Saturday, September 28, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಶಾಸಕರ ಅಭಿವೃದ್ದಿ ರಾಜಕಾರಣಕ್ಕೆ ‘ಜೈ’ ಎಂದ ಕೆರಗೋಡು ಗ್ರಾಮಸ್ಥರು: ಹನುಮಧ್ವಜ ವಿವಾದಕ್ಕೆ ತಿಲಾಂಜಲಿ

ಕೆಲ ತಿಂಗಳ ಹಿಂದೆ ಮಂಡ್ಯದಲ್ಲಿ ತಾರಕ್ಕೇರಿದ್ದ ಕೆರಗೋಡು ಹನುಮ ಧ್ವಜ ವಿವಾದ ಪ್ರಕರಣವು ಕೊನೆಗೂ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ಕೆರಗೋಡು ಹನುಮಧ್ವಜದ ಪ್ರಕರಣದ ಮುಖ್ಯ ಅರ್ಜಿದಾರ ಹಾಗೂ   ಗ್ರಾ.ಪಂ.ಸದಸ್ಯ ಯೋಗೇಶ್ ಹಾಗೂ ಮತ್ತೊಬ್ಬ ಗ್ರಾ.ಪಂ.ಸದಸ್ಯ ರಾಜೇಶ್ ಶಾಸಕರ ಅಭಿವೃದ್ದಿ ರಾಜಕಾರಣವನ್ನು ಮೆಚ್ಚಿ ಅವರಿಗೆ ಬೆಂಬಲ ನೀಡುತ್ತಿದ್ದೇವೆಂದು ಘೋಷಿಸಿದರು.

ಕೆರಗೋಡು ಗ್ರಾಮಸ್ಥರ ಪರವಾಗಿ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹನುಮಧ್ವಜ ವಿವಾದದಿಂದ ಹಿಂದೆ ಸರಿದಯುತ್ತಿದ್ದೇವೆ, ಅಭಿವೃದ್ಧಿಗಾಗಿ ಹನುಮ ಧ್ವಜ ಪ್ರಕರಣ ಕೈಬಿಡಲು ಮನವಿ ಮಾಡುತ್ತೇವೆ ಎಂದರು.

ವಿರುದ್ದ ಇದ್ದವರೇ ಪರವಾಗಿ ನಿಂತರು 

ಶಾಸಕ ರವಿಕುಮಾರ್ ವಿರುದ್ದ ತೊಡೆತಟ್ಟಿದವರೇ ಈಗ ಶಾಸಕರ ಅಭಿವೃದ್ದಿಯನ್ನು ಕಂಡು ಪರವಾಗಿ ನಿಂತಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಈ ಮೂಲಕ ಹನುಮಧ್ವಜ ವಿವಾದ ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ಕೆರಗೋಡು ಗ್ರಾಮಸ್ಥರು ಶಾಂತಿ ಬಯಸುತ್ತಿದ್ದಾರೆ ಎಂಬುದನ್ನು ತಿಳಿಸುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಹನುಮ ಧ್ವಜ ವಿವಾದ ಆರಂಭವಾಯಿತು, ಆದರೆ ಈ ಸಮಯದಲ್ಲಿ ಧ್ವಜ ಬಿಟ್ಟು ಅಭಿವೃದ್ಧಿಯ ಹಿಂದೆ ನಡೆಯುತ್ತಿದ್ದೇವೆ ಎಂದು ಯೋಗೇಶ್ ಹೇಳಿದರು.

ಗ್ರಾ.ಪಂ.ಸದಸ್ಯ ಹಾಗೂ ಹನುಮ ಧ್ವಜ ಪರವಾದ ಅರ್ಜಿದಾರ ಯೋಗೇಶ್ ಮಾತನಾಡಿ, ಕಳೆದ ವರ್ಷ ಹನುಮ ಧ್ವಜದ ಪರವಾಗಿ ಗ್ರಾ.ಪಂ ಗೆ ಅರ್ಜಿ ಕೊಟ್ಟಿದೆ. ಗ್ರಾ.ಪಂ. ನ ಕಾರ್ಯಾಂಗದ ಮುಖ್ಯಸ್ಥರು ಸಾರ್ವಜನಿಕ ಜಾಗದಲ್ಲಿ ಹನುಮಧ್ವಜ ಹಾಕುವ ಬಗ್ಗೆ ಮಾಹಿತಿ ಕೊಟ್ಟಿರಲಿಲ್ಲ, ಅರ್ಜಿ ಪಡೆದಿದ್ದರು, ಸದಸ್ಯರು ಅನುಮತಿ ಕೊಟ್ಟ ನಂತರ ಹನುಮ ಧ್ವಜ ಹಾರಿಸಲಾಗಿತ್ತು. ಹನುಮ ಧ್ವಜದ ಬಗ್ಗೆ ಪ್ರತಿಭಟನೆ ನಡೆದಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಅಂದು ಅಧಿಕಾರಿಗಳು ಎಚ್ಚರಿಕೆಯ ನಡೆ ಇಟ್ಟಿದ್ದರೆ, ವಿವಾದವೇ ಉಂಟಾಗುತ್ತಿರಲಿಲ್ಲ ಎಂದರು.

ಶಾಸಕರ ಅಭಿವೃದ್ಧಿಗೆ ಫಿದಾ 

ಕಳೆದ 25 ವರ್ಷಗಳಿಂದ ಕೆರಗೋಡು ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ರವಿಕುಮಾರ್ ಅವರೇ ಇದ್ದಾರೆ. ಅಭಿವೃದ್ಧಿ ಬಗ್ಗೆ ನಮ್ಮ ಜೊತೆ ಮಾತನಾಡಿದ್ದಾರೆ. ಕೆರಗೋಡು ಗ್ರಾಮ ಪುರಸಭೆ ಮಾಡುವ ಭರವಸೆ ಕೊಟ್ಟಿದ್ದಾರೆ. ಆದ್ದರಿಂದ
ಅಭಿವೃದ್ಧಿ ದೃಷ್ಟಿಯಿಂದ ಶಾಸಕರ ಬೆಂಬಲಕ್ಕೆ ನಿಂತಿದ್ದೇವೆ ಎಂದು ತಿಳಿಸಿದರು.

ಶಾಸಕರ ನಡೆ ಜಾತಿ, ಧರ್ಮದ ಪರ ಇಲ್ಲ ಸಾಮಾಜಿಕ ನ್ಯಾಯದ ಪರವಾಗಿದೆ, ಅಭಿವೃದ್ಧಿಗಾಗಿ ಶಾಸಕರ ನಡೆಗೆ ಸ್ವಾಗತ ಮಾಡಿದ್ದೇವೆ. ಗ್ರಾ.ಪಂ.ವ್ಯಾಪ್ತಿಯಲ್ಲಿ ಲೋಪದೋಷಗಳು ಆಗಿವೆ. ಸಾರ್ವಜನಿಕರು ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

60 ಜನ ಮೇಲೆ ಕೇಸ್ 

ಹನುಮ ಧ್ವಜ ಪ್ರಕರಣದಲ್ಲಿ 60 ಜನ ಮೇಲೆ ಕೇಸ್ ಆಗಿದೆ, ಅವರು ವಿದ್ಯಾವಂತ ಯುವಕರು ಇದ್ದಾರೆ
ಸರ್ಕಾರಿ ಕೆಲಸದ ಅವಕಾಶ ಸಿಕ್ಕರೆ ವಿದ್ಯಾವಂತರಿಗೆ ತೊಂದರೆ ಆಗುತ್ತೆ, ಕೆರಗೋಡು ಕೇಸ್ ವಜಾ ಮಾಡುವ ಬಗ್ಗೆ ಚರ್ಚೆಯಾಗಿದೆ. ನಮ್ಮ ಭಾಗದಲ್ಲಿ ಶಾಂತಿ, ಜಾತ್ಯಾತೀತತೆಯಿಂದ ಬೆಳೆದಂತ ಜನರಿದ್ದಾರೆ. ಕಳೆದ 50 ವರ್ಷಗಳಿಂದ ಯಾವುದೇ ಅಟ್ರೆಸಿಟಿ ಕೇಸ್ ಆಗಿಲ್ಲ ಎಂದು ಹೇಳಿದರು.

ಕೆರಗೋಡು ಹನುಮ ಧ್ವಜದ ಕೇಸ್ ವಾಪಸ್ ಪಡೆಯಬೇಕು, ಈ ಬಗ್ಗೆ ಶಾಸಕರು ಭರವಸೆ ಕೊಟ್ಟಿದ್ದಾರೆ.
ಕೆರಗೋಡು ಹನುಮ ಧ್ವಜ ಪ್ರತಿಭಟನೆಯಲ್ಲಿ ಹೊರಗಿನವರು ಕೂಡ ಭಾಗಿಯಾಗಿದ್ದಾರೆ. ಇದರ ಬಗ್ಗೆ ನಮಗೆ ಗೊತ್ತಿರಲಿಲ್ಲ, ಇದರ ಹಿಂದೆ ಷಡ್ಯಂತ್ರ ಇದೆ. ನಮ್ಮ ಭಾವನೆಗೆ ಧಕ್ಕೆ ಬಂತು ಪ್ರತಿಭಟನೆ ಮಾಡಿದ್ವಿ ಹೊರಗಿನವರನ್ನ ನಾವು ಕರೆಸಿರಲಿಲ್ಲ, ಕೆರಗೋಡು ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಬೇಕು. ಅಭಿವೃದ್ಧಿಯಾಗಬೇಕು. ಶಾಸಕರ ಅಭಿವೃದ್ಧಿ ಪರ ಇದ್ದಾರೆ ಅವರ ಪರ ನಾವೀದ್ದೇವೆ. ಶ್ರೀರಾಮ ಭಜನಾ ಮಂಡಳಿಯವರು ಕೂಡ ನಿರ್ಧಾರ ತಿಳಿಸುತ್ತಾರೆ. ಕೆಲವರು ಈ ಪ್ರಕರಣವನ್ನು ರಾಜಕೀಕರಣ ಗೊಳಿಸಲು ಮುಂದಾಗಿದ್ದಾರೆ, ಹನುಮ ಧ್ವಜ ವಿವಾದ ಜೀವಂತವಾಗಿರಲು ಷಡ್ಯಂತ್ರ ನಡೆದಿದೆ, ನಾವು ನಮ್ಮ ನಿರ್ಧಾರ ಪ್ರಕಟಿಸಿದ್ದೇವೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!