Monday, September 23, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಹೊಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಯಶಸ್ವಿ

ಮಂಡ್ಯ ತಾಲೂಕು ಹೊಳಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023 -24 ನೇ ಸಾಲಿನ” ಸರ್ವ ಸದಸ್ಯರ ವಾರ್ಷಿಕ ಮಹಾಸಭೆ” ಯು ಈ ದಿನ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ನಿಂಗೇಗೌಡ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಿ.ಇ.ಟಿ . ಟ್ರಸ್ಟಿಯಾದ ಎಚ್. ಸಿ. ಮೋಹನ್ ಕುಮಾರ್ ರವರು ಜ್ಯೋತಿ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಂಘದ ಗೌರವಾಧ್ಯಕ್ಷ ಹಾಗೂ ಮಾಜಿ ಶಾಸಕಎಚ್. ಬಿ. ರಾಮು ಸಂಘದಲ್ಲಿ ಹೆಚ್ಚಿಗೆ ರಸಗೊಬ್ಬರ ಹಾಗೂ ಪಶು ಆಹಾರವನ್ನು ತೆಗೆದುಕೊಂಡವರಿಗೆ ಬಹುಮಾನ ವಿತರಿಸಿ ಮಾತನಾಡಿ, ಮಂಡ್ಯ ತಾಲೂಕುಗಳಲ್ಲಿ ಮುಂಚೂಣಿಯಲ್ಲಿರುವ ಕೆಲವೇ ಕೆಲವು ಸಹಕಾರ ಸಂಘಗಳಲ್ಲಿ ಗಾಣದಾಳು, ಕೀಲಾರ ಹಾಗೂ ಹೊಳಲು ಸಹಕಾರ ಸಂಘಗಳು ಜಿಲ್ಲೆಯಲ್ಲಿ ಹೆಸರಾಗಿದೆ. ಹಾಗೂ ಲಾಭದತ್ತ ಸಾಗುತ್ತಿದೆ. ಇಂತಹ ಗ್ರಾಮದಲ್ಲಿ ನಾವು ಜನಿಸಿರುವುದು ನಮ್ಮೆಲ್ಲರ ಪುಣ್ಯ. ಸಹಕಾರ ಸಂಘಗಳು ಅಭಿವೃದ್ಧಿ ಹೊಂದಬೇಕಾದರೆ ಸಂಘದ ಅಧ್ಯಕ್ಷರು ಕಾರ್ಯದರ್ಶಿ ಹಾಗೂ ಸದಸ್ಯರು ಹೊಂದಾಣಿಕೆಯಿಂದ ಹೋದರೆ ಸಂಘದ ಅಭಿವೃದ್ಧಿಯತ್ತ ಹೋಗಬಹುದು ಎಂದರು. ನಮ್ಮ ಸಂಘವು ಶತಮಾನೋತ್ಸವವಾಗಿದೆ ( 100 ವರ್ಷ) ಆದ್ದರಿಂದ ಶತಮಾನೋತ್ಸವ ಆಚರಿಸಲು ತಮ್ಮೆಲ್ಲರ ಸಹಕಾರ ಮುಖ್ಯ ,ಮತ್ತು ಸಹಕಾರ ಸಂಘಗಳು ವಾರ್ಷಿಕವಾಗಿ ಲಾಭ ನಷ್ಟ ತಿಳಿಸುವುದೇ ಈ ವಾರ್ಷಿಕ ಮಹಾಸಭೆಯ ಉದ್ದೇಶವಾಗಿದೆ .ಆದ್ದರಿಂದ ಸಂಘದ ಪ್ರತಿಯೊಬ್ಬರು ಸಂಘಕ್ಕೆ ಕೈಜೋಡಿಸಿ ಸಂಘವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್. ಎಲ್ .ಶಿವಣ್ಣ ಮಾತನಾಡಿ, ಸಹಕಾರ ಸಂಘಗಳು ನೀವು ನೀಡಿದ ಹಣ ಹಾಗೂ ಫಂಡ್ಗಳನ್ನು ಕಟ್ಟಿದರೆ ಅದು ನಿಮಗೆ ಸಹ ಲಾಭದಾಯಕವಾಗಿ ವಾಪಸ್ ನೀಡುತ್ತದೆ. ಹಾಗೂ ದಿವಂಗತ ಶ್ರೀಮಾನ್ ಚೌಡಯ್ಯನವರ ಮಾರ್ಗದರ್ಶನದಲ್ಲಿ ಈ ಸಂಘವು ಪ್ರಾರಂಭವಾಗಿ ಒಳ್ಳೆ ಹೆಸರನ್ನು ತಂದಿದೆ. ಅವರ ಜೊತೆಯಲ್ಲಿ ಸಣ್ಣಪುಟ್ಟ ಕುಂದುಕೊರತೆ ಸಂಘದಲ್ಲಿದ್ದರೆ ಅದನ್ನ ಚರ್ಚಿಸಿ ಸ್ಥಳದಲ್ಲೇ ಪರಿಹಾರ ನೀಡುತ್ತಿದ್ದರು. ಆದ್ದರಿಂದ ಸಂಘಗಳಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಸಂಘವನ್ನು ಒಳ್ಳೆಯ ಅಭಿವೃದ್ಧಿಯತ್ತ ಕೊಂಡೊಯ್ಯಲು ತಮ್ಮ ಸಹಕಾರ ಮುಖ್ಯ .ಹಾಗೂ ನೂತನವಾಗಿ ಸಂಘದಲ್ಲಿ ನಿರ್ಮಾಣವಾಗಿರುವ ಕಟ್ಟಡದಲ್ಲಿ ಮೇಗಮಾರ್ಟ್ (ಮಳಿಗೆ) ಪ್ರಾರಂಭಿಸಿ ರೈತರಿಗೆ ಅನುಕೂಲ ವಾಗುವಂತಹ ಪದಾರ್ಥಗಳನ್ನು ನೀಡಿ ಎಂದು ತಿಳಿಸಿದರು.

ಮಂಡ್ಯ ಆರ್. ಎ .ಪಿ .ಸಿ .ಎಂ .ಎಸ್. ನ ನಿರ್ದೇಶಕ ಎಚ್ .ಎಸ್. ಯೋಗೀಶ್ ಕುಮಾರ್ ಪ್ರತಿಭಾ ಪುರಸ್ಕಾರ ಹಾಗೂ ಗೌರವಧನವನ್ನು ಮಕ್ಕಳು ಗೈರಾದ ಕಾರಣ ಅವರ ಪೋಷಕರಿಗೆ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ವಕೀಲರಾದ ಎಚ್ . ಎಂ. ವಿಜಯಕುಮಾರ್, ಗ್ರಾ.ಪಂ. ಅಧ್ಯಕ್ಷರಾದ ಎಂ. ಕೆ .ಅರ್ಪಿತ, ಉಪಾಧ್ಯಕ್ಷರಾದ ಎಚ್. ಎಂ .ನಾರಾಯಣ, ಡೈರಿ ಅಧ್ಯಕ್ಷರಾದ ಎಚ್ .ಬಿ .ಕೃಷ್ಣ, ಉಪಾಧ್ಯಕ್ಷರಾದ ದೊಡ್ಡ ಸಿದ್ದಯ್ಯ, ಹಾಗೂ ಸಂಘದ ಉಪಾಧ್ಯಕ್ಷರಾದ ಎಚ್. ಸಿ .ಶಿವಸಿದ್ದಯ್ಯ, ಮತ್ತು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಕೆ.ಎಚ್ .ಹರ್ಷವರ್ಧನ್ ಹಾಗೂ ಸಂಘದ ನಿರ್ದೇಶಕರು,ನೌಕರವರ್ಗದವರು, ಮತ್ತು ಸಂಘದ ಶೇರುದಾರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!