Friday, September 20, 2024

ಪ್ರಾಯೋಗಿಕ ಆವೃತ್ತಿ

ಆಂಧ್ರಪ್ರದೇಶ| ರೈಲು ಅಪಘಾತ ಪ್ರಕರಣ; ಚಾಲಕರು ಕ್ರಿಕೆಟ್‌ ನೋಡುತ್ತಿದ್ದದ್ದೇ ಅಪಘಾತಕ್ಕೆ ಕಾರಣ !

ಸಿಗ್ನಲ್ ತಪ್ಪಿದ ರೈಲು ಮತ್ತೊಂದು ರೈಲಿಗೆ ಢಿಕ್ಕಿ ಹೊಡೆದು 14 ಪ್ರಯಾಣಿಕರು ಸಾವನ್ನಪ್ಪಿದ್ದ ಪ್ರಕರಣದ ಬಗ್ಗೆ ರೈಲ್ವೆ ಸಚಿವರು ಮಾಹಿತಿ ನೀಡಿದ್ದು, “ರೈಲಿನ ಲೋಕೋ ಪೈಲೆಟ್ (ರೈಲು ಚಾಲಕರು) ಕ್ರಿಕೆಟ್‌ ನೋಡುತ್ತಿದ್ದರು. ಹೀಗಾಗಿಯೇ ಘಟನೆ ನಡೆದಿದೆ” ಎಂದು ಹೇಳಿದ್ದಾರೆ.
“ಅಕ್ಟೋಬರ್‌ನಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಭಾರತ ಮತ್ತು ಇಂಗ್ಲೆಂಡ್‌ ನಡುವೆ ನಡೆದ ಪಂದ್ಯವನ್ನು ಲೋಕೋ ಪೈಲಟ್ ಮತ್ತು ಸಹ ಲೋಕೋ ಪೈಲಟ್‌ ವೀಕ್ಷಿಸಿತ್ತಾ, ಕ್ರಿಕೆಟ್‌ ಎಡೆಗೆ ವಿಚಲಿತರಾದ ಕಾರಣ, ಘಟನೆ ನಡೆದಿದೆ” ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ ಎಂದು ‘ಪಿಟಿಐ’ ವರದಿ ಮಾಡಿದೆ.

“ಲೋಕೋ ಪೈಲಟ್‌ಗಳು ಮತ್ತು ಸಹಾಯಕ ಪೈಲಟ್‌ಗಳು ರೈಲನ್ನು ಓಡಿಸುವಲ್ಲಿ ಸಂಪೂರ್ಣವಾಗಿ ಗಮನಹರಿಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಖಾತ್ರಿ ಪಡೆಸಿಕೊಳ್ಳವು ವ್ಯವಸ್ಥೆಯನ್ನು ರೂಪಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು ಚಾಲಕ ಇಲ್ಲದೆ ಸರಕು ರೈಲು 70 ಕಿಲೋಮೀಟರ್ (40 ಮೈಲುಗಳು) ಪ್ರಯಾಣಿಸಿದ ನಂತರ ಅಧಿಕಾರಿಗಳು ಸ್ಟೇಷನ್ ಮಾಸ್ಟರ್ ಮತ್ತು ಇತರ ಮೂವರು ಉದ್ಯೋಗಿಗಳನ್ನು ವಜಾ ಮಾಡಿದ್ದಾರೆ. ಆ ಘಟನೆಯಿಂದಾಗಿ ಸುಮಾರು 50 ರೈಲುಗಳು ಎರಡು ಗಂಟೆಗಳ ಕಾಲ ನಾನಾ ನಿಲ್ದಾಣಗಳಲ್ಲಿ ನಿಂತು, ಪ್ರಮಾಣದಲ್ಲಿ ಅಸ್ಥವ್ಯಸ್ಥವಾಗಿತ್ತು. ಹೀಗಾಗಿ, ಅವರನ್ನು ವಜಾಗೊಳಿಸಲಾಗಿದೆ.

ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಭಾರತವೂ ಒಂದಾಗಿದೆ. ಆದರೆ, ಇತ್ತೀಚಿನ, ವರ್ಷಗಳಲ್ಲಿ ಹಲವಾರು ರೈಲ್ವೇ ಅನಾಹುತಗಳು ನಡೆದಿವೆ. 1981ರಲ್ಲಿ ಬಿಹಾರದಲ್ಲಿ ಸೇತುವೆಯನ್ನು ದಾಟುವಾಗ ರೈಲು ಹಳಿತಪ್ಪಿದ್ದರಿಂದ ಅಂದಾಜು 800 ಜನರು ಸಾವನ್ನಪ್ಪಿದರು. 2023ರ ಜೂನ್‌ನಲ್ಲಿ ಒಡಿಶಾ ರಾಜ್ಯದಲ್ಲಿ ಮೂರು ರೈಲುಗಳ ನಡುವೆ ಢಿಕ್ಕಿಯಾಗಿ ಸುಮಾರು 300 ಜನರು ಸಾವನ್ನಪ್ಪಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!