Friday, September 20, 2024

ಪ್ರಾಯೋಗಿಕ ಆವೃತ್ತಿ

ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಣೆ

ಮದ್ದೂರು ತಾಲ್ಲೂಕಿನ ಕೆಸ್ತೂರು ವ್ಯಾಪ್ತಿಯಲ್ಲಿ ಕ್ಷಯರೋಗದಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಉಚಿತವಾಗಿ ಒಂದು ತಿಂಗಳಿಗೆ ಆಗುವಷ್ಟು ಆಹಾರ ಕಿಟ್ ಗಳನ್ನು ದಾನಿಗಳಾದ ಕೆಸ್ತೂರು ದಾಸೇಗೌಡ ಅವರು ವಿತರಿಸಿದರು.

ನಂತರ ಮಾತನಾಡಿದ ಕೆಸ್ತೂರು ದಾಸೇಗೌಡ, ಕೆಸ್ತೂರು ವ್ಯಾಪ್ತಿಯಲ್ಲಿ ಹಲವು ಗ್ರಾಮಗಳಲ್ಲಿ ಕ್ಷಯರೋಗದವರನ್ನು ಗುರುತಿಸಲಾಗಿದೆ. ಬೆಟ್ಟದಾಸನದೊಡ್ಡಿ, ಕೆಸ್ತೂರು, ತೊರೆಶೆಟ್ಟಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಕ್ಷಯಯರೋಗ ಬಂದು ಬಳಲುತ್ತಿದ್ದವರನ್ನು ಕರೆತಂದು ಕೆಸ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದರು.

ಕ್ಷಯ ರೋಗಿಗಳಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಪದಾರ್ಥಗಳಾದ ಅಕ್ಕಿ, ರಾಗಿ, ಗೋಧಿ, ಬಟ್ಟೆ, ಸೋಪು. ಮೈ ಸೋಪು, ಕಾಳುಗಳು, ಬೆಲ್ಲ ಪ್ರತಿಯೊಬ್ಬರಿಗೆ ತಲಾ 30 ಮೊಟ್ಟೆಯಂತೆ ವಿತರಣೆ ಮಾಡಲಾಗಿದೆ, ಒಂದು ತಿಂಗಳ ಕಾಲ ಅವರು ಯಾವುದೇ ಕೆಲಸಕ್ಕೆ ಹೋಗದೆ ವಿಶ್ರಾಂತಿ ಪಡೆಯಬೇಕಾಗುತ್ತದೆ, ಆ ನಿಟ್ಟಿನಲ್ಲಿ ಅವರ ಅನುಕೂಲಕ್ಕಾಗಿ ಈ ಒಂದು ಸಹಾಯ ಹಸ್ತವನ್ನು ನೀಡಿದ್ದೇನೆ. ಅವರು ಬೇಗ ಗುಣಮುಖರಾಗಲಿ ಎಂದರು.

ಈ ಸಂದರ್ಭದಲ್ಲಿ ಕೆಸ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಭವ್ಯ, ಆಸ್ಪತ್ರೆಯ ದಾದಿಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!