Thursday, September 19, 2024

ಪ್ರಾಯೋಗಿಕ ಆವೃತ್ತಿ

‘ವ್ಯಾಲೆಂಟೈನ್ಸ್‌ ಡೇ’ಗೆ ಹಸುವನ್ನು ಅಪ್ಪಿಕೊಳ್ಳಿ ಎಂದ ಕೇಂದ್ರ ಸರ್ಕಾರ : ವೈರಲ್ ಆದ ವಿವಾದಿತ ಆದೇಶ

ಫೆಬ್ರವರಿ 14ರಂದು ವಿಶ್ವಾದ್ಯಂತ ಪ್ರೇಮಿಗಳ ದಿನವನ್ನು (ವ್ಯಾಲೆಂಟೈನ್ಸ್‌ ಡೇ) ಆಚರಿಸಲು ಸಜ್ಜಾಗಿರುವಾಗ, ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ‘ಹಸುವನ್ನು ಅಪ್ಪಿಕೊಳ್ಳಿ’ (ಕೌ ಹಗ್ ಡೇ) ಎಂದು ಸೂಚಿಸಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

“> ಕೇಂದ್ರ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಬರುವ ಅಡಿಯಲ್ಲಿ ಬರುವ ಪ್ರಾಣಿ ದಯಾ ಸಂಘವು ಕೇಂದ್ರದ ಪತ್ರ ಚರ್ಚೆಗೆ ವೇದಿಕೆಯೊದಗಿಸಿದೆ.   ಫೆ.14ರಂದು ‘ವ್ಯಾಲೆಂಟೈನ್ಸ್‌ ಡೇ’ ಬದಲು ಹಸು ಅಪ್ಪುಗೆ’ ದಿನವನ್ನಾಗಿ ಆಚರಿಸಿ ಎಂದು ಸೂಚಿಸಿದ್ದು,ಗೋವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಡಾ. ಸುಜಿತ್ ಕುಮಾರ್ ದತ್ತ ಅವರ ಸಹಿ ಕೂಡ ಈ ಪತ್ರದಲ್ಲಿದೆ.

“> ಗೋವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು. ಹಸುಗಳನ್ನು ಅಪ್ಪಿಕೊಳ್ಳುವುದರಿಂದ ಸಂತೋಷ, ನೆಮ್ಮದಿ ಸಿಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಭಾರತೀಯ ಸಮಾಜದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಮಿತಿಮೀರಿ ಹರಡಿದೆ. ಪ್ರಾಣಿಗಳ ಬಗ್ಗೆ ಸಹಾನುಭೂತಿ ಕಲಿಸಲು ಈ ರೀತಿ ಸೂಚಿಸಿರುವುದಾಗಿ ಹೇಳಿದ್ದು, ಹಸುಗಳು ದೇಶದ ಸಂಸ್ಕೃತಿ ಮತ್ತು ಆರ್ಥಿಕತೆಯ ಬೆನ್ನೆಲುಬು. ಅವುಗಳನ್ನು ʻಕಾಮಧೇನುʼ ಮತ್ತು ʻಗೌತಮʼ ಎಂದು ಕರೆಯುತ್ತಾರೆ. ಯಾಕೆಂದರೆ ಅದು ಪ್ರಕೃತಿಯನ್ನು ತಾಯಿಯಂತೆ ನೋಡುತ್ತದೆʼ ಎಂದು ಉಲ್ಲೇಖಿಸಿದೆ. ಈ ಪತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಅದನ್ನು ಪ್ರಶಂಸಿಸಿದರೆ, ಈ ಪತ್ರ ಫೆ.14ರ ‘ವ್ಯಾಲೆಂಟೈನ್ಸ್‌ ಡೇ’ ಆಚರಣೆಗೆ ಯಾವುದೇ ಪರಿಣಾಮ ಬೀರದು ಎಂದಿದ್ದಾರೆ. 

ಇನ್ನು ಈ ಪತ್ರ ಟ್ರೋಲ್ ಮಾಡುವವರ ಬಾಯಿಗೆ ಆಹಾರ ಒದಗಿಸಿದೆಂತಾಗಿದೆ. “ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಸಕಾರಾತ್ಮಕ ಶಕ್ತಿ ಮತ್ತು “ಸಾಮೂಹಿಕ ಸಂತೋಷವನ್ನು ಹರಡಲು ವ್ಯಾಲೆಂಟೈನ್ಸ್‌ ದಿನದಂದು  “ಕೌ ಹಗ್ ಡೇ” ಆಚರಿಸಲು ಕೇಳಿದೆ. ಗೋವುಗಳನ್ನು ಆರೋಗ್ಯವಾಗಿಡುವುದು ಸರ್ಕಾರದ ಕೆಲಸವೇ ಹೊರತು ಜನರದ್ದಲ್ಲ. ಒಂದು ವೇಳೆ ಅಪ್ಪಿಕೊಳ್ಳಲು ಹೋದವರು ಹಸುವಿನಿಂದ ದಾಳಿಗೆ ಒಳಗಾದರೆ ಅದರ ವೆಚ್ಚವನ್ನು ಸರ್ಕಾರ ಭರಿಸುತ್ತದೆಯೇ” ಎಂದು ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!