Friday, September 20, 2024

ಪ್ರಾಯೋಗಿಕ ಆವೃತ್ತಿ

ನಾಳೆ ಕರ್ನಾಟಕ ಪ್ರವೇಶಿಸಲಿದೆ ಭಾರತ್ ಜೋಡೋ ಯಾತ್ರೆ

ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಆರಂಭಿಸಿರುವ  ಭಾರತ ಜೋಡೋ ಯಾತ್ರೆ ಸೆ.30ರ ಮಧ್ಯಾಹ್ನದ ವೇಳೆಗೆ ಕೇರಳ ಗಡಿಯನ್ನು ದಾಟಿ ಕರುನಾಡಿಗೆ ಪ್ರವೇಶಿಸಲಿದೆ.

ಕಮ್ಯೂನಿಸ್ಟರ ಕೋಟೆಯಾಗಿರುವ ಕೇರಳದಲ್ಲಿ ಭಾರತ್ ಜೋಡೋ ಯಾತ್ರೆಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ. ರಾಹುಲ್ ಅವರ ಜೊತೆಯಲ್ಲಿ ಸಾವಿರಾರು ಕಾರ್ಯಕರ್ತರು ಜೊತೆ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಕೇರಳ ಜನತೆಯ ಪ್ರೀತಿ, ಅಭಿಮಾನಕ್ಕೆ ರಾಹುಲ್ ಗಾಂಧಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಎಐಸಿಸಿ ಮುಖಂಡ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ ಜೋಡೋ ಯಾತ್ರೆಯು 22ನೇ ದಿನಕ್ಕೆ ಕಾಲಿಟ್ಟಿದೆ. ಕೇರಳದಲ್ಲಿ ಇಂದು ಯಾತ್ರೆಯ ಕೊನೆಯ ದಿನ ರಾಹುಲ್ ಗಾಂಧಿ ತಮ್ಮ ಅನೇಕ ಬೆಂಬಲಿಗರು, ಪಕ್ಷದ ಕಾರ್ಯಕರ್ತರೊಂದಿಗೆ ಕೇರಳದಲ್ಲಿ ಅಂತಿಮ ದಿನದ ನಡಿಗೆ ಆರಂಭಿಸಿದರು.

ರಾಹುಲ್ ಗಾಂಧಿ ಗುರುವಾರ (ಸೆ.29) ವೇಳೆಗೆ ಕೇರಳದ ಚುಂಗಾರದ ಮಾರ್ಗೋಮಾ ಕಾಲೇಜು ಜಂಕ್ಷನ್‌ನಿಂದ  ಪಾದಯಾತ್ರೆ ಆರಂಭಿಸಿದರು. ಇಂದು ಮಧ್ಯಾಹ್ನ ಯಾತ್ರೆಯು ತಮಿಳುನಾಡನ್ನು ಪ್ರವೇಶಿಸಲಿದೆ. ವಾಜಿಕಡವುನಿಂದ ರಾಹುಲ್ ಗಾಂಧಿ ಅವರು ತಮಿಳುನಾಡಿನ ಗುಡಲೂರಿನಲ್ಲಿರುವ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ಕಾರಿನಲ್ಲಿ ಪ್ರಯಾಣಿಸಲಿದ್ದಾರೆ ಯಾತ್ರೆಯು ಗುಡಲೂರಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಿಂದ ಸಂಜೆ 5 ಗಂಟೆಗೆ ಪುನರಾರಂಭಗೊಳ್ಳಲಿದೆ, ಅಲ್ಲಿ ಸುಮಾರು 5.5 ಕಿಮೀ ಕ್ರಮಿಸಿದ ನಂತರ ಗುಡಲೂರು ಬಸ್ ನಿಲ್ದಾಣದಲ್ಲಿ ದಿನವನ್ನು ಅಂತ್ಯಗೊಳಿಸಲಾಗುತ್ತದೆ.

ಭಾರತ ಜೋಡೋವಿನ 22 ನೇ ದಿನ ಕೇರಳದಲ್ಲಿ ಕೊನೆಯ ದಿನವಾಗಿದೆ. ಇಂದು ಬೆಳಿಗ್ಗೆ ಪಾದಯಾತ್ರಿಗಳು ನಿರಂಬೂರ್‌ನಿಂದ ವಾಜಿಕಡವುವರೆಗೆ ಸಾಗುತ್ತಿದ್ದಾರೆ. ವಾಜಿಕಟ್ಟೆವುನಿಂದ ನಾವು ವಾಹನದ ಮೂಲಕ ನೀಲಗಿರಿ ಬೆಟ್ಟಗಳನ್ನು ಹಾದು ತಮಿಳುನಾಡಿನ ಗುಡಲೂರಿಗೆ ಪಯಣಿಸುತ್ತೇವೆ ಕೇರಳದ ಜನರ ಪ್ರೀತಿ, ಅಭಿಮಾನ ಮತ್ತು ಅದ್ಭುತ ಪ್ರತಿಕ್ರಿಯೆಗಳಿಗಾಗಿ ನಾವು ಅವರಿಗೆ ಕೃತಜರಾಗಿರುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂವಹನಗಳ ಉಸ್ತುವಾರಿ ಜೈರಾಮ್ ರಮೇಶ್ ಟ್ವಿಟ್ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!