Thursday, September 19, 2024

ಪ್ರಾಯೋಗಿಕ ಆವೃತ್ತಿ

ವೆಟ್ರಿ ಮಾರನ್ ನಿರ್ದೇಶನದ ‘ವಿಡುದಲೈ’ ಸಿನಿಮಾ ನೋಡುವಾಗ ನೆನಪಾಗಿದ್ದು…….

✍️ ಯದುನಂದನ್ ಕೀಲಾರ

ಸಂಗತಿ: 1
2006 ಅನಿಸುತ್ತೆ, ನಾವೊಂದಷ್ಟು ಸ್ನೇಹಿತರು ಎರಡೆಡರಡು ಪದವಿ ಮುಗಿಸಿ ಕೆಲಸ ಇಲ್ಲದೆ ಮೈಸೂರಿನ ತೊಣಚಿ ಕೊಪ್ಪಲಿನಲ್ಲಿ ಒಂದು ಬಾಡಿಗೆ ಮನೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೊ. ಸುಮಾರು ಏಳೆಂಟು ಮಂದಿ ಇದ್ದ ನಮ್ಮಲ್ಲಿ ಕೆಲಸ ಅಂತ ಇದ್ದದ್ದು ಒಬ್ಬನಿಗೆ ಮಾತ್ರ ಅದು ಪೊಲೀಸ್ ಕಾನ್ಸಟೇಬಲ್ ಹುದ್ದೆ. ಒಂದು ದಿನ ಈ ನನ್ನ ಸ್ನೇಹಿತ 2 ಗಂಟೆ ರಾತ್ರಿಗೆ ಚಾಮುಂಡಿಬೆಟ್ಟದಲ್ಲಿ ಡ್ಯೂಟಿ ಮುಗಿಸಿ ಬಂದು ಮಲುಗಿದ. ಸುಮಾರು ಬೆಳಗಿನ ಮೂರು ಮೂರುವರೆ ಅಷ್ಟೊತ್ತಿಗೆ ಅವನ ಮೇಲಾಧಿಕಾರಿಯಿಂದ ಫೋನ್ ಕರೆ ಬಂತು. ಆ ಅಧಿಕಾರಿ ಧ್ವನಿಗೆ ನಮ್ಮಲ್ಲರಿಗೂ ಎಚ್ಚರ ಆಗೋಯ್ತು. ಆ ಅಧಿಕಾರಿ ಬಳಸುತ್ತಿದ್ದ ಭಾಷೆ, ಅವಾಚ್ಯ ಬಯ್ಯುಗುಳನ್ನ ಕೇಳಿಸಿಕೊಂಡು, ಮಂಡ್ಯ ಗ್ರಾಮೀಣ ಪ್ರದೇಶದಿಂದ ಬಂದ ನಮಗೆನೆ ಅಸಹ್ಯ ಅನಿಸಿಬಿಡ್ತು. ನನ್ನ ಸ್ನೇಹಿತ ಏನೊಂದು ಪ್ರತಿಕ್ರಿಯಿಸಲು ಅವಕಾಶ ಕೊಡದೆ ಒಂದೇ ಸಮನೆ ಆ ಅಧಿಕಾರಿ ಹೆಗರಾಡುತ್ತಿದ್ದ, ಕೊಂಚ ಅವಕಾಶ ಸಿಕ್ಕ ತಕ್ಷಣ ನನ್ನ ಸ್ನೇಹಿತ ‘ಸರ್ ನಾನು 405 ಅಲ್ಲ ಸರ್, 302’ ಅಂದ, ಆ ಕಡೆಯಿಂದ ‘302 ಏನೊ’ ಎಂಬ ಧ್ವನಿಯೊಂದಿಗೆ ಫೋನ್ ಕಟ್ಟಾಯ್ತು. ನನ್ನ ಸ್ನೇಹಿತನನ್ನ ನಂಬರ್ ಮುಖಾಂತರ ಗುರುತಿಸಿದ ಆ ಅಧಿಕಾರಿ ಬಗ್ಗೆ ಸಿಕ್ಕಾಪಟ್ಟೆ ಸಿಟ್ಟು ಬಂದ್ರು, ಕನಿಷ್ಟ ಅವನು ನಾನು ತಪ್ಪಾದ ವ್ಯಕ್ತಿಗೆ ಇಷ್ಟೊತ್ತು ಕೆಟ್ಟದಾಗಿ ಬಯ್ಯ್ದಿದದಕ್ಕೆ ಪಶ್ಚತಾಪ ಆಗಿರಬಹುದುಎಂಬ ನಿರೀಕ್ಷೆ ಅತಿ ಆಯಿತು ಅನಿಸುತ್ತೆ. ಅವನು ಕೊನೆಯಲ್ಲಿ ‘302 ಏನೊ’ ಎಂಬ ಧ್ವನಿ ಅಷ್ಟು ಉಢಾಪೆಯದಾಗಿತ್ತು.

ಸಂಗತಿ: 2
2011ರಲ್ಲಿ Out Look ಮ್ಯಾಗಜಿನ್ ನಲ್ಲಿ ಖ್ಯಾತ ಬರೆಹಗಾರ್ತಿ ಅರುಂಧತಿ ರಾಯ್ ಅವರ ‘Walking With Comrades’ ಲೇಖನ ಪ್ರಕಟವಾಯ್ತು. ಇದರ ಕನ್ನಡ ಅನುವಾದವನ್ನು ಅದೇ ಸಮಯಕ್ಕೆ ಪ್ರಜವಾಣಿ ಪತ್ರಿಕೆಯ ಮುಖ ಪುಟದಲ್ಲಿ ಸುಮಾರು ದಿನ ಸರಣಿ ರೂಪದಲ್ಲಿ ಪ್ರಕಟ ಮಾಡಲಾಯಿತು. ಈ ಬರೆಹ ಎಷ್ಟು ತೀವ್ರವಾಗಿತ್ತೆಂದರೆ, ದಿನನಿತ್ಯ ಪತ್ರಿಕೆ ಬರುವ ಸಮಯ ಗೊತ್ತಿದ್ದರು ಒಂದು ಗಂಟೆ ಮುಂಚಿತವಾಗಿ ಕಾಯುತ್ತಿದ್ದ ನೆನಪು. ಪ್ರಜಾವಾಣಿ ಪತ್ರಿಕೆಯಲ್ಲಿ ಈ ಲೇಖನ ಪ್ರಕಟವಾದ ನಂತರ ಇದರ ಕುರಿತು ಪರ ಮತ್ತು ವಿರೋಧದ ಚರ್ಚೆ ಕೂಡ ಆಯಿತು. ದಿವಂಗತ ಡಿ. ಎಸ್. ನಾಗಭೂಷಣ್ ಅವರು ಅರುಂಧತಿಯವರ ಈ ಲೇಖನದ ಬಗ್ಗೆ ಬಹಳ ಅಸಮಧಾನ ವ್ಯಕ್ತಪಡಿಸಿ ಟೀಕೆ ಮಾಡಿದ್ದ ನೆನಪು. ಛತ್ತಿಸ್ ಗಡ್ ರಾಜ್ಯದ ದಾಂತೆವಾಡ ಅರಣ್ಯದಲ್ಲಿ ಖಾಸಗಿ ಕಂಪನಿಯೊಂದಕ್ಕೆ ಗಣಿಗಾರಿಕೆ ಮಾಡಲು ಸರ್ಕಾರ ಅನುಮತಿಸದ್ದನ್ನು ವಿರೋಧಿಸಿ ನಕ್ಸಲ್ ಮಾವೊಯಿಸ್ಟರ ಬಂಡಾಯ ಕೈಗೊಂಡರು. ಈ ಪ್ರತಿರೋಧವನ್ನು ದಮನ ಮಾಡಲು ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ರಾಜ್ಯ ಪೊಲಿಸರನ್ನು ಸರ್ಕಾರ ನೇಮಿಸಿತು. ಈ ಬಂಡಾಯವನ್ನು ದಮನ ಮಾಡಲು ಪೊಲೀಸ್ ಕೈಗೊಂಡ ಈ ಕಾರ್ಯಚರಣೆಯನ್ನು ‘ಅಪರೇಷನ್ ಗ್ರೀನ್ ಹಂಟ್’ ಎಂದು ಕೂಡ ಕರೆಯಲಾಗುತ್ತದೆ. ಅರುಂಧತಿ ರಾಯ್ ಈ ಬಂಡಾಯದಲ್ಲಿ ತೊಡಗಿದ್ದ ನಕ್ಷಲರ ಜೊತೆ ದಾಂತೆವಾಡದ ದಟ್ಟ ಅರಣ್ಯದಲ್ಲಿ ಹೆಜ್ಜೆ ಹಾಕುತ್ತಾ, ಪ್ರಭುತ್ವ ಮತ್ತು ಬಂಡಾಯಗಾರರ ನಡುವಿನ ಇಡಿ ಸಂಘರ್ಷ ಮತ್ತು ಅದರ ಹಿಂದಿನ ಹಿತಾಸಕ್ತಿ, ರಾಜಕಾರಣವನ್ನೆಲ್ಲಾ ನಿರೂಪಿಸದ ಲೇಖನವೇ ‘‘Walking With Comrades’
ಈ ಲೇಖನ ಬಂದ ಸ್ವಲ್ಪ ದಿನಗಳಲ್ಲೆ, ಅದೇ ದಾಂತೆವಾಡ ಅರಣ್ಯದಲ್ಲಿ ‘ಕೇಂದ್ರ ಮೀಸಲು ಪೊಲೀಸ್ ಪಡೆ’ ಮೇಲೆ ನಕ್ಷಲರು ನಡೆಸಿದ ದಾಳಿಯಲ್ಲಿ ಸುಮಾರು 70 ಪೊಲೀಸ್ (ಶ್ರೇಣಿಯಲ್ಲಿ ಅತ್ಯಂತ ಕೆಳಗಿನವರು) ಮೃತಪಟ್ಟರು.

ಸಂಗತಿ: 3
2012ರಲ್ಲಿ ಪ್ರಕಾಶ್ ಝಾ ನಿರ್ದೇಶನದ ‘ಚಕ್ರವ್ಯೂಹ’ ಸಿನಿಮಾ ತೆರೆಗೆ ಬಂತು. ಅಷ್ಟೊತ್ತಿಗೆ ನಮಗೆ ಪ್ರಕಾಶ್ ಝಾ ಸ್ವಲ್ಪ ಸೆನ್ಸಿಬಲ್ ನಿರ್ದೇಶಕ ಅನ್ನೊ ನಂಬಿಕೆ ಬಂದಿತ್ತು. ಈ ಸಿನಿಮಾದಲ್ಲಿ ನಕ್ಸಲ್ ದಮನ ಮಾಡೋದಿಕ್ಕೆ ನೇಮಕಗೊಂಡ ಪೊಲೀಸ್ ಅಧಿಕಾರಿ ತನ್ನ ಕಾರ್ಯದಲ್ಲಿ ಯಶಸ್ಸು ಆಗದೆ ಕೊನೆಗೆ ತನ್ನ ಆಪ್ತ ಸ್ನೇಹಿತನನ್ನೆ ನಕ್ಸಲ್ ಹೊರಾಟಗಾರರ ಸ್ನೇಹ ಬೆಳಸಿ ಅವರಲ್ಲಿ ಒಬ್ಬನಾಗಿ, ತನಗೆ ಅವರ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಲು ಕಳುಹಿಸಿಕೊಡುತ್ತಾನೆ. ಈ ಗೂಡಚಾರಿ ಕೆಲಸ ಮಾಡಲು ಹೋದ ಸ್ನೇಹಿತ ಪ್ರಾರಂಭದಲ್ಲಿ ಸ್ನೇಹಿತನ ಪರವಾಗಿ ಕೆಲಸ ಮಾಡಿದರೂ, ನಂತರ ನಕ್ಷಲ್ ಹೋರಾಟದ ಹಿಂದಿನ ಕಾರಣ ಮತ್ತು ಪೊಲೀಸ್ ದೌರ್ಜನ್ಯವನ್ನು ನೋಡಿ ಕೊನೆಗೆ ಅವನು ನಕ್ಸಲ್ ಹೋರಾಟದಲ್ಲಿ ಒಬ್ಬನಾಗಿಬಿಡುತ್ತಾನೆ. ಈ ಸಿನಿಮಾ ಪ್ಲಾಟ್ ಕನ್ವೀನ್ಸ್ ಏನೊ ಆಯ್ತು, ಇಷ್ಟೊತ್ತಿಗೆ ಅರುಂಧತಿ ರಾಯ್ ಲೇಖನ ಓದಿದ ಕಾರಣೊಕ್ಕೊ ಏನೊ ನಕ್ಷಲ್ ಪಾಯಿಂಟ್ ಆಫ್ ವ್ಯವೂನಿಂದ ಸ್ವಲ್ಪ ಜಾಳು ಜಾಳು ಅನಿಸಿತ್ತು.

ಯಾರೊ ಒಬ್ಬ ಕಾರ್ಪೊರೇಟ್ ಕುಳ ಮೈನಿಂಗ್ ಮಾಡೋದಿಕ್ಕೆ ಸಾವಿರಾರು ಜನರನ್ನ ತಮ್ಮ ಗುರುತು ಅಸ್ಥಿತ್ವದಿಂದಲೇ ಇಲ್ಲವಾಗಿಸಲು ಮುಂದಾಗುವುದು ಪ್ರಜಾಪ್ರಭುತ್ವದ ಚೋದ್ಯವೇ ಸರಿ. ಒಂದು ಪಕ್ಷ ಆ ಕಾರ್ಯದಲ್ಲಿ ಲಕ್ಷಾಂತರ ಜನರ ಹಿತಾಶಕ್ತಿ ಇದೆ

ಅಂದಾಗಲೂ ಇನ್ನೊಬ್ಬರ ಅಸ್ಥಿತ್ವನ್ನೆ ಇಲ್ಲವಾಗಿಸಿ ಅವರ ಘನತೆಯನ್ನು ಪ್ರಭುತ್ವ ತನ್ನ ಬೂಟಿನ ಕಾಲಿನ ಕೆಳಗಿಟ್ಟು ವಸಕಿಹಾಕಿ ಇನ್ನೊಬ್ಬರ ಉದ್ಧಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ. ಯಾವುದನ್ನೆ ಸಾಧಿಸಬೇಕಾದರು ಅದು ವಿಶ್ವಾಸದಿಂದಲೇ ಜರುಗಬೇಕು. ಈ ಸಂಘರ್ಷದಲ್ಲಿ ಪರ ಮತ್ತು ವಿರೋಧ ಎರಡು ಕಡೆಯಲ್ಲೂ ಸಾಯೋರು ಮಾತ್ರ ಬಡ ಮತ್ತು ತಳ ಸಮುದಾಯದವರೇ ಇದು ಪ್ರಜಾಪ್ರಭುತ್ವದ ಮತ್ತೊಂದು ವೈರುದ್ಯ.

ವೆಟ್ರಿಮಾರನ್ ಸಿನಿಮಾ ಸಂಪೂರ್ಣ ಪ್ರಭುತ್ವ ನಡೆಸುವ ಹಿಂಸೆ ಮತ್ತು ಮನುಷ್ಯತ್ವ ನಡುವಿನ ಹೋರಾಟ…..

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!