Thursday, September 19, 2024

ಪ್ರಾಯೋಗಿಕ ಆವೃತ್ತಿ

“ಜಾನಪದ ತೇರು” ಸಂಚಾರಿ ರಥಕ್ಕೆ ಸಂಭ್ರಮದ ಸ್ವಾಗತ

ಮಂಡ್ಯ ನಗರದಲ್ಲಿ ರಾಜ್ಯಮಟ್ಟದ ಜಾನಪದ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆಯಲ್ಲಿ ಸಂಚರಿಸಿದ “ಜಾನಪದ ತೇರು” ಸಂಚಾರಿ ರಥಕ್ಕೆ ಸ್ವಾಗತ ನೀಡಿದ ಜಾನಪದ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು.. ತಮಟೆಯ ಸದ್ದಿಗೆ ಹೆಜ್ಜೆಹಾಕಿ ನೃತ್ಯ ಮಾಡಿ ಸಂಭ್ರಮಿಸಿದರು.

ಡಿ.9 ಮತ್ತು 10 ರಂದು ಅಖಿಲ ಕರ್ನಾಟಕ ಜಾನಪದ ಸಮ್ಮೇಳನವು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಜಾನಪದ ತೇರು ಸಂಚಾರಿ ರಥವು ಕಿಕ್ಕೇರಿಯ ಮೂಲಕ ಕೆ.ಆರ್.ಪೇಟೆ ಪಟ್ಟಣಕ್ಕೆ ಆಗಮಿಸಿದಾಗ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಕತ್ತರಘಟ್ಟವಾಸು, ನಿಕಟಪೂರ್ವ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ನಗರ ಬಿಜೆಪಿ ಮಹಿಳಾ ಅಧ್ಯಕ್ಷೆ ಚಂದ್ರಕಲಾರಮೇಶ್ ಮತ್ತು ಕೆಪಿಎಸ್ ಸ್ಕೂಲ್ ಪ್ರಾಂಶುಪಾಲರಾದ ಡಿ.ಬಿ.ಸತ್ಯ ಅವರ ನೇತೃತ್ವದಲ್ಲಿ ಸ್ವಾಗತ ನೀಡಲಾಯಿತು..

ನಮ್ಮ ಸಂಸ್ಕೃತಿಯ ಮೂಲ ಬೇರು ಜಾನಪದದಲ್ಲಿದೆ. ಜಾನಪದ ಕಲೆಗಳಿಂದಾಗಿ ನಮ್ಮ ಜೀವನದ ಮೌಲ್ಯಗಳು ಹೆಚ್ಚಾಗಿವೆ ಆದ್ದರಿಂದ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ವಾಸು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷೆ ಚಂದ್ರಕಲಾ ರಮೇಶ್, ಮಹಿಳಾ ಹೋರಾಟಗಾರ್ತಿ ಕತ್ತರಘಟ್ಟ ಮಂಜುಳಾ, ಅಶ್ವತ್ಥ ಲಕ್ಷ್ಮೀ, ಕೆ.ಎಸ್.ಸೋಮಶೇಖರ್, ಕೆಪಿಎಸ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಡಿ.ಬಿ.ಸತ್ಯ, ಪ್ರಾಂಶುಪಾಲ ಲೇಪಾಕ್ಷಿಗೌಡ, ಉಪನ್ಯಾಸಕರಾದ ಡಿ.ಟಿ.ಪುಲಿಗೆರಯ್ಯ, ರೇವಣ್ಣ, ,ವಾಸುದೇವ, ಚಾಶಿ ಜಯಕುಮಾರ್ ಭಾಗವಹಿಸಿದ್ದರು..

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!