Friday, September 20, 2024

ಪ್ರಾಯೋಗಿಕ ಆವೃತ್ತಿ

ಸಿದ್ದರಾಮಯ್ಯನವರಿಗೆ ರನ್ನಿಂಗ್ ಮಾಡಿಸಿದ ರಾಹುಲ್ ಗಾಂಧಿ

ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಕಾರ್ಯಕರ್ತರಲ್ಲಿ, ಜನರಲ್ಲಿ ಉತ್ಸಾಹ ಮೂಡಿಸಲು ರಾಹುಲ್ ಗಾಂಧಿ ಆಗಾಗ ಕೆಲವು ಅಚ್ಚರಿಯ ಹೆಜ್ಜೆಗಳನ್ನು ಇಡುತ್ತಾರೆ.

ಇಂದು ಕೂಡ ಊಟದ ವಿರಾಮದ ಬಳಿಕ ಆರಂಭಗೊಂಡ ಸಂಜೆಯ ಪಾದಯಾತ್ರೆ ನಡುವೆ ರಾಹುಲ್ ಗಾಂಧಿ ಸ್ವಲ್ಪ ದೂರ ಓಡಿದರು. ಈ ವೇಳೆ ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರ ಕೈಯನ್ನು ಹಿಡಿದುಕೊಂಡು ಓಡಿದರು. ಇದನ್ನು ಕಂಡು ಪಾದಯಾತ್ರೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಪಕ್ಷದ ಹಿರಿಯ, ಕಿರಿಯ ಮುಖಂಡರು ಕಾರ್ಯಕರ್ತರು, ಪೊಲೀಸರು ಸಹ ಓಡಿದರು. ಕಾರ್ಯಕರ್ತರು ಕೇಕೆ ಹಾಕಿ ಹರ್ಷ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರ ರನ್ನಿಂಗ್ ನೋಡಿ ರಾಹುಲ್ ಗಾಂಧಿ ಅವರ ಬಿಗಿದಪ್ಪಿ ಭೇಷ್ ಎಂದರು. ಸಿದ್ದರಾಮಯ್ಯ ಕೂಡ ಮುಗುಳ್ಳಕ್ಕರು. ಸದ್ಯ ಈ ರನ್ನಿಂಗ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!