Tuesday, June 25, 2024

ಪ್ರಾಯೋಗಿಕ ಆವೃತ್ತಿ

ಪ್ರಾಂಶುಪಾಲರ ಮೇಲೆ ಹಲ್ಲೆಗೆ ಮುಂದಾದ ಶಾಸಕ

ಮಂಡ್ಯ ನಗರದಲ್ಲಿ ಇಂದು ನಡೆದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಲೋಕಾರ್ಪಣೆ ಸಂದರ್ಭದಲ್ಲಿ ಶಾಸಕ ಎಂ. ಶ್ರೀನಿವಾಸ್ ಅವರು ಪ್ರಾಂಶುಪಾಲ ನಾಗಾನಂದ ಅವರ ಮೇಲೆ ಹಲ್ಲೆಗೆ ಮುಂದಾದ ಘಟನೆ ನಡೆಯಿತು.

ಎಂ. ಶ್ರೀನಿವಾಸ್ ಅವರು ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಉದ್ಘಾಟಿಸಿ ಒಳಗೆ ಪ್ರವೇಶ ಮಾಡಿದರು ಈ ಸಂದರ್ಭದಲ್ಲಿ ಪ್ರಾಂಶುಪಾಲ ನಾಗಾನಂದ ರವರು ಸಮಯಕ್ಕೆ ಸರಿಯಾಗಿ ಬಂದು ಕೈಗಾರಿಕಾ ತರಬೇತಿ ಸಂಸ್ಥೆಯ ಬಗ್ಗೆ ವಿವರಣೆ ನೀಡಲಿಲ್ಲವೆಂದು ಕೋಪಗೊಂಡ ಶಾಸಕರು ಅವರ ಮೇಲೆ ಎರಡು, ಮೂರು ಬಾರಿ ಕೈಯೆತ್ತಿ ಹಲ್ಲೆ ನಡೆಸಲು ಮುಂದಾದರು.

ಆಗ ಪ್ರಾಂಶುಪಾಲ ನಾಗಾನಂದ ಅವರು ಇರಲಿ ಇರಲಿ ಎಂದು ತಪ್ಪಿಸಿಕೊಳ್ಳುತ್ತಿದ್ದರು‌. ಕೊನೆಗೆ ನಾಗಾನಂದ ಅವರ ತೋಳಿಗೆ ನಿಧಾನವಾಗಿ ಒಂದೇಟು ಹಾಕಿದರು.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಐಶ್ವರ್ಯ, ಮೈಷುಗರ್ ಕಾರ್ಖಾನೆ ಅಧ್ಯಕ್ಷ ಶಿವಲಿಂಗೇಗೌಡ, ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!