Thursday, September 19, 2024

ಪ್ರಾಯೋಗಿಕ ಆವೃತ್ತಿ

ಅನುಭವಿ ಉದ್ಯಮಿಗಳ ಮಾರ್ಗದರ್ಶನ ಪಡೆಯಿರಿ: ಪದವೀಧರರಿಗೆ ವಿಜಯ್ ಆನಂದ್ ಕಿವಿಮಾತು

ಪದವಿ ಗಳಿಸಿಕೊಂಡು ಮುಂದೆ ಕೆಲಸ ಮಾಡಲು ಇಚ್ಚಿಸುವವರು ಹಾಗೂ ಸ್ವಂತ ಉದ್ಯಮವನ್ನು ಸ್ಥಾಪಿಸಬೇಕೆಂಬ ಅಭಿಲಾಷೆ ಹೊಂದಿರುವವರು, ಅನುಭವಿ ಉದ್ಯಮಿಗಳ ಮಾರ್ಗದರ್ಶನ, ಸಲಹೆ ಪಡೆಯಿರಿ ಎಂದು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ನವ ಪದವೀಧರರಿಗೆ ಕಿವಿಮಾತು ಹೇಳಿದರು.

ಮಂಡ್ಯ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ನಡೆದ 14ನೇ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಈಗಾಗಲೇ ಟೆಸ್ಟ್ ಯಂತ್ರ, ಸಾಫ್ಟ್‌ವೇರ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಫೈರ್ ಫಿಂಕ್ ಮತ್ತು ಕ್ಯೂಸೈಡರ್ಸ್ ಮತ್ತು ಡೆಸ್ಟ್ರೇಡರ್ಸ್ ಕಂಪನಿಯ ಸಹ ಸಂಸ್ಥಾಪಕರಾಗಿರುವ ಗಿರೀಶ್ ಶಿವಣ್ಣ ಅವರು ಇದೆ ಪಿಇಎಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ, ಇಂದು ಅವರ ಕಂಪನಿ ವರ್ಷಕ್ಕೆ ₹ 1,000 ಕೋಟಿ ವ್ಯವಹಾರ ನಡೆಸುತ್ತಿದೆ, ಅದಕ್ಕೆ ಅವರ ಪರಿಶ್ರಮ ಕಾರಣವಾಗಿದೆ ಎಂದರು.

ಹೊಸದಾಗಿ ಕಂಪನಿ ತೆರೆಯುವ ಹುಮ್ಮಸ್ಸಿನಲ್ಲಿರುವವರು, ಗಿರೀಶ್ ಶಿವಣ್ಣ ಅವರಂತಹ ಅನುಭವಿಗಳಿಂದ ಸಲಹೆ, ಮಾರ್ಗದರ್ಶನಗಳನ್ನು ಪಡೆಯಬೇಕು, ನಿರ್ದಿಷ್ಟವಾದ ಸ್ಪಷ್ಟ ಗುರಿಯನ್ನು ಇಟ್ಟುಕೊಂಡು ಪರಿಶ್ರಮ ಹಾಕಿದರೆ ಯಾವುದೇ ಉದ್ಯಮದಲ್ಲಿ ಯಶಸ್ವಿಯಾಗಬಹುದು ಎಂದರು.

ನೀವು ಮುಂದೆ ಎಷ್ಟೆ ಎತ್ತರಕ್ಕೆ ಬೆಳೆದರೂ ಹುಟ್ಟಿದ ಊರು, ತಂದೆ-ತಾಯಿ ಹಾಗೂ ನೀವು ಕಲಿತ ವಿದ್ಯಾಸಂಸ್ಥೆನ್ನು ಮರೆಯಬೇಡಿ, ಹಾಗಾಗಿ ಇಲ್ಲಿಗೆ ಭೇಟಿ ನೀಡಿ, ನಮಗೆ ನಿಮ್ಮನ್ನು ನೋಡಿ ಸಂತೋಷವಾಗುತ್ತದೆ ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ  ಟೆಸ್ಟ್ ಯಂತ್ರ, ಸಾಫ್ಟ್‌ವೇರ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಫೈರ್ ಫಿಂಕ್ ಮತ್ತು ಕ್ಯೂಸೈಡರ್ಸ್ ಮತ್ತು ಡೆಸ್ಟ್ರೇಡರ್ಸ್ ಸಹ ಸಂಸ್ಥಾಪಕ ಗಿರೀಶ್ ಶಿವಣ್ಣ ಭಾಗವಹಿಸಿ ಪದವೀಧರರಿಗೆ ಸಲಹೆಗಳನ್ನು ನೀಡಿದರು.

ಸಮಾರಂಭದಲ್ಲಿ 722 ಪದವಿ ವಿದ್ಯಾರ್ಥಿಗಳು ಹಾಗೂ 133 ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು. 8 ಪದವಿ ಮತ್ತು 5 ಸ್ನಾತಕೋತ್ತರ ಪದವಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ಪಿಇಟಿ ಕಾರ್ಯದರ್ಶಿ ಎಸ್. ಎಲ್.ಶಿವಪ್ರಸಾದ್, ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಎಂ.ನಂಜುಂಡಸ್ವಾಮಿ, ಶೈಕ್ಷಣಿಕ ಡೀನ್ ಡಾ. ಬಿ ದಿನೇಶ್ ಪ್ರಭು, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಕೆ.ಜೆ. ಮಹೇಂದ್ರ ಬಾಬು, ಶೈಕ್ಷಣಿಕ ಉಪ ಡೀನ್ ಡಾ.ಉಮೇಶ್ ಡಿ ಆರ್ ಮತ್ತು ಉಪ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಚಂದ್ರಶೇಖರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!