ್ಳತನ ಮಾಡಿದ್ದು, ಈ ದಿನ ಮಂಡ್ಯ ಕಡೆ ಹೋಗಿ ಯಾರಿಗಾದರೂ ಮಾರಾಟ ಮಾಡೋಣವೆಂದು ತೆಗೆದುಕೊಂಡು ಹೋಗುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ.  2 ಟ್ರಾಕ್ಟರ್ ಗಳನ್ನೂ ಸ್ನೇಹಿತನೊಂದಿಗೆ ಕಳ್ಳತನ ಮಾಡಿದ್ದು,  22 ಬೈಕ್ ಗಳನ್ನು ತಾನೊಬ್ಬನೆ ಕದ್ದಿರುವುದಾಗಿ ಹೇಳಿದ್ದಾರೆ.

ಈ ಪ್ರಕರಣದ ಪತ್ತೆಗಾಗು ಮಂಡ್ಯ ಆರಕ್ಷಕ ಉಪಾಧೀಕ್ಷಕ ಶಿವಮೂರ್ತಿ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ದೇವರಾಜು ನೇತೃತ್ವದಲ್ಲಿ, ಪಿಎಸ್‌ಐ ಶೇಷಾದ್ರಿಕುಮಾರ್ ಸೇರಿದಂತೆ ಸಿಬ್ಬಂದಿಗಳಾ ಇಂದ್ರ ಕುಮಾರ,  ಮಧುಕುಮಾರ, ಸೋಮಶೇಖರ, ಲೋಕೇಶ ಬನವಾಸಿ, ಮೋಹನ ನಾಯ್ಕ, ಭೀಮ್‌ಸಿ ಬಸರಗಿ, ಮಂಜು, ರವಿಕಿರಣ್, ಲೋಕೇಶ್ ರವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು.

ಇಬ್ಬರು ಆರೋಪಿಗಳು ಮಂಡ್ಯ ಜಿಲ್ಲೆಯ ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಟ್ರ್ಯಾಕ್ಟರ್‌ಗಳು ಹಾಗೂ ಬೆಂಗಳೂರು ಸಿಟಿ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 12 ಬೈಕ್‌ಗಳು. ಮಹದೇವಪುರ ಪೊಲೀಸ್ ಠಾಣೆ, ಅಮೃತಹಳ್ಳಿ ಪೊಲೀಸ್ ಠಾಣೆ, ಬೆಂಗಳೂರು ಜಿಲ್ಲೆ ಮಾದನಾಯಕನಹಳ್ಳಿ ಪೊಲೀ‌ಸ್ ಠಾಣೆ, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ, ತುಮಕೂರು ನಗರ, ತುಮಕೂರು ಗ್ರಾಮಾಂತರ ಪೊಲೀಸ್ ವ್ಯಾಪ್ತಿಗಳಲ್ಲಿ ಒಟ್ಟು 22 ಬೈಕ್ ಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!