Friday, September 20, 2024

ಪ್ರಾಯೋಗಿಕ ಆವೃತ್ತಿ

ಸ್ಲಂ ಬೋರ್ಡ್‌ಗೆ ಭೂಮಿ ಹಸ್ತಾಂತರಿಸಲು ವಕ್ಪ್ ಮಂಡಳಿ ಅಡ್ಡಿ: ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಆರೋಪ

ಮದ್ದೂರಿನ ತಮಿಳು ಕಾಲೋನಿಯಲ್ಲಿ 114 ನಿವಾಸಿಗಳೂ ವಾಸಿಸುತ್ತಿರುವ ಜಾಗ ಸ್ಲಂ ನಿವಾಸಿಗಳದ್ದು (ನಮ್ಮದೇ) ಎಂದು ಈಗಾಗಲೇ ಅಧಿಕಾರಿಗಳು ಘೋಷಿಸಿದ್ದಾರೆ. ಈ ವಸತಿ ಪ್ರದೇಶದ ಪಕ್ಕದಲ್ಲೇ ಇರುವ ಜಮೀನು, ಮಸೀದಿ, ವರ್ಕ್ಸ್‌ ಬೋರ್ಡ್‌ ಅಥವಾ ಶಾಲೆಗೂ ಯಾವುದೇ ಸಂಬಂಧವಾಗಲಿ, ಸಮಸ್ಯೆಯಾಗಲೀ ಇಲ್ಲದಿದ್ದದರೂ ಮದ್ದೂರಿನ ವರ್ಕ್ಸ್ ಮಂಡಳಿಯು, ಬಡ ವಸತಿ ಭೂಮಿ ವಂಚಿತ ಶ್ರಮಿಕ ನಗರ ನಿವಾಸಿಗಳಿಗೆ ತೊಂದರೆ ಕೊಡುತ್ತಿವೆ ಎಂದು  ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಆರೋಪಿಸಿದೆ.

ತಮಿಳು ಸ್ಲಂ ನಿವಾಸಿಗಳಿರುವ ಪ್ರದೇಶದ ಎಲ್ಲ ಜಮೀನುಗಳೂ ಕೂಡ ಪ್ರತ್ಯೇಕವಾಗಿಯೇ ಗುರುತಿಸಲ್ಪಟ್ಟಿವೆ. ಇಲ್ಲಿನ ಜಮೀನುಗಳಿಗೆ ಒಂದಕ್ಕೊಂದು ಸಂಬಂಧವಿಲ್ಲ ಎಂಬುದನ್ನು ಮಂಡ್ಯದ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವಾರು ಅಧಿಕಾರಿಗಳು ಪದೇ-ಪದೇ ಸರ್ವೆ ನಡೆಸಿ, ಚೆಕ್‌ಬಂದಿಗಳನ್ನು ಗುರುತಿಸಿ ಖಚಿತಪಡಿಸಿದ್ದಾರೆ. ಆದರೂ ಇಲ್ಲಿನ ಮಸೀದಿ ಆಡಳಿತ ಮಂಡಳಿ ಮತ್ತು ಮದ್ದೂರಿನ ವರ್ಕ್ಸ್ ಮಂಡಳಿಗಳು ಬಡ ವಸತಿ ಭೂಮಿ ವಂಚಿತ ಶ್ರಮಿಕ ನಗರ ನಿವಾಸಿಗಳಿಗೆ ತೊಂದರೆ ಕೊಡುತ್ತಿವೆ ಎಂದು ಸಮಿತಿಯ ರಾಜ್ಯ ಕಾರ್ಯದರ್ಶಿ ಸಿದ್ದರಾಜು ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದರು.

ಬಲವಂತವಾಗಿ ಮತ್ತು ಅನಧಿಕೃತವಾಗಿ ಇಲ್ಲಿನ ಸ್ಲಂ ಜನರ ಭೂಮಿಯನ್ನು ವಶಪಡಿಸಿಕೊಳ್ಳುವ ಹುನ್ನಾರವನ್ನು ವರ್ಕ್ಸ್ ಮಂಡಳಿ ನಡೆಸುತ್ತಿವೆ. ವಸತಿ ವಂಚಿತರಿಗೆ ಮನೆ ಕಟ್ಟಿಕೊಡಲು, ಸ್ಲಂ ಬೋರ್ಡ್‌ಗೆ ಹಸ್ತಾಂತರ ಆಗಬೇಕಿದ್ದ ಭೂಮಿಯನ್ನು ಅಧಿಕಾರಿಗಳ ಆದೇಶಕ್ಕೆ ವಿರುದ್ಧವಾಗಿ ತಡೆಹಿಡಿದು, ಅಮಾಯಕ ಜನರಿಗೆ ಕುರುಕುಳ ನೀಡುತ್ತಿದ್ದಾರೆ. ಇದು, ಅನಗತ್ಯವಾದ ಸಂಘರ್ಷದ ವಾತಾವರಣಕ್ಕೆ ದಾರಿ ಮಾಡಿಕೊಡುತ್ತಿದೆ. ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮತ್ತು ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಹಾಗೂ ಕರ್ನಾಟಕ ಜನಶಕ್ತಿ ನೇತೃತ್ವದಲ್ಲಿ ಸಂಪೂರ್ಣ ಶಾಂತಿಯುತವಾಗಿ ಸಮಸ್ಯೆಯನ್ನ ಬಗೆಹರಿಸಿಕೊಳ್ಳಲು ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಮಾತನಾಡಿ, ನಮಗೆ ಯಾವುದೇ ಕಾರಣಕ್ಕೂ ಮಸೀದಿ ಮಂಡಳಿಯೊಂದಿಗೆ ಸಂಘರ್ಷ ನಡೆಸುವ ಅಥವಾ ಶಾಂತಿ- ಸುವ್ಯವಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ಸಮಸ್ಯೆಯನ್ನ ಮುಂದೊಯ್ಯಲು ಇಷ್ಟವಿಲ್ಲ. ಆದರೆ, ಮಸೀದಿ ಆಡಳಿತ ಮಂಡಳಿ ಮತ್ತು ವಕ್ಪ್ ಮಂಡಳಿ ಈ ವಿಚಾರವನ್ನು ಅರ್ಥ ಮಾಡಿಕೊಳ್ಳದೆ, ತಮ್ಮದಲ್ಲದೇ ಇರುವ ಭೂಮಿಯಲ್ಲಿ ಅನ್ಯಾಯಯುತವಾಗಿ ಒತ್ತುವರಿ ನಡೆಸುವ ಪುಯತ್ನ ಮಾಡುತ್ತಿವೆ, ಇದರಿಂದ, ಮುಂದೆ ಅಶಾಂತಿಯ ವಾತಾವರಣ ಮದ್ದೂರು ಮತ್ತು ಮಂಡ್ಯದಲ್ಲಿ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಅಂತಹ ಅಶಾಂತಿಯ ವಾತಾವರಣ ಸೃಷ್ಟಿಯಾಗಬಾರದು ಎಂಬುದು ನಮ್ಮ ಉದ್ದೇಶ, ಅಶಾಂತಿ ಉಂಟಾಗದಂತೆ ಸಮಸ್ಯೆಯನ್ನು ಬರೆಹರಿಸಿಕೊಳ್ಳಲು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರು ಮುಂದಾಗಬೇಕು, ಅಲ್ಲಿಯವರೆಗೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ  ನಿರಂತರ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.

ಗೋಷ್ಠಿಯಲ್ಲಿ ಮುಖಂಡರಾದ ನಗರಕೆರೆ ಜಗದೀಶ್, ವೈದುನ, ಸೆಲ್ವಿ ಹಾಗೂ ತಲಾ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!