Friday, September 20, 2024

ಪ್ರಾಯೋಗಿಕ ಆವೃತ್ತಿ

ಮೋದಿ‌‌ ಮೋದಿ‌ ಎನ್ನುವ ಜೈಕಾರ ಇಲ್ಲದೇ ಮುಗಿದ ಚುನಾವಣೆ !!

2014 ಮತ್ತು ‌2019 ರ‌‌ ಲೋಕಸಭಾ ಚುನಾವಣೆಗಳಲ್ಲಿ‌ ಮೋದಿಜೀ ‌ದೇಶದ ಯಾವುದೇ ಮೂಲೆಯಲ್ಲಿ ಹೋಗಿ ಭಾಷಣ ಮಾಡಿದರೂ ಸಹ ಅವರ ಅಭಿಮಾನಿಗಳು ಮತ್ತು ‌ಜನರು ಮೋದಿ‌ ಮೋದಿ ಎನ್ನುವ ಜೈಕಾರ ಹಾಕುತ್ತಾ ಮುಗಿಲು ಮುಟ್ಟುವಂತೆ ಕೂಗುತ್ತಿದ್ದರು.

ಆದರೆ 2024ರ ಲೋಕಸಭಾ ‌ಚುನಾವಣೆಯಲ್ಲಿ 150 ಕ್ಕಿಂತ ಹೆಚ್ಚು ರ‌್ಯಾಲಿಗಳನ್ನು ಸಂಘಟಿಸಿರುವ ಮೋದಿಜೀ ಅವರ ರ‌್ಯಾಲಿಗಳಲ್ಲಿ ಮೋದಿ ಮೋದಿ ಎನ್ನುವ ಜೈಕಾರಗಳು ಇರಲಿಲ್ಲ.ಮೋದಿ ಅಭಿಮಾನಿಗಳು ಹಾಗೂ ಜನರು ಕೂಡ ಈ ಹಿಂದಿನ ಎರಡು ಲೋಕಸಭಾ ಚುನಾವಣೆಗಳಲ್ಲಿ ಸೇರಿದಂತೆ ಸೇರುವುದಾಗಲೀ,ಮೋದಿ ಮೋದಿ ಎಂದು ಜೈಕಾರ ಹಾಕುವುದಾಗಲಿ ಇರಲಿಲ್ಲ.

ಹಲವು ರ್‍ಯಾಲಿಗಳಿಗೆ ಜನರನ್ನು ತುಂಬಿಸುವುದೇ ಬಹಳ ದೊಡ್ಡ ಸಾಹಸವಾಗಿತ್ತು.ಅಭಿವೃದ್ಧಿ ಕೆಲಸಗಳಿಗಿಂತ ಹಿಂದೂ-ಮುಸ್ಲಿಂ ನಡುವೆ ದ್ವೇಷ ಕಾರುವುದನ್ನೇ ಭಾಷಣ ಮಾಡಿಕೊಂಡ ಮೋದಿಯ ಭಾಷಣ ಎರಡನೇ ಹಂತದಲ್ಲಿಯೇ ಜನರಿಗೆ ಬೋರು ಹೊಡೆಸ ತೊಡಗಿತ್ತು.ನಂತರ ದಿನಕ್ಕೊಂದು ಅಭಾಸದ ಹೇಳಿಕೆಗಳು ಕೂಡ ಮೋದಿ ಅಭಿವೃದ್ಧಿಗಿಂತ ಭಾವನಾತ್ಮಕ ವಿಚಾರಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆಂಬ ವಿಚಾರ ತಿಳಿದ ಜನರೂ ಕೂಡ ಮೋದಿ ಬಗ್ಗೆ ಭ್ರಮನಿರಸನರಾದರು.

ಹಾಗಾಗಿ ಮೋದಿಜೀ ಅವರ ವರ್ಚಸ್ಸು ಮತ್ತು ಮೋದಿ ಅಲೆ ಎಂಬುದು ಈ ಚುನಾವಣೆಯಲ್ಲಿ ಇರಲಿಲ್ಲ ಎನ್ನುವ ಚರ್ಚೆಗಳು ಬಿಜೆಪಿ ಕಾರ್ಯಕರ್ತರ ನಡುವೆ ಪ್ರಾರಂಭವಾಗಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!