Friday, September 20, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಅಂಬೇಡ್ಕರ್ ಪರಿನಿಬ್ಬಾಣ ಕಾರ್ಯಕ್ರಮಕ್ಕೆ ಅಧಿಕಾರಿಗಳೇ ಗೈರು !

ಡಾ.ಬಿ.ಆರ್ ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆಗೆ ಕೆಲವು ಸರಕಾರಿ ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿದ್ದಕ್ಕೆ ಮಳವಳ್ಳಿ ತಾಲೂಕು ದಂಡಾಧಿಕಾರಿ ಕೆ.ಎನ್ ಲೋಕೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಮಳವಳ್ಳಿ ತಾಲೂಕು ಆಡಳಿತ ಮತ್ತು ಸಮಾಜದ ಕಲ್ಯಾಣ ಇಲಾಖೆ ವತಿಯಿಂದ ನಡೆದ ಅಂಬೇಡ್ಕರ್ ಪರಿನಿಬ್ಬಣ ದಿನಾಚರಣೆಯನ್ನು ಗೌರವಯುತವಾಗಿ ಆಚರಿಸಬೇಕು, ಆದರೆ ಇದರ ಜವಾಬ್ದಾರಿ ಇರುವ ಸರಕಾರಿ ಇಲಾಖೆಯ ಕೆಲವು ಅಧಿಕಾರಿಗಳೇ ಸಭೆಗೆ ಹಾಜರಾಗದಿದ್ದರೆ ಹೇಗೆ ? ಎಂದು ತಹಸೀಲ್ದಾರ್ ಕಿಡಿಕಾರಿದರು.

ತಾಲೂಕು ಪಂಚಾಯಿತಿ ಇ ಓ ಮಮತಾ, ಮುಖ್ಯಾಧಿಕಾರಿ ನಾಗರತ್ನ,ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಾಂತರಾಜು, ಟಿ ಎಚ್ಒ ವೀರಭದ್ರಪ್ಪ, ಸಾರ್ವಜನಿಕ ಆಡಳಿತ ಅಧಿಕಾರಿ ಸಂಜಯ್ ಸೇರಿದಂತೆ ಕೆಲವು ಅಧಿಕಾರಿಗಳು ಗೈರು ಹಾಜರಾಗಿದ್ದರು. ಅಂತಹ ಅಧಿಕಾರಿಗಳ ವಿವರ ಪಡೆದು ಅವರಿಗೆ ಅಂತಿಮ ನೋಟಿಸ್ ನೀಡಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಬಾಬಾ ಸಾಹೇಬರ ತತ್ವ ಸಿದ್ಧಾಂತ ಅಳವಡಿಸಿಕೊಳ್ಳಿ

ಪರಿನಿಬ್ಬಾಣ ದಿನಾಚರಣೆ ಮಾತನಾಡಿದ ತಹಸೀಲ್ದಾರ್ ಕೆ.ಎನ್ ಲೋಕೇಶ್ ಅವರು, ಬಾಬಾ ಸಾಹೇಬರ ತತ್ತ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅರಿತುಕೊಂಡರೆ ಶೋಷಿತ ವರ್ಗದವರು ಸಮಾಜದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಮಾರ್ಗದರ್ಶನ ಪಾಲಿಸಿದರೆ ಸಮಾಜ ಗೌರವಿಸುತ್ತದೆ.
ಬಾಬಾಸಾಹೇಬ ಅಂಬೇಡ್ಕರ್ ರಚಿಸಿದ ಸಂವಿಧಾನದ ಮಾರ್ಗದಲ್ಲಿಯೇ ದೇಶ ಮುನ್ನಡೆಯುತ್ತಿದೆ. ಅವರ ವಿಚಾರಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಕೃಷ್ಣಪ್ಪ, ಸಮಾಜ ಕಲ್ಯಾಣ ಅಧಿಕಾರಿ ಜನಾರ್ಧನ್, ಸಿ.ಡಿ. ಪಿ ಓ ದೀಪ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ನಾಗರಾಜು, ಕೋಳಿ ಸಾಕಾಣಿಕೆ ಸಂವರ್ಧನಾಧಿಕಾರಿ ಚಂದ್ರಶೇಖರ್, ಪಿಎಸ್ಐಗಳಾದ ಅಶೋಕ್, ಮಹೇಶ್ ಶರವಣ, ಎಸ್ ರೆಡ್ಡಿ ಸೇರಿದಂತೆ ಕೆಲವು ಅಧಿಕಾರಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!