Thursday, September 19, 2024

ಪ್ರಾಯೋಗಿಕ ಆವೃತ್ತಿ

ವಕೀಲ ವೃತ್ತಿಯು ಮಹತ್ವದ ಜನಸೇವೆಯ ಕಾಯಕ- ವಿಶಾಲ್ ರಘು

ಪ್ರಸ್ತುತ ದಿನಗಳಲ್ಲಿ ಕಾನೂನು ಪದವಿ ಪಡೆದವರು ಎಲ್ಲಿ ಬೇಕಾದರೂ ಸಲ್ಲುತ್ತಾರೆ ಎಂದು ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಎಚ್.ಎಲ್ ವಿಶಾಲ್ ರಘು ಹೇಳಿದರು.

ಮಂಡ್ಯ ನಗರದ ವಕೀಲರ ಸಂಘದ ಆವರಣದಲ್ಲಿ ಜಿಲ್ಲಾ ವಕೀಲರ ಸಂಘ ಆಯೋಜಿಸಿದ್ದ 2 ದಿನಗಳ ರಾಜ್ಯಮಟ್ಟದ ವಕೀಲರ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂದೆ ಎಲ್ಲೂ ಸಲ್ಲದವರು ಕಾನೂನು ವೃತ್ತಿಯಲ್ಲಿ ಸಲ್ಲುತ್ತಾರೆ ಎನ್ನುವು ಮಾತಿತ್ತು, ಈಗ ಬದಲಾಗಿದೆ, ದೊಡ್ಡ ದೊಡ್ಡ ಶ್ರೀಮಂತರು- ನ್ಯಾಯಾಲಯಗಳ ನ್ಯಾಯಾಧೀಶರ ಮಕ್ಕಳು ಇಂಜಿನಿಯರ್, ಡಾಕ್ಟರ್‌ನಂದ ವೃತ್ತಿಗಳಿಗೆ ಮಾತ್ರ ವಿದ್ಯಾಭ್ಯಾಸ ಮಾಡಿಸುತ್ತಿದ್ದರು, ಕಾಲ ಬದಲಾಗಿದೆ, ವಕೀಲ ವೃತ್ತಿಯು ಜನಸೇವೆಯ ಕಾಯಕವಾಗಿದೆ ಎಂದು ನುಡಿದರು.

ವಕೀಲ ವೃತ್ತಿಯ ಕ್ಷೇತ್ರದಲ್ಲಿ ನಾವು ಜಾತಿ ಮತ ಭೇದವಿಲ್ಲದೆ ಒಂದೇ ಕುಟುಂಬದಂತೆ ಸೇವೆ ಸಲ್ಲಿಸುತ್ತಿದ್ದೇವೆ, ವಕೀಲ ವೃತ್ತಿ ನಮಗೆ ಬಹಳ ಹೆಮ್ಮೆಯಿದೆ, ಕಾರಣ ಹಿಂದೆ ಹೇಳುತ್ತಿದ್ದರು, ಎಲ್ಲೂ ಸಲ್ಲದವರು ಇಲ್ಲಿ ಸಲ್ಲುತ್ತಾರೆ ಎಂದು, ಇಂದಿನ ಪರಿಸ್ಥಿತಿ ತುಂಬ ಬದಲಾಗಿದೆ, ಹೆಚ್ಚು ಜನ ವಕೀಲ ಪದವಿ ಪಡೆದು ಬರುತ್ತಿದ್ದಾರೆ ಎಂದು ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ ರಮಾ ಮಾತನಾಡಿ, ನ್ಯಾಯಾಲಯದ ಕಲಾಪಗಳಲ್ಲೇ ಇರುವ ವಕೀಲರಿಗೆ ಕೀಡೆ, ಸಾಂಸ್ಕೃತಿಕ ಚಟುವಟಿಕೆ ಅತ್ಯವಶ್ಯಕ, ವಿವೇಚನಾಶಕ್ತಿ ಇರುವ ಒಬ್ಬ ಮನುಷ್ಯನಿಗೆ ಅವಶ್ಯಕತೆ ಇರುವಂತೆಯೇ ಕ್ರೀಡೆಯೂ ಅವಶ್ಯವಿದೆ ಎಂದು ನುಡಿದರು.

ದೈಹಿಕ ಆರೋಗ್ಯಕ್ಕಾಗಿಯಲ್ಲದೆ ಮಾನಸಿಕ ಆರೋಗ್ಯಕ್ಕೂ ಕ್ರೀಡೆ ಬೇಕಿದೆ, ನಿರಂತರವಾಗಿ ತೊಡಗಿಸಿಕೊಂಡರೆ ಮನಸ್ಸು ಉಲ್ಲಾಸದಿಂದ ಇರುತ್ತದೆ, ತಮ್ಮ ಮಕ್ಕಳನ್ನು ಒಂದಲ್ಲಾ ಒಂದು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಿ ಒತ್ತಡದಿಂದ ಸಮತೋಲನತ್ತ ಬರಬಹುದು ಎಂದು ಕಿವಿಮಾತೇಳಿದರು.

ಇದೇ ಸಂದರ್ಭದಲ್ಲಿ ಸಾಧಕರನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು, ಪಿಇಟಿ ಮತ್ತು ವಿವಿಧ ಕ್ರೀಡಾಂಗಣಗಳಲ್ಲಿ ವಕೀಲರಿಗಾಗಿ ಆಯೋಜಿಸಿದ್ದ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಟಿ ರಾಜೇಂದ್ರ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್,  ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ. ಎಸ್ ವಿಜಯ ಆನಂದ್, ಹೈಕೋರ್ಟ್ ಹಿರಿಯ ವಕೀಲ ಆರ್ ಎಸ್. ರವಿ, ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಜಿ ರವಿ,  ಹೈ ಕೋರ್ಟ್ ವಕೀಲ ಅನಿಲ್ ಕುಮಾರ್,  ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಡಿ.ಎಂ ಮಹೇಶ್, ಜಂಟಿ ಕಾರ್ಯದರ್ಶಿ ಮಹದೇವ್, ಪದಾಧಿಕಾರಿಗಳಾದ ಸೀತಾರಾಮ, ಎಂ ರೂಪ, ಎಂ ಶ್ರೀನಿವಾಸ್, ರಾಮಚಂದ್ರ, ಗಿರಿಜಾಂಬಿಕೆ, ರತಿ ಕುಮಾರಿ, ಅಮೃತ್ , ಯಶ್ವಂತ್  ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!