Saturday, May 18, 2024

ಪ್ರಾಯೋಗಿಕ ಆವೃತ್ತಿ

ಮೈಸೂರು ದಸರಾ ನೆನಪಿಸಿದ ಸಮ್ಮೇಳಾಧ್ಯಕ್ಷರ ಜಾನಪದ ಮೆರವಣಿಗೆ

✍️ ಹನಿಯಂಬಾಡಿ ಜಗದೀಶ್ 

ಸಕ್ಕರೆನಾಡು ಮಂಡ್ಯನಗರದಲ್ಲಿ ಇಂದು ಎಲ್ಲೆಲ್ಲೂ ಜಾನಪದ ಕಲಾವಿದರ ಕಲರವ…ಎಲ್ಲಿ ನೋಡಿದರಲ್ಲಿ ದೇಸಿ ಉಡುಪುಗಳನ್ನು ತೊಟ್ಟ ಜಾನಪದ ಕಲಾವಿದರ ದಂಡು….ಮಂಡ್ಯನಗರದಾದ್ಯಂತ ಮರವಣಿಗೆಯಲ್ಲಿ ಹೊರಟ ಜಾನಪದ ಕಲಾತಂಡಗಳು….ಇವು ಶುಕ್ರವಾರ ಬೆಳಿಗ್ಗೆ ಮಂಡ್ಯನಗರದಲ್ಲಿ ಕಂಡು ಬಂದ ದೃಶ್ಯಗಳಾಗಿದ್ದವು.

2 ದಿನಗಳ ಕಾಲ ನಡೆಯುವ ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಸಮ್ಮೇಳನಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ 1 ಸಾವಿರಕ್ಕೂ ಹೆಚ್ಚು ಕಲಾವಿದರು ಮಂಡ್ಯನಗರದಲ್ಲಿ ಬೀಡು ಬಿಟ್ಟಿದ್ದಾರೆ.

nudikarnataka.com

ಇಂದು ಮುಂಜಾನೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಆರಂಭವಾದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ನಾಡಿನ ವೈವಿಧ್ಯತೆಯನ್ನು ಸಾರುವ ಪೂಜಾ ಕುಣಿತ, ಗೊರವನ ಕುಣಿತ, ಚಿಟ್ ಮೇಳ, ಕೋಲಾಟ, ಕಂಸಾಳೆ, ವೀರಗಾಸೆ, ವೀರಭದ್ರನ ಕುಣಿತ ಗಾರುಡಿ ಗೊಂಬೆ ಸೇರಿದಂತೆ 50 ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

nudikarnataka.com

ಈ ಮೆರವಣಿಯಲ್ಲಿ ಸಮ್ಮೇಳಾಧ್ಯಕ್ಷ ಡಾ.ರಾಗೌ ( ಡಾ.ರಾಮೇಗೌಡ) ಅವರನ್ನು ಬೆಳ್ಳಿರಥದಲ್ಲಿ ಮೆರವಣಿಗೆ ನಡೆಸಿ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಸಂಜಯ ವೃತ್ತ, ಮಹಾವೀರ ವೃತ್ತ, ವಿವಿ ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ, ಆರ್.ಪಿ.ರಸ್ತೆ ಮೂಲಕ ಮಂಡ್ಯ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಕರೆತರಲಾಯಿತು.

nudikarnataka.com

ನಾಡಿನ ವಿವಿಧಡೆಯಿಂದ ಬಂದಿದ್ದ ಜಾನಪದ ಕಲಾತಂಡಗಳ ಮೆರವಣಿಗೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತು ನೋಡಿದ ಸಾರ್ವಜನಿಕರು ಕಲಾವಿದ ಕುಣಿತ ಮತ್ತು ಕಲಾ ಪ್ರದರ್ಶನಕ್ಕೆ ಮೂಕ ವಿಸ್ಮತರಾದರು. ಒಟ್ಟಿನಲ್ಲಿ ಜಾನಪದ ಮೆರವಣಿಗೆಯೂ ಮೈಸೂರು ದಸರೆಯನ್ನು ನೆನಪಿಸುವಂತಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!