Friday, September 20, 2024

ಪ್ರಾಯೋಗಿಕ ಆವೃತ್ತಿ

ತೇಜಸ್ವಿ ಬದುಕು- ಬರಹ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಮಾದರಿ – ಉಮೇಶ್ ದಡಮಹಳ್ಳಿ

ನುಡಿದಂತೆ‌ ಬಾಳಿದ ತೇಜಸ್ವಿ ಅವರ ಬದುಕು ಮತ್ತು‌ ಬರಹಗಳು ಸುಸ್ಥಿರ ಸಮಾಜ ನಿರ್ಮಾಣಕ್ಕೆ ಸದಾ ಮಾದರಿಯಾಗಿವೆ ಎಂದು ಅನಿಕೇತನ ಪ್ರತಿಷ್ಠಾನದ ಅಧ್ಯಕ್ಷ ಡಿ.ಉಮೇಶ್ ದಡಮಹಳ್ಳಿ ಅಭಿಪ್ರಾಯಿಸಿದರು.

ಮಳವಳ್ಳಿ ಸಮೀಪದ ಅಂತರವಳ್ಳಿ ಶ್ರೀ ಸಿದ್ದೇಶ್ವರ ಬೆಟ್ಟದ ಆವರಣದಲ್ಲಿ ಹಲಗೂರಿನ ಅನಿಕೇತನ‌ ಪ್ರತಿಷ್ಠಾನ ಹಾಗೂ ಭಾರತಿ ಕಾಲೇಜಿನ ಪದವಿ ಒಡನಾಡಿಗಳು ಸಹಯೋಗದಲ್ಲಿ ಭಾನುವಾರ ನಡೆದ ಪೂರ್ಣಚಂದ್ರ ತೇಜಸ್ವಿ-86 ನೆನಪಿನೊತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ‌ ಮಾತನಾಡಿದರು.

ಪೂಚಂತೆ ಅವರ ಸಾಹಿತ್ಯ ನೈಜತೆಯಿಂದ ಕೂಡಿದೆ. ಯುವ ಪೀಳಿಗೆಯು ಅವರ ಸಾಹಿತ್ಯದ ಆಕರ್ಷಣೆಗೆ ಒಳಗಾಗಿದೆ. ಸಾಹಿತ್ಯ ರಚನೆಯಲ್ಲಿ ನೇರತನ, ದಿಟ್ಟತನ ತೋರಿದ ಹೆಗ್ಗಳಿಕೆ ಪೂಚಂತೆಯವರದು. ಅವರ ಬರಹಗಳಲ್ಲಿನ ವೈಚಾರಿಕತೆ ಅನುಕರಣೀಯವಾದುದ್ದಾಗಿದೆ. ಅವರ ಬರಹಗಳಲ್ಲಿನ ಮೂಲ ಆಶಯ ಸಮಾಜಮುಖಿಯಾದುದ್ದು. ಸಮಸಮಾಜದ ನಿರ್ಮಾಣಕ್ಕೆ ಅವರ ಸಾಹಿತ್ಯ ದಿವ್ಯೌಷಧವಾಗಿದೆ ಎಂದು ಹೇಳಿದರು.

ಪೂಚಂತೆ ಅವರಿಗೆ ಪರಿಸರದ ಬಗ್ಗೆ ವಿಶೇಷ ಒಲವು. ಹೆಚ್ಚು ಜೀವಿತಾವಧಿ ಕಳೆದದ್ದೆ ಕಾಡು, ತೋಟಗಳ ನಡುವೆ. ಚಾರಣ ಮತ್ತು ಕೃಷಿ ಪ್ರಿಯರು. ಇಂದು ಅವರ ಜನ್ಮ ದಿನದ ನೆನಪಿಗಾಗಿ ಚಾರಣ, ಸಂವಾದ, ಫೋಟೋಗ್ರಫಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಂತಹ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಅವರ ಬಹುಮುಖಿ ವ್ಯಕ್ತಿತ್ವವನ್ನು ಮುಂದಿನ ಯುವ ಪೀಳಿಗೆಗೆ ಪರಿಚಯ ಮಾಡುವ ಕೆಲಸ ಹೆಚ್ಚು ಆಗಬೇಕಿದೆ ಎಂದು ಆಶಿಸಿದರು.

ಹಿರಿಯ ಮುಖಂಡ ಎಚ್.ಆರ್.ಶಿವಮಾದೇಗೌಡ ಮಾತನಾಡಿ, ಅನಿಕೇತನ ಪ್ರತಿಷ್ಠಾನ ಹಾಗು ಭಾರತಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಪೂಚಂತೆ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯವಾದುದ್ದಾಗಿದೆ. ಹಳೆಯ ಸ್ನೇಹಿತರು ಒಂದೆಡೆ ಸೇರಿ ಅರ್ಥಪೂರ್ಣ ಕಾರ್ಯಕ್ರಮ ಮಾಡುವುದು ಕೂಡ ಇಂದಿನ ಅಗತ್ಯವಾಗಿದೆ. ಈ ಮೂಲಕ ಆಯಸ್ಸು, ಆರೋಗ್ಯದ ಜೊತೆಗೆ ಸಾಮರಸ್ಯ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದರು.

ಸಾಹಿತಿ ಡಾ.ಬೆಳ್ಳೂರು ವೆಂಕಟಪ್ಪ, ಪ್ರಾಂಶುಪಾಲ ಕೆ.ಕೆ.ಚಂದ್ರಶೇಖರ, ಉಪನ್ಯಾಸಕ ಪುಟ್ಟಸ್ವಾಮಿ ಮಾತನಾಡಿದರು. ಭಾರತಿನಗರ ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಲಕ್ಷೀಶ್ ಹೊನ್ನಲಗೆರೆ, ಎಂಜಿನಿಯರ್ ಬಸವೇಶ್, ಬಿಜಿಎಸ್ ಹಾಸ್ಟೆಲ್ ವಾರ್ಡನ್ ಹನುಮಯ್ಯ, ಅಧೀಕ್ಷಕ ರಾಮಲಿಂಗಯ್ಯ ಎಸ್.ಬಿ, ಶಿಕ್ಷಕ ನವೀನ್ ಕುಮಾರ್, ವಕೀಲ ರಾಜೇಗೌಡ, ರಾಜು.ಎಚ್.ಎಸ್, ಗೀತಾ, ಸುವರ್ಣ, ಮಮತಾ, ಬಸವರಾಜು, ಕೋಡಿಪುರ ಸಿದ್ದರಾಜು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!