Thursday, October 10, 2024

ಪ್ರಾಯೋಗಿಕ ಆವೃತ್ತಿ

ಮಳೆಹಾನಿ ಪ್ರದೇಶಗಳಿಗೆ ಡಿಸಿ ಅಶ್ವತಿ ಭೇಟಿ

ಪಾಂಡವಪುರ ಉಪವಿಭಾಗದ ತಾಲ್ಲೂಕುಗಳಾದ ಶ್ರೀರಂಗಪಟ್ಟಣ,ಪಾಂಡವಪುರ, ಕೆ.ಆರ್.ಪೇಟೆ & ನಾಗಮಂಗಲ ತಾಲ್ಲೂಕುಗಳಲ್ಲಿ ಮಳೆ ಹಾಗೂ ಸಿಡಿಲಿನಿಂದ ಮೃತಪಟ್ಟ ಜನ-ಜಾನುವಾರುಗಳು ಮತ್ತು ಹಾನಿಗೊಳಾಗದ ಬೆಳೆಗಳ (ತೋಟಗಾರಿಕೆ ) ಪ್ರದೇಶಗಳಿಗೆ ಜಿಲ್ಲಾಧಿಕಾರಿ ಎಸ್. ಅಶ್ವತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಹೋಬಳಿಯ ಕರೀಮಂಟಿ ಗ್ರಾಮದಲ್ಲಿ ಬಾಳೆ ಮತ್ತು ತೆಂಗು ಹಾನಿ, ರಂಗನತಿಟ್ಟು ಪಕ್ಷಿಧಾಮದಲ್ಲಿ ಮರಗಳ ಹಾನಿ, ಪಾಲಹಳ್ಳಿ ಬೆಳಗೊಳದಲ್ಲಿ ಮನೆಗಳ ಹಾನಿ, ಪಾಂಡವಪುರ ಚಿನಕುರಳಿ ಹೋಬಳಿಯ ಡಿಂಕದ ಶೆಟ್ಟಹಳ್ಳಿ ಮತ್ತು ವಳಲೆಕಟ್ಟೆ ಕೊಪ್ಪಲು ಸಿಡಿಲು ಬಡಿದು ಹಸು ಹಾಗೂ ಮಹಿಳೆ ಸಾವನ್ನಪ್ಪಿದ ಗ್ರಾಮಗಳಿಗೆ ಭೇಟಿ ಪರಿಶೀಲನೆ ನಡೆಸಿದರು.

ಕೃಷ್ಣರಾಜಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಬಣ್ಣೆನಹಳ್ಳಿ ಹಾಗೂ ಬೂಕನಕೆರೆ ಹೋಬಳಿಯ ತಗಡೂರಿನಲ್ಲಿ ತೆಂಗಿನ ಮರಗಳು ಕಸಬಾ ಹೋಬಳಿ ಬಂಡಿಹೊಳೆ ಅಡಿಕೆ ಮತ್ತು ತೆಂಗಿನ ಮರಗಳು, ನಾಗಮಂಗಲ ದೇವಲಾಪುರ ಹೋಬಳಿ ಹುಲ್ಲೇನಹಳ್ಳಿ ಮತ್ತು ಬಿಂಡೇನಹಳ್ಳಿ ಬಾಳೆತೋಟ ಹಾಗೂ ಮನೆಗಳ ಹಾನಿ ಪ್ರದೇಶಕ್ಕೆ ಭೇಟಿ ಮಾಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸರ್ಕಾರದಿಂದ ಬರುವ ಪರಿಹಾರಗಳನ್ನು ಶೀಘ್ರವಾಗಿ ಕೊಡಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ, ಕೆ.ಆರ್ ಪೇಟೆಯ ತಹಶೀಲ್ದಾರ್ ಎಂ. ವಿ. ರೂಪ, ಶ್ರೀರಂಗಪಟ್ಟಣದ ತಹಶೀಲ್ದಾರ್ ಶ್ವೇತಾ ಎನ್. ರವೀಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!