Thursday, September 19, 2024

ಪ್ರಾಯೋಗಿಕ ಆವೃತ್ತಿ

ಕವಚ ಎಂಬ ರೈಲ್ವೆಯ ದೊಡ್ಡ ಮೋಸ !

ಪಶ್ಚಿಮ ಬಂಗಾಳದ ನ್ಯೂ ಜಲಪೈಗೂರಿ ಬಳಿ ಕಾಂಚನಗಂಗಾ ಎಕ್ಸ್ ಪ್ರೆಸ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿಯಾಗಿ 15 ಜನ ಪ್ರಯಾಣಿಕರು ಸಾವಿಗೀಡಾಗಿದ್ದಾರೆ. 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ನಡುವೆ ಭಾರತೀಯ ರೈಲ್ವೆಯ ಬಹುಚರ್ಚಿತ ಕವಚ ಯೋಜನೆಯ ಕಾರ್ಯ ನಿರ್ವಹಣೆ ಬಗ್ಗೆ ಅನೇಕ ಪ್ರಶ್ನೆಗಳು ಎದ್ದಿವೆ.

ಈ ಹಿಂದೆ ಒರಿಸ್ಸಾದಲ್ಲಿ ರೈಲುಗಳ ಮುಖಾಮುಖಿಯಾಗಿ 250 ಜನ ಮರಣ ಹೊಂದಿದಾಗ ಭಾರತಿಯ ರೈಲ್ವೆ ಹಲವು ಸಾಬೂಬುಗಳನ್ನು ನೀಡಿತ್ತು. ಆದರೆ ಸತತವಾಗಿ ಹೆಚ್ಚುತ್ತಿರುವ ರೈಲು ದುರಂತಗಳ ಬಗ್ಗೆ ಜನತೆ ಮತ್ತು ಪ್ರಯಾಣಿಕರು ಆಕ್ರೋಶಿತರಾಗಿದ್ದು, ಸಾವಿರಾರು ಕೋಟಿ ಜನರ ತೆರಿಗೆ ಹಣದಲ್ಲಿ ಅಭಿವೃದ್ದಿ ಮಾಡಿರುವ ಕವಚ ಯೋಚನೆ ಯಾಕೆ ಕೆಲಸ ಮಾಡುತ್ತಿಲ್ಲ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ನ್ಯೂ ಜಲಪೈಗೂರಿ ಅತ್ಯಂತ ಪ್ರಮುಖ ರೈಲ್ವೆ ಮಾರ್ಗವಾಗಿದ್ದು, ಇದು ಭಾರತದ ಇತರ ಭಾಗವನ್ನು ಈಶಾನ್ಯ ರಾಜ್ಯಗಳೊಂದಿಗೆ ಸಂಪರ್ಕಿಸುವ ರೈಲ್ವೆ ಲೈನ್ ಆಗಿದೆ. ಇದಕ್ಕೆ ಕವಚದ ರಕ್ಷಣೆ ಇರಲಿಲ್ಲವೆ ? ಗೂಡ್ಸ್ ರೈಲಿನ ಚಾಲಕ ಸಿಗ್ನಲ್ ನಿರ್ಲಕ್ಷಿಸಿ ಪ್ರಯಾಣಿಕ ರೈಲಿಗೆ ಡಿಕ್ಕಿ ಹೊಡೆಯುವಾಗ ಕವಚ ಏನು ಕೆಲಸ ಮಾಡುತ್ತಿತ್ತು ಎನ್ನುವ ಪ್ರಶ್ನೆಗೆ ರೈಲ್ವೆ ಮತ್ತು ಸರ್ಕಾರ ಉತ್ತರಿಸಲೇಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!