Thursday, September 19, 2024

ಪ್ರಾಯೋಗಿಕ ಆವೃತ್ತಿ

ಶೀಘ್ರದಲ್ಲೇ 300 ಕೋಟಿ ರೂ. ಕ್ಲಬ್ ಸೇರಲಿರುವ ಕಾಂತಾರ

ಮಂಡ್ಯದ ಕಿರಗಂದೂರು ವಿಜಯ್ ನಿರ್ಮಾಣದ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿ ನಟ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕನ್ನಡ ಚಿತ್ರ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ನಿರ್ಮಿಸಿದ್ದು, ಪಂಚ ಭಾಷೆಗಳಿಂದ 289.21 ಕೋಟಿ ಗಳಿಕೆ ಮೂಲಕ ಶೀಘ್ರ 300 ಕೋಟಿ ಕ್ಲಬ್ ಸೇರಲಿದೆ.

ಮೊದಲು ಕನ್ನಡ ಭಾಷೆಯಲ್ಲಿ ಮಾತ್ರ ಕಾಂತಾರ ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಕಳೆದ ಸೆಪ್ಟೆಂಬರ್ 30ರಂದು ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾದ ಕಥೆ ಎಲ್ಲೆಡೆ ಹರಡಿದ ಪರಿಣಾಮ ನಿರ್ಮಾಪಕ ಕಿರಗಂದೂರು ವಿಜಯ್ ನಂತರ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಪ್ರಪಂಚದ್ಯಾಂತ ಬಿಡುಗಡೆ ಮಾಡಿದ್ದರು.

ಕರ್ನಾಟಕದಲ್ಲಿ ಕಳೆದ ಒಂದು ತಿಂಗಳಲ್ಲಿ 80 ಲಕ್ಷಕ್ಕೂ ಹೆಚ್ಚು ಮಂದಿ ಚಿತ್ರವನ್ನು ವೀಕ್ಷಿಸುವ ಮೂಲಕ ಅತಿ ಹೆಚ್ಚು ವೀಕ್ಷಣೆ ಪಡೆದ ಸಿನಿಮಾವಾಗಿ ಕಾಂತಾರ ಹೊರಹೊಮ್ಮಿದೆ. ಈ ಮೂಲಕ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. ಹೊಂಬಾಳೆ ಫಿಲಂಸ್‌ನ ನಿರ್ಮಾಣ ಸಂಸ್ಥೆಯ ಮೂಲಗಳು ಹೇಳುವಂತೆ ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ಗಡಿಯನ್ನು ಮುಟ್ಟಿದ್ದು, ಇದರಲ್ಲಿ ಅರ್ಧದಷ್ಟು ಗಳಿಕೆ ಕರ್ನಾಟಕದಿಂದಲೇ ಆಗಿದೆ.

ಇನ್ನು ತಮಿಳು,ತೆಲುಗು,ಮಲಯಾಳಂ, ಹಿಂದಿ ಭಾಷೆಗಳಲ್ಲಿ ಕಾಂತಾರ ಬಿಡುಗಡೆಯಾಗಿದ್ದು,ಎಲ್ಲೆಡೆ ಉತ್ತಮ ಗಳಿಕೆ ಮಾಡುತ್ತಿದೆ. ಕಾಂತಾರ ಸಿನಿಮಾ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದೆ.

ತಮಿಳಿನ ಖ್ಯಾತ ನಟರಾದ ರಜನಿಕಾಂತ್, ಧನುಷ್, ತೆಲುಗಿನ ರಾಜಮೌಳಿ ಕಾಂತಾರ ಸಿನಿಮಾದ ಕಥೆಯನ್ನು ಮೆಚ್ಚಿಕೊಂಡು ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!