Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಷ್ಟ್ರಪತಿ ‘ವಿಧವೆ, ಬುಡಕಟ್ಟು ಮಹಿಳೆ’ ಎಂದು ಸಂಸತ್ ಭವನ ಉದ್ಘಾಟನೆಗೆ ಆಹ್ವಾನಿಸಿಲ್ಲ: ಉದಯ್‌ ನಿಧಿ ಸ್ಟಾಲಿನ್‌

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬುಡಕಟ್ಟು ಸಮುದಾಯದ ಮಹಿಳೆ ಮತ್ತು ವಿಧವೆಯೆಂದು ನೂತನ ಸಂಸತ್ತು ಭವನದ ಉದ್ಘಾಟನೆಗೆ ಆಹ್ವಾನಿಸಿಲ್ಲ ಎಂದು ತಮಿಳುನಾಡಿನ ಯುವಜನ ಮತ್ತು ಕ್ರೀಡಾ ಸಚಿವ ಉದಯ್‌ ನಿಧಿ ಸ್ಟಾಲಿನ್‌ ಅವರು ಹೇಳಿದ್ದಾರೆ.

ಮದುರೈನಲ್ಲಿ ಮಾತನಾಡಿದ ಉದಯ್‌ ನಿಧಿ ಸ್ಟಾಲಿನ್‌, ಸಂಸತ್ತಿನ ನೂತನ ಭವನದ ಉದ್ಘಾಟನೆಗೆ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹೊಸ ಸಂಸತ್ ಕಟ್ಟಡದ ಉದ್ಘಾಟನೆಗೆ ತಮಿಳುನಾಡಿನಿಂದ ಅರ್ಚಕರನ್ನು ಕರೆಸಿಕೊಂಡಿದೆ ಆದರೆ ‘ಅವರು ವಿಧವೆ ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದವರು’ ಎಂಬ ಕಾರಣಕ್ಕಾಗಿ ಭಾರತದ ರಾಷ್ಟ್ರಪತಿಯನ್ನು ಕೈಬಿಟ್ಟರು ಎಂದು ಹೇಳಿದ್ದಾರೆ.

ಇದು ಸನಾತನ ಧರ್ಮವಾಗಿದ್ದರೆ ಪಕ್ಷವು ಅದರ ವಿರುದ್ಧ ಧ್ವನಿಯನ್ನು ಎತ್ತುತ್ತದೆ ಎಂದು ಉದಯ್‌ನಿಧಿ ಸ್ಟಾಲಿನ್‌ ಅವರು ಹೇಳಿದ್ದಾರೆ.

ಈ ಮೊದಲು ಸಂಸತ್‌ ಭವನದ ಉದ್ಘಾಟಣೆಗೆ ರಾಷ್ಟ್ರಪತಿಯನ್ನು ಕರೆಯದಿರುವುದಕ್ಕೆ ಪ್ರಧಾನಿ ಮೋದಿ ನೇತೃತ್ವದ ಎನ್‌ ಡಿಎ  ವಿರುದ್ಧ ವಾಗ್ದಾಳಿ ನಡೆಸಿದ್ದ ಉದಯ್‌ ನಿಧಿ ಸ್ಟಾಲಿನ್‌ ಇದು ಜಾತಿ ತಾರತಮ್ಯಕ್ಕೆ ಒಂದು ಉದಾಹರಣೆ ಎಂದು ಹೇಳಿದ್ದರು.

ಈ ತಿಂಗಳ ಆರಂಭದಲ್ಲಿ ಉದಯ್‌ನಿಧಿ ಸ್ಟಾಲಿನ್‌ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿದ್ದು, ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಉದಯ್‌ನಿಧಿ ಸ್ಟಾಲಿನ್‌ ಹೇಳಿಕೆ ಬಲಪಂಥೀಯರ ಟೀಕೆಗೆ ಕಾರಣವಾಗಿತ್ತು. ಆದರೆ ಉದಯ್‌ ನಿಧಿ ತನ್ನ ಹೇಳಿಕೆಗೆ ಬದ್ಧರಾಗಿರುವುದಾಗಿ ಪುನರುಚ್ಛರಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!