Friday, July 12, 2024

ಪ್ರಾಯೋಗಿಕ ಆವೃತ್ತಿ

ವರ್ಗಾವಣೆಗೊಂಡ ಅಧಿಕಾರಿಗಳಿಗೆ ಅಭಿನಂದನೆ

ಬ್ಯಾಂಕ್ ಆಫ್ ಬರೋಡದ ಪ್ರಾದೇಶಿಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಆರ್ ಕಪಿಲೇಶ್ ಹಾಗೂ ಉಪ ಪ್ರಾದೇಶಿಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಸನಾತನ ಸತುವ ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಮಂಡ್ಯ ನಗರದ ನೂರಡಿ ರಸ್ತೆಯಲ್ಲಿರುವ ಇಂಟೆಗ್ರಾ ಸಂಸ್ಥೆಯ ಸಭಾಂಗಣದಲ್ಲಿ ಅಭಿನಂದಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಕೆ.ಆರ್ ಕಪಿಲೇಶ್ ಅವರು ಮಾತನಾಡಿ, ಮಂಡ್ಯ ಕ್ಷೇತ್ರದಲ್ಲಿ ಕೆಲಸ ಮಾಡಿರುವುದು ತೃಪ್ತಿ ತಂದಿದೆ.ನನ್ನ ಅವಧಿಯಲ್ಲಿ ಹಲವಾರು ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದೇನೆ.
ಸತತ ಪರಿಶ್ರಮದಿಂದ ಮಂಡ್ಯ ಕ್ಷೇತ್ರಕ್ಕೆ ಒಂದು ಉತ್ತಮವಾದ ಹೆಸರು ಕೊಡುವುದಕ್ಕೆ ಸಾಧ್ಯವಾಯಿತು ಎಂದರು.

ನನ್ನ ಅವಧಿಯಲ್ಲಿ ಪ್ರತಿಯೊಬ್ಬರು ಸೂಕ್ತವಾಗಿ ಸಹಕರಿಸಿದರು. ಮಂಡ್ಯ ಕ್ಷೇತ್ರ ಒಂದು ಗ್ರಾಮೀಣ ಕ್ಷೇತ್ರ, ಇಲ್ಲಿ ಎಷ್ಟೋ ವಿಷಯಗಳನ್ನು ಹೊಸದಾಗಿ ಕಲಿಯುವುದಕ್ಕೆ ಅವಕಾಶ ದೊರೆಯಿತು. ಇದುವರೆಗೂ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಆ ಅವಕಾಶ ಇಲ್ಲಿ ಸಿಕ್ಕಿತು ಎಂದರು.

ಇಂಟೆಗ್ರಾ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕ ಮೋಹನ್, ಲೀಡ್ ಬ್ಯಾಂಕ್ ಮ್ಯಾನೇಜರ್ ಎಂ.ಪಿ ದೀಪಕ್, ಆರ್‍ಸೆಟಿ ನಿರ್ದೇಶಕ ವಿವೇಕ್, ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕರಾದ ಪ್ರಶಾಂತ್, ಗಿರೀಶ್ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!