Friday, September 20, 2024

ಪ್ರಾಯೋಗಿಕ ಆವೃತ್ತಿ

ಜಾಮೀಯ ಮಸೀದಿಯ ಸುತ್ತ ಖಾಕಿ ಕಣ್ಗಾವಲು

ಶ್ರೀರಂಗಪಟ್ಟಣದಲ್ಲಿ ಜೂನ್ 4 ರಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಹನುಮಾನ್ ಮಂದಿರ ಚಲೋ ನಡೆಸಲು ಕರೆ ನೀಡಿರುವ ಹಿನ್ನಲೆಯಲ್ಲಿ ಜಾಮೀಯ ಮಸೀದಿ ಸುತ್ತಲೂ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.

ಮಸೀದಿಯ ಸುತ್ತಲೂ ಬ್ಯಾರೀಕೇಡ್ ಅಳವಡಿಸಿ ಪೊಲೀಸರನ್ನು ನಿಯೋಜಿಸಲಾಗಿದೆ. ನಾಳೆ ಹಿಂದೂ ಸಂಘಟನೆಗಳು ಶ್ರೀರಂಗಪಟ್ಟಣದ ಕುವೆಂಪು ವೃತ್ತದಿಂದ ಜಾಮಿಯಾ ಮಸೀದಿಯವರೆಗೆ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳಲ್ಲಿದ್ದಾರೆ ಎಂದು ಬಜರಂಗದಳದ ಬಾಲು ತಿಳಿಸಿದ್ದು, ಪೋಲೀಸರು ಏನೇ ಮಾಡಿದರೂ ಕಾರ್ಯಕ್ರಮ ರದ್ದು ಮಾಡುವುದಿಲ್ಲ ಎಂದು ಹೇಳಿದ್ದಾರೆ.

ನಿಷೇಧಾಜ್ಞೆ ಜಾರಿ

ಕೆಲ ಹಿಂದೂಪರ ಸಂಘಟನೆಗಳು ಶ್ರೀರಂಗಪಟ್ಟಣ ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಮಂಡ್ಯ ಜಿಲ್ಲಾಧಿಕಾರಿ ಅಶ್ವತಿ ಅವರು 144 ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಜೂನ್ 3 ರ ಸಂಜೆ 6 ಗಂಟೆಯಿಂದ ಜೂನ್ 5 ರ ಬೆಳಿಗ್ಗೆ 6 ಗಂಟೆ ತನಕ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.

ಶ್ರೀರಂಗಪಟ್ಟಣ ಪುರಸಭೆಯ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟವಿರುವುದಿಲ್ಲ. ಜೊತೆಗೆ ವಾರದ ಸಂತೆ ಕೂಡ ಮುಂದೂಡಲಾಗಿದೆ. ನಾಳೆ ಬದಲು ಭಾನುವಾರ ಸಂತೆ ಇರಲಿದೆ. ನೂರಾರು ಪೊಲೀಸರನ್ನು ಶ್ರೀರಂಗಪಟ್ಟಣದ ಹಲವು ಭಾಗಗಳಲ್ಲಿ ನಿಲ್ಲಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಡಿಸಿ ಅಶ್ವಥಿ, ಎಸ್ ಪಿ ಯತೀಶ್ ಹಾಗು ಉಪ ವಿಭಾಗಾಧಿಕಾರಿ ಶಿವಾನಂದ ಮೂರ್ತಿ ಅವರು ಶ್ರೀರಂಗಪಟ್ಟಣಕ್ಕೆ ಬೇಟಿನೀಡಿ, ಜಾಮೀಯ ಮಸೀದಿ ಹಾಗು ಮೂಡಲಬಾಗಿಲು ಆಂಜನೇಯ ದೇವಸ್ಥಾನದ ಬಳಿ ಬಿಗಿ ಬದ್ರತೆ ಮಾಡಿಸುವುದಾಗಿ ಸೂಚಿನೆ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!