Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿ.ಸಿ.ಫಾರಂ ಕೃಷಿಮೇಳದ ಪ್ರಮುಖ ಆಕರ್ಷಣೆಗಳು

ಮಂಡ್ಯ ತಾಲ್ಲೂಕಿನ ವಿ.ಸಿ.ಫಾರಂನಲ್ಲಿ ಡಿ.2 ಮತ್ತು 3ರಂದು ನಡೆಯುತ್ತಿರುವ ಕೃಷಿಮೇಳ ಈ ಭಾರಿ ಹತ್ತು ಹಲವು ವಿಶೇಷಗಳಿಂದ ಆಕರ್ಷಣೀಯವಾಗಿದೆ.

KRH-11 ಎಂಬ ಸುಧಾರಿತ ಭತ್ತದ ತಳಿಯನ್ನು ಈ ಬಾರಿ ಪರಿಚಯಿಸಲಾಗುತ್ತಿದ್ದು, ಇದು ಸಣ್ಣಕಾಳಿನ ತಳಿಯಾಗಿದ್ದು, 130-135 ದಿನಗಳಲ್ಲಿ ಬೆಳೆಯಬಹುದಾಗಿದೆ. ಒಂದು ಎಕರೆ ಪ್ರದೇಶದಲ್ಲಿ 30ರಿಂದ 35 ಕ್ವಿಂಟಾಲ್ ಭತ್ತ ಬೆಳೆಯಬಹುದಾಗಿದೆ ಎಂದು ಸಹ ಸಂಶೋಧನಾ ನಿರ್ದೇಶಕ ಡಾ.ಎನ್.ಶಿವಕುಮಾರ್ ತಿಳಿಸಿದರು.

ಅಲದೇ IR 64 ಭತ್ತದ ತಳಿಗೆ ಪರ್ಯಾಯವಾಗಿ KP 225 ತಳಿಯನ್ನು ಆವಿಷ್ಕಾರ ಮಾಡಲಾಗಿದ್ದು, ಇದು ರೋಗ ನಿರೋಧಕ ಗುಣವನ್ನು ಹೊಂದಿದ್ದು, ಕಡಿಮೆ ಅವಧಿಯಲ್ಲಿ ಬೆಳೆಯುವ ಭತ್ತವಾಗಿದೆ. ಅಲ್ಲದೇ RNR 15048 ಎಂಬ ಭತ್ತವು ಸಣ್ಣ ಕಾಳಿನ ತಳಿಯಾಗಿದ್ದು ರೈತರಿಗೆ ಲಭ್ಯವಿದೆ. ಮೇವಿನ ಬೆಳೆಯಾದ MAH 14/138 ಎಂಬ ಮುಸುಕಿನ ಜೋಳದ ಹೈಬ್ರೀಡ್ ತಳಿಯನ್ನು ಪರಿಚಯಿಸಲಾಗುತ್ತಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಕೃಷಿಮೇಳದ ಆಕರ್ಷಣೆಗಳು

  • ಸುಧಾರಿತ ತಳಿಗಳ ಹಾಗೂ ಹೈಬ್ರಿಡ್‌ಗಳ ಪ್ರಾತ್ಯಕ್ಷಿಕೆ
  • ಶ್ರೀಪದ್ಧತಿ ಹಾಗೂ ಏರೋಬಿಕ್ ಭತ್ತದ ಬೇಸಾಯ ಪ್ರಾತ್ಯಕಿಕೆ 
  • ಡ್ರಂ ಸೀಡರ್‌ನಿಂದ ಹಾಗೂ ಯಂತ್ರಚಾಲಿತ ನಾಟಿ ಪ್ರಾತ್ಯಕ್ಷಿಕೆ
  • ಭತ್ತದಲ್ಲಿ ನೇರ ಬಿತ್ತನೆ ಪ್ರಾತ್ಯಕ್ಷಿಕೆ
  • ಬೀಜೋತ್ಪಾದನಾ ತಾಕುಗಳು

ರಾಗಿ ಮತ್ತ  ಸಿರಿಧಾನ್ಯ

  • ನೂತನ ರಾಗಿ ತಳಿಗಳ ಪ್ರಾತ್ಯಕ್ಷಿಕೆ
  • ವಿವಿಧ ಸುಧಾರಿತ ಸಿರಿಧಾನ್ಯ ತಳಿಗಳು

ಮುಸುಕಿನ ಜೋಳ ಮತ್ತು ಶಕ್ತಿಮಾನ ಜೋಳ

  • ನೂತನ ಹೈಬ್ರಿಡ್ ತಳಿಗಳ ಪ್ರಾತ್ಯಕ್ಷಿಕೆ
  • ಜೋಳದ ಮೌಲ್ಯವರ್ಧಿತ ಉತ್ಪನ್ನಗಳು ಮುಸುಕಿನ

ವಾಣಿಜ್ಯ ಬೆಳೆಗಳು

  • ಸುಧಾರಿತ ಕಬ್ಬಿನ ತಳಿಗಳು
  • ಅಂಗಾಂಶ ಕೃಷಿ ತಂತ್ರಜ್ಞಾನದಲ್ಲಿ ರೋಗಮುಕ್ತ ಕಬ್ಬಿನ ಸಸಿಗಳ ಉತ್ಪಾದನೆ
  • ಕಬ್ಬಿನಲ್ಲಿ ಆಧುನಿಕ ಬೇಸಾಯ ತಾಂತ್ರಿಕತೆಗಳು ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆಯ ಪ್ರಾತ್ಯಕಿಕೆ
  • ಕಬ್ಬು ನಾಟಿ ಮಾಡುವ ಹಾಗೂ ತರಗು ಪುಡಿಮಾಡುವ ಯಂತ್ರಗಳ ಪ್ರಾತ್ಯಕ್ಷಿಕೆ
  • ವಿವಿಧ ಹತ್ತಿ ತಳಿಗಳ ಪ್ರಾತ್ಯಕ್ಷಿಕೆ

ಮೇವಿನ ಬೆಳೆಗಳು

  • ವಿವಿಧ ಸುಧಾರಿತ ಮೇವಿನ ಬೆಳೆಗಳ ತಾಂತ್ರಿಕತೆಗಳು
  • ರಸಮೇವು ಮತ್ತು ಆಜೋಲ ಉತ್ಪಾದನೆ
  • ಜಲ ಕೃಷಿಯಲ್ಲಿ ಮೇವಿನ ಉತ್ಪಾದನೆ

ದ್ವಿದಳ ಧಾನ್ಯ ಮತ್ತು ಎಣ್ಣೆ ಕಾಳು ಬೆಳೆಗಳು

  • ಉದ್ದು, ಅವರೆ, ಸೋಯಾ ಅವರೆ, ಹೆಸರು ಮತ್ತು ಆಲಸಂದೆ ಬೆಳೆಗಳ ಪ್ರಾತ್ಯಕ್ಷಿಕೆ
  • ಸೂರ್ಯಕಾಂತಿ, ಹುಚ್ಚೆಳ್ಳು ಹಾಗೂ ನೆಲಗಡಲೆ ಬೆಳೆಗಳ ಪ್ರಾತ್ಯಕ್ಷಿಕೆ

ನೀರು ನಿರ್ವಹಣಾ ತಂತ್ರಜ್ಞಾನ

  • ದೂರ ಸಂವೇದಿ ನೀರಾವರಿ ಪದ್ಧತಿ
  • ವಿವಿಧ ಬೆಳೆಗಳಲ್ಲಿ ನೀರು ಉಳಿತಾಯ ಪದ್ಧತಿ ಪ್ರಾತ್ಯಕ್ಷಿಕೆಗಳು
  • ಸ್ವಯಂ ಚಾಲಿತ ಹನಿ ನೀರಾವರಿ ಪದ್ಧತಿ ಪ್ರಾತ್ಯಕ್ಷಿಕೆ

ಇತರೆ ತಾಂತ್ರಿಕತೆಗಳು

  • ಎರೆ ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆ 
  • ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ
  • ಸಮಗ್ರ ಮೀನು ಸಾಕಾಣಿಕೆ ಪದ್ಧತಿಗಳು
  • ವಿವಿಧ ಸೊಪ್ಪು, ತರಕಾರಿ ಮತ್ತು ಹಾಗೂ ಹೂವಿನ ಬೆಳೆಗಳ ಪ್ರಾತ್ಯಕ್ಷಿಕೆ
  • ಕೃಷಿ ಮಾಹಿತಿ ಮತ್ತು ಸಲಹಾ ಕೇಂದ್ರ – ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ
  • ಕೃಷಿ ಪ್ರಕಟಣೆಗಳು ಹಾಗೂ ಬಿತ್ತನೆ ಬೀಜಗಳ ಮಾರಾಟ
  • ವಿವಿಧ ಅಭಿವೃದ್ಧಿ ಇಲಾಖೆಗಳ ತಾಂತ್ರಿಕತೆಗಳ ಪ್ರದರ್ಶನ
  • ಕೃಷಿ ವಸ್ತುಪ್ರದರ್ಶನ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!