Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ಯಾರಿಸ್‌ ಒಲಿಂಪಿಕ್ಸ್‌| ವಿನೇಶ್‌ ಫೋಗಾಟ್‌ ಅನರ್ಹತೆ ಹಿಂದೆ ದೊಡ್ಡ ಷಡ್ಯಂತ್ರವಿದೆ: ವಿಜೇಂದರ್‌ ಸಿಂಗ್‌

ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕುಸ್ತಿಪಟು ವಿನೇಶ್‌ ಫೋಗಾಟ್‌ ಪದಕ ಗೆಲ್ಲದೇ ಇರುವಂತೆ ಮಾಡಲು ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಮಾಜಿ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಹೇಳಿದ್ದಾರೆ.

ಮಹಿಳೆಯರ 50 ಕೆ.ಜಿ ಫ್ರೀಸ್ಟ್ರೈಲ್‌ ಕುಸ್ತಿಯಲ್ಲಿ ವಿನೇಶ್‌ ಫೋಗಾಟ್‌ ಫೈನಲ್‌ ತಲುಪಿದ್ದರು. ಆದರೆ, ಫೈನಲ್‌ ಪಂದ್ಯಕ್ಕೂ ಮುನ್ನ ದೇಹದ ತೂಕ ಅಳತೆ ಮಾಡಿದ ಸಂದರ್ಭದಲ್ಲಿ 100-150 ಗ್ರಾಮ್ ಹೆಚ್ಚುವರಿ ತೂಕ ಕಾಣಿಸಿಕೊಂಡ ಪರಿಣಾಮ ಅವರನ್ನು ಅನರ್ಹಗೊಳಿಸಲಾಗಿದೆ.  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಹಾಗೂ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ವಿಜೇಂದರ್ ಸಿಂಗ್, 100 ಗ್ರಾಂ ತೂಕ ಇಳಿಸಿಕೊಳ್ಳಲು ಅಥ್ಲೀಟ್‌ಗೆ ಸಮಯ ನೀಡಬಹುದಿತ್ತು. ಏಕಾಏಕಿ ಅನರ್ಹಗೊಳಿಸಿರುವುದು ಶಂಕಾಸ್ಪದವಾಗಿದೆ. ಇದು ವಿನೇಶ್‌ ಮತ್ತು ಭಾರತದ ವಿರುದ್ಧ ನಡೆಸಿರುವ ಷಡ್ಯಂತ್ರ ಎಂಬಂತೆ ಕಾಣಿಸುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಬುಧವಾರ ರಾತ್ರಿ ನಡೆಯಬೇಕಿದ್ದ ಫೈನಲ್‌ ಪಂದ್ಯದಲ್ಲಿ ಭಾರತೀಯ ಕುಸ್ತಿಪಟು ಅಮೆರಿಕದ ಸಾರಾ ಹಿಲ್‌ಡೆಬ್ರಾಂಟ್ ಎದುರು ಪೈಪೋಟಿ ನಡೆಸಬೇಕಿತ್ತು.

ಒಲಿಂಪಿಕ್ಸ್‌ ಸಮಿತಿ ನಿಯಮದ ಪ್ರಕಾರ ಡಿಸ್‌ಕ್ವಾಲಿಫೈ ಆದಂತಹ ಅಥ್ಲೀಟ್‌ಗೆ ಸ್ಪರ್ಧೆಯ ಕೊನೇ ಸ್ಥಾನ ಸಿಗುತ್ತದೆ. ಹೀಗಾಗಿ ಫೈನಲ್ ತಲುಪಿ ಕನಿಷ್ಠ ಬೆಳ್ಳಿ ಪದಕ ಖಾತ್ರಿ ಪಡಿಸಿಕೊಂಡಿದ್ದ ವಿನೇಶ್‌ ಫೋಗಾಟ್‌ ಈಗ ಯಾವುದೇ ಪದಕ ಇಲ್ಲದಂತೆ ತಾಯ್ನಾಡಿಗೆ ಹಿಂದಿರುಗುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಇದು ದೊಡ್ಡ ಷಡ್ಯಂತರದ ಮಾದರಿ ಕಾಣಿಸುತ್ತಿದೆ ಎಂದು ಬಾಕ್ಸರ್‌ ವಿಜೇಂದ್ರ ಸಿಂಗ್ ಸೇರಿದಂತೆ ಹಲವರು ಸೋಷಿಯಲ್ ಮೀಡಿಯಾ ಮೂಲಕ ಸಂಶಯ ಹೊರಹಾಕಿದ್ದಾರೆ.

“>

 

ರೀತಿಯ ಘಟನೆ ಎಂದೂ ಕಂಡಿಲ್ಲ

“ನಾವು ಹಿಂದೆ ಎಂದೂ ಕೂಡ ಈ ರೀತಿಯ ಘಟನೆ ಕಂಡಿಲ್ಲ, ಕೇಳಿಲ್ಲ. 3 ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಅನುಭವ ನನ್ನಲ್ಲಿದೆ. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಯಾರನ್ನಾದರೂ ಕೇಳಬಹುದು ಕೇವಲ 100 ಗ್ರಾಮ್ ತೂಕ ಹೆಚ್ಚಿದ್ದರೆ ಅದರ ವಿರುದ್ಧ ಇಷ್ಟು ದೊಡ್ಡ ಕ್ರಮ ಯಾರೂ ತೆಗೆದುಕೊಳ್ಳುವುದಿಲ್ಲ. 100 ಗ್ರಾಮ್ ತೂಕ ಇಳಿಸಲು ಹೆಚ್ಚುವರಿ ಸಮಯ ಕೊಟ್ಟೇ ಕೊಡುತ್ತಾರೆ. ಆದರೆ ನೇರವಾಗಿ ಅನರ್ಹಗೊಳಿಸಿರುವುದು ಅತ್ಯಂತ ಕಠಿಣ ನಿರ್ಧಾರ. ಯಾವ ಅಥ್ಲೀಟ್‌ ವಿರುದ್ಧವೂ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ವಿನೇಶ್ ವಿರುದ್ಧ ಹೀಗಾಗಿರುವುದು ಏಕೆ? ಎಂಬುದು ಇನ್ನು ತಿಳಿದುಬಂದಿಲ್ಲ,” ಎಂದು ವಿಜೇಂದರ್‌ ಸಿಂಗ್‌ ಐಎಎನ್‌ಎಸ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

“ಒಲಿಂಪಿಕ್ಸ್‌ ವಿಲೇಜ್‌ನಲ್ಲಿ ಇರುವ ಭಾರತದ ಅಧಿಕಾರಿಗಳು ಈ ಬಗ್ಗೆ ಪ್ರತಿಭಟನೆ ಮಾಡಬೇಕು. ಭಾರತೀಯ ಅಥ್ಲೀಟ್‌ಗಳು ಒಲಿಂಪಿಕ್ಸ್‌ ಬಹಿಷ್ಕರಿಸಬೇಕು. ಕೇವಲ 100 ಗ್ರಾಮ್‌ ಹೆಚ್ಚು ಎಂಬ ಕಾರಣಕ್ಕೆ ಅನರ್ಹಗೊಳಿಸುವುದು ಸರಿಯಲ್ಲ. ಇದರ ಹಿಂದೆ ಯಾರದ್ದೆಲ್ಲಾ ಕೈವಾಡ ಇದೆ ಎಂಬುದರ ಬಗ್ಗೆ ತನಿಖೆ ಆಗಬೇಕಿದೆ,” ಎಂದಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!