Wednesday, October 23, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಸಿನಿಮೀಯ ರೀತಿಯಲ್ಲಿ ಅಪಹರಣಕಾರರಿಂದ ತಪ್ಪಿಸಿಕೊಂಡ ಬಾಲಕ !

ಅಪಹರಣಕ್ಕೊಳಗಾದ ಬಾಲಕನೊಬ್ಬ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡು ಬಂದಿರುವ ಘಟನೆ ಪಟ್ಟಣದಲ್ಲಿ ವರದಿಯಾಗಿದೆ.

ಮಳವಳ್ಳಿ ತಾಲೂಕಿನ ಕೊದೇನಕೊಪ್ಪಲು ಗ್ರಾಮದ ಈರೇಗೌಡ ಎಂಬುವರ ಪುತ್ರ ಯೋಗೇಶ್ ಅಪಹರಣಕಾರದಿಂದ ತಪ್ಪಿಸಿಕೊಂಡ ಬಾಲಕ.

ಘಟನೆಯ ವಿವರ

ಮಳವಳ್ಳಿ ಪಟ್ಟಣದ ಹೊರವಲಯದ ಮಾರೇಹಳ್ಳಿ ಆದರ್ಶ ವಿದ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಂಗ ವ್ಯಾಸಂಗ ಮಾಡುತ್ತಿರುವ ಯೋಗೇಶ್, ಮಳವಳ್ಳಿ ಪಟ್ಟಣದ ಗೌಡಯ್ಯನ ಬೀದಿಯ 3ನೇ ಕ್ರಾಸ್ ನ ತಮ್ಮ ಮಾವನ ಮನೆಯಿಂದ ಶಾಲೆಗೆ ಹೋಗಿ ಬರುತ್ತಿದ್ದ. ಎಂದಿನಂತೆ ಮಂಗಳವಾರ (ಅ.22) ಎಂದಿನಂತೆ ಹಳೆ ಕೋರ್ಟ್ ಹಿಂಭಾಗದಲ್ಲಿ ಬೆಳಗಿನ ಜಾವ ಟ್ಯೂಷನ್ ಗೆ 5.20ರ ಸಮಯದಲ್ಲಿ ಹೋಗುತ್ತಿದ್ದಾಗ ಓಮಿನಿ ಕಾರಿನಲ್ಲಿ ಬಂದ ಮಂಕಿ ಕ್ಯಾಪ್ ಧರಿಸಿದ ಅಪಹರಣಕಾರರು ಬಾಲಕನ ಮೇಲೆ ಹಲ್ಲೆ ನಡೆಸಿ ಅಪಹರಿಸಿದ್ದರು.

ಅಪಹರಣಕಾರರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ವಾಹನ ನಿಲ್ಲಿಸಿ ಸಿಗರೇಟ್ ಸೇದುತ್ತಿದ್ದ ವೇಳೆಯಲ್ಲಿ ಅಪಹರಣಕಾರನ ಕೈ ಕಚ್ಚಿ ಸುಮಾರು ಒಂದು ಕೀ.ಮೀ. ದೂರ ಓಡಿ ಬಂದ ಬಾಲಕ, ಕ್ಯಾಬ್ ಚಾಲಕನೊಬ್ಬರ ನಂಬರ್‌ನಿಂದ ಅವರ ಮಾವನಿಗೆ ಮೊಬೈಲ್ ಕರೆ ಮಾಡಿ ನಡೆದ ಘಟನೆಯಲ್ಲಿ ವಿವರಿಸಿದ್ದಾನೆ. ಅಪಹರಣಕಾರರು ಉರ್ದು ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಕೂಡಲೇ ಪಿರಿಯಾಪಟ್ಟಣಕ್ಕೆ ತೆರಳಿದ್ದ ಸಂಬಂಧಿಕರು ಬಾಲಕನನ್ನು ಕರೆದುಕೊಂಡು ಮಳವಳ್ಳಿಗೆ ಬಂದಿದ್ದಾರೆ ಎಂದು ಮಳವಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಾಲಕನ ತಂದೆ ಈರೇಗೌಡ ದೂರು ನೀಡಿದ್ದಾರೆ.

ಈ ಸಂಬಂಧ ಮಳವಳ್ಳಿ ಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ಐವರು ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!