Tuesday, May 21, 2024

ಪ್ರಾಯೋಗಿಕ ಆವೃತ್ತಿ

ಯುಪಿಎಸ್‌ಸಿ| 121 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ದಿಂದ 121 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸ್ಪೆಷಲಿಸ್ಟ್‌ ಗ್ರೇಡ್‌ 3 ಹುದ್ದೆಗಳು, , ಸೈಂಟಿಸ್ಟ್‌ ಬಿ, ಅಸಿಸ್ಟಂಟ್ ಜೂವಾಲಾಜಿಸ್ಟ್‌, ಅಸಿಸ್ಟಂಟ್ ಇಂಡಸ್ಟ್ರಿಯಲ್ ಅಡ್ವೈಸರ್ ಹುದ್ದೆಗಳನ್ನು ಕೇಂದ್ರ ಸರ್ಕಾರಿ ವಿವಿಧ ಇಲಾಖೆಗಳಲ್ಲಿ ಭರ್ತಿ ಮಾಡಲು ಯುಪಿಎಸ್ಸಿ ನೇಮಕ ಅಧಿಸೂಚನೆ ಪ್ರಕಟಿಸಿದೆ.

ಸ್ನಾತಕೋತ್ತರ ಪದವಿ ಹಾಗೂ ಪದವಿ ಅರ್ಹತೆಗಳನ್ನು ಹುದ್ದೆಗೆ ಸಂಬಂಧಿತ ವಿಷಯಗಳಲ್ಲಿ ಓದಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಫೆ.01, 2024 ರವರೆಗೆ ಅವಕಾಶ ನೀಡಲಾಗಿದೆ.

ಹುದ್ದೆಗಳ ವಿವರ
ಅಸಿಸ್ಟಂಟ್ ಇಂಡಸ್ಟ್ರಿಯಲ್ ಅಡ್ವೈಸರ್ : 1
ಸೈಂಟಿಸ್ಟ್‌ ಬಿ : 1
ಅಸಿಸ್ಟಂಟ್ ಜೂವಾಲಾಜಿಸ್ಟ್‌ : 7
ಸ್ಪೆಷಲಿಸ್ಟ್‌ ಗ್ರೇಡ್‌ 3: 112

ಪ್ರಮುಖ ದಿನಾಂಕಗಳು
ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : 13-01-2024
ಅರ್ಜಿ ಸ್ವೀಕರಿಸಲು ಕೊನೆ ದಿನಾಂಕ: 01-02-2024
ಅರ್ಜಿ ಪ್ರಿಂಟ್‌ ತೆಗೆದುಕೊಳ್ಳಲು ಕೊನೆ ದಿನಾಂಕ : 02-02-2024 ರ ರಾತ್ರಿ 23-59 ಗಂಟೆವರೆಗೆ

ಅಪ್ಲಿಕೇಶನ್‌ ಶುಲ್ಕ ರೂ.25
ಮಹಿಳಾ / ಎಸ್‌ಸಿ / ಎಸ್‌ಟಿ ಮತ್ತು ಇತರೆ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಬಹುದು.

ಆನ್ ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ

ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್‌ ವಿಳಾಸ : http://www.upsc.gov.in/

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!