Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಂವಿಧಾನ ಸಮರ್ಪಕ ಜಾರಿಗೆ ತೀವ್ರ ಹೋರಾಟ ಅಗತ್ಯ : ವೆಂಕಟಗಿರಿಯಯ್ಯ

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನು ಸಮರ್ಪಕವಾಗಿ ಜಾರಿ ಮಾಡಲು ಜನಪರ ಸಂಘಟನೆಗಳು ತೀವ್ರವಾದ ಹೋರಾಟಕ್ಕೆ ಮುಂದಾಗಬೇಕಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ತಿಳಿಸಿದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜನವರಿ 26 ಭಾರತ ಸಂವಿಧಾನ ದಿನದ ಅಂಗವಾಗಿ ಭಾರತ ಸಂವಿಧಾನ ಜಾರಿಗಾಗಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಕನಸ್ಸಿನ ಪ್ರಬುದ್ದ ಭಾರತ ನಿಮಾ೯ಣಕ್ಕಾಗಿ ಜನಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಬಂದು 74 ವಷ೯ವಾದರೂ ಸಂವಿಧಾನ ಸಮಪ೯ಕವಾಗಿ ಜಾರಿಯಾಗಿಲ್ಲ, ಸಂವಿಧಾನ ಸಮಪ೯ಕವಾಗಿ ಜಾರಿಯಾಗುವರೆಗೂ ಹೋರಾಟ ನಿಲ್ಲುವುದಿಲ್ಲ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಹೊರಾಟವನ್ನು ಮತ್ತಷ್ಟು ಚುರುಕುಗೊಳಿಸಬೇಕಿದೆ ಎಂದರು.

ಮನುಸ್ಮೃತಿ ಆಧಾರದ ಮೇಲೆ ದೇಶವನ್ನು ಆಳ್ವಕೆ ಮಾಡಬೇಕೆಂಬ ಷಡ್ಯಂತ್ರ ಮಾಡುವವರನ್ನು ಭಾರತ ಸರ್ಕಾರದ ಖುರ್ಚಿಯಲ್ಲಿ ಕೂರಿಸಬಾರದು, ಸಂವಿಧಾನ ಜಾರಿಯಾಗದ ಹಿನ್ನೆಲೆಯಲ್ಲಿ ಇಂದಿಗೂ ಅಭಿವ್ಯಕ್ತಿ ಸ್ವತಂತ್ರ ಇಲ್ಲ, ಜಾತಿ ವ್ಯವಸ್ಥೆ ತಾಂಡವವಾಡುತ್ತಿದ್ದು, ಮಾನವೀಯ ಗುಣಗಳು ಇರುವವರು ಎಲ್ಲಾರು ಒಗ್ಗೂಡಿ ಭಾರತ ಸಂವಿಧಾನದ ಮೇಲೆ ಆಣೆ ಮಾಡಿ ಸಂವಿಧಾನವನ್ನು ಪ್ರಮಾಣಿಕವಾಗಿ ಜಾರಿ ಮಾಡುತ್ತೇವೆ ಎನ್ನುವವರನ್ನು ಆಯ್ಕೆ ಮಾಡಬೇಕಾಗಿದೆ, ಇಲ್ಲದೇ ಹೋದರೇ ಜಗತ್ತೆ ಸೂನ್ಯವಾಗುತ್ತದೆ ಎಂದರು.

ನಿವೃತ್ತ ಉಪನ್ಯಾಸಕ ಪ್ರೊ.ರಂಗಸ್ವಾಮಿ ಮಾತನಾಡಿ, ಮನುಸ್ಮೃತಿ  ಆಧಾರದಲ್ಲಿ ಅಡಳಿತ ನಡೆಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಹಿಂದುಳಿದ ಸಮುದಾಯ ಎಚ್ಚೆತ್ತುಕೊಳ್ಳದಿದ್ದರೇ ಮುಂದಿನ ದಿನಗಳಲ್ಲಿ ದೊಡ್ಡ ಗಂಡಾಂತರವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಭರತ್‌ರಾಜ್, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಅಧ್ಯಕ್ಷ ಸೋಮಶೇಖರ್, ಜಿಲ್ಲಾ ಉಪಾಧ್ಯಕ್ಷ ಬಾಲರಾಜು, ಮುಖಂಡರಾದ ಆನಂದ್ ಸುರೇಶ್ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!