Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಡಿ.4-5ರಂದು ವಿ.ಸಿ.ಫಾರಂ ಕೃಷಿಮೇಳ; ಪ್ರಮುಖ ಆಕರ್ಷಣೆಗಳೇನು…? ಇಲ್ಲಿದೆ ಮಾಹಿತಿ…..

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾವಿದ್ಯಾಲಯ, ಸಹ ವಿಸ್ತರಣಾ ನಿರ್ದೇಶನಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರ ಇವರ ವತಿಯಿಂದ ಮಂಡ್ಯ ತಾಲ್ಲೂಕಿನ ವಿ.ಸಿ. ಫಾರಂ ನಲ್ಲಿ ಡಿ.4 ಮತ್ತು 5ರಂದು ಕೃಷಿಮೇಳ ಆಯೋಜಿಸಲಾಗಿದೆ ಎಂದು ಸಹ ಸಂಶೋಧನಾ ನಿರ್ದೇಶಕ ಡಾ.ಎನ್.ಶಿವಕುಮಾರ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.4ರಂದು ಬೆಳಿಗ್ಗೆ 9.30 ಗಂಟೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕೃಷಿಮೇಳ ಉದ್ಘಾಟಿಸುವರು. ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಗಳಾಗಿ ಜನಪ್ರತಿನಿಧಿಗಳು ಭಾಗವಹಿಸುವರು ಎಂದರು.

ವಿಶೇಷ ಆಕರ್ಷಣೆಗಳು

  • ಸುಧಾರಿತ ತಳಿಗಳು ಹಾಗೂ ಹೈಬ್ರಿಡ್‌ಗಳ ಪ್ರಾತ್ಯಕ್ಷಿಕೆ
  • ಏರೋಬಿಕ್ ಹಾಗೂ ಶ್ರೀ ಪದ್ಧತಿ ಭತ್ತದ ಬೇಸಾಯ ಪ್ರಾತ್ಯಕ್ಷಿಕೆ
  • ಡ್ರಂ ಸೀಡರ್ ಹಾಗೂ ಯಂತ್ರಚಾಲಿತ ನಾಟಿ ಪ್ರಾತ್ಯಕ್ಷಿಕೆ
  • ಭತ್ತದ ನೇರ ಬಿತ್ತನೆ ಪ್ರಾತ್ಯಕ್ಷಿಕೆ

ಸಿರಿಧಾನ್ಯ/ ರಾಗಿ

  • ಸುಧಾರಿತ ಸಿರಿಧಾನ್ಯ ತಳಿಗಳ ಪ್ರಾತ್ಯಕ್ಷಿಕೆ ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು
  • ನೂತನ ರಾಗಿ ತಳಿಗಳ ಪ್ರಾತ್ಯಕ್ಷಿಕೆ

ಮುಸುಕಿನ ಜೋಳ

ಹೈಬ್ರಿಡ್ ತಳಿಗಳ ಪ್ರಾತ್ಯಕ್ಷಿಕೆ

ಮುಸುಕಿನ ಜೋಳದ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ

ವಾಣಿಜ್ಯ ಬೆಳೆಗಳು

  • ಸುಧಾರಿತ ಕಬ್ಬಿನ ತಳಿಗಳು
  • ಕಬ್ಬಿನಲ್ಲಿ ಆಧುನಿಕ ಬೇಸಾಯ ತಾಂತ್ರಿಕತೆಗಳು
  • ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆಯ ಪ್ರಾತ್ಯಕ್ಷಿಕೆ
  • ಕಬ್ಬು ನಾಟಿ ಹಾಗೂ ತರಗು ಪುಡಿ ಮಾಡುವ ಯಂತ್ರಗಳ ಪ್ರಾತ್ಯಕ್ಷಿಕೆ
  • ಅಂಗಾಂಶ ಕೃಷಿ ತಂತ್ರಜ್ಞಾನದಲ್ಲಿ ಕಬ್ಬಿನ ಸಸಿಗಳ ಉತ್ಪಾದನೆ
  • ವಿವಿಧ ಹತ್ತಿ ತಳಿಗಳ ಪ್ರಾತ್ಯಕ್ಷಿಕೆ

ಮೇವಿನ ಬೆಳೆಗಳು

ಸುಧಾರಿತ ಮೇವಿನ ಬೆಳೆಗಳ ತಳಿಗಳು ಹಾಗೂ ಉತ್ಪಾದನಾ ತಾಂತ್ರಿಕತೆಗಳು

ರಸಮೇವು ಮತ್ತು ಅಜೋಲ ಉತ್ಪಾದನೆ

ಜಲ ಕೃಷಿಯಲ್ಲಿ (ಹೈಡೋಫೋನಿಕ್ಸ್) ಮೇವಿನ ಉತ್ಪಾದನೆ

ದ್ವಿದಳ ಧಾನ್ಯ ಹಾಗೂ ಎಣ್ಣೆ ಕಾಳು ಬೆಳೆಗಳು

  •  ಉದ್ದು, ಅವರೆ, ಸೋಯಾ ಅವರೆ, ಹೆಸರು ಮತ್ತು ಅಲಸಂದೆ ಬೆಳೆಗಳ ಪ್ರಾತ್ಯಕ್ಷಿಕೆ
  • ಸೂರ್ಯಕಾಂತಿ, ಹರಳು, ಹುಚ್ಚೆಳ್ಳು ಹಾಗೂ ನೆಲಗಡಲೆ ಬೆಳೆಗಳ ಪ್ರಾತ್ಯಕ್ಷಿಕೆ

ನೀರು ನಿರ್ವಹಣಾ ತಂತ್ರಜ್ಞಾನ

  • ದೂರ ಸಂವೇದಿ ನೀರಾವರಿ ಪದ್ಧತಿ
  • ವಿವಿಧ ಬೆಳೆಗಳಲ್ಲಿ ನೀರು ಉಳಿತಾಯ ಪದ್ಧತಿ ಪ್ರಾತ್ಯಕ್ಷಿಕೆ
  • ಸ್ವಯಂ ಚಾಲಿತ ಹನಿ ನೀರಾವರಿ ಪದ್ಧತಿ ಪ್ರಾತ್ಯಕ್ಷಿಕೆ

ಇತರೆ ತಾಂತ್ರಿಕತೆಗಳು

  • ಭತ್ತ, ರಾಗಿ ಹಾಗೂ ಇತರೆ ಬೆಳೆಗಳ ಬೀಜೋತ್ಪಾದನಾ ತಾಕುಗಳು
  • ವಿಶಿಷ್ಟ ಸೊಪ್ಪು ಮತ್ತು ತರಕಾರಿ ಬೆಳೆಗಳ ಪ್ರಾತ್ಯಕ್ಷಿಕೆ
  • ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ
  • ಸಮಗ್ರ ಮೀನು ಸಾಕಾಣಿಕೆ ಪದ್ಧತಿಗಳು
  • ಎರೆ ಗೊಬ್ಬರ ತಯಾರಿಕೆ ಘಟಕ
  • ಕೃಷಿ ಮಾಹಿತಿ ಮತ್ತು ಸಲಹಾ ಕೇಂದ್ರ – ರೈತರ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ
  • ವಿವಿಧ ಅಭಿವೃದ್ಧಿ ಇಲಾಖೆಗಳಿಂದ ತಾಂತ್ರಿಕತೆಗಳ ಪ್ರದರ್ಶನ
  • ಭತ್ತದ ಮುಖ್ಯ ರೋಗಗಳ ಮೌಲ್ಯಮಾಪನ ಪ್ರಾತ್ಯಕ್ಷಿಕೆ
  • ಕೃಷಿ ಪ್ರಕಟಣೆಗಳು ಹಾಗೂ ಬಿತ್ತನೆ ಬೀಜಗಳ ಮಾರಾಟ

ಉಚಿತ ಸಾರಿಗೆ ವಾಹನದ ವ್ಯವಸ್ಥೆ

ಕೃಷಿ ಮೇಳಕ್ಕೆ ಆಗಮಿಸುವವರಿಗೆ ಮಂಡ್ಯನಗರದ ಲೋಕೋಪಯೋಗಿ ಕಚೇರಿ ಆವರಣದಿಂದ ವಿ.ಸಿ.ಫಾರಂ ಕೃಷಿಮೇಳ ತಲುಪಲು ಉಚಿತ ವಾಹನದ ವ್ಯವಸ್ಥೆ ಮಾಡಲಾಗಿದೆ, ಮೇಳ ಮುಗಿಸಿಕೊಂಡು ಮತ್ತೇ ವಿ.ಸಿ.ಫಾರಂ ನಿಂದ ಮಂಡ್ಯ ಲೋಕೋಪಯೋಗಿ ಕಚೇರಿ ತಲುಪಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ, ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು, ರೈತರು ಆಗಮಿಸಿ ಕೃಷಿಮೇಳ ಯಶಸ್ವಿಗೊಳಸಬೇಕೆಂದು ಮನವಿ ಮಾಡಲಾಗಿದೆ.

ಗೋಷ್ಠಿಯಲ್ಲಿ ಡೀನ್ (ಕೃಷಿ) ಡಾ.ಎಸ್.ಎಸ್.ಪ್ರಕಾಶ್, ಸಹ ವಿಸ್ತರಣಾ ನಿರ್ದೇಶಕ ಡಾ.ಡಿ.ರಘುಪತಿ ಹಾಗೂ ಡಾ.ರಂಗನಾಥ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!