Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಲಾ ಪರಂಪರೆಗೆ ವಿಶ್ವಕರ್ಮರ ಕೊಡುಗೆ ಇಂದಿಗೂ ಮಾದರಿ: ಕೃಷ್ಣಾಚಾರ್

ವಿಶ್ವಕರ್ಮ ಸಮುದಾಯ ತನ್ನ ಕಲಾ ಪರಂಪರೆ ಹಾಗೂ ವಾಸ್ತುಶಿಲ್ಪಕ್ಕೆ ನೀಡಿರುವ ಜೀವಂತ ಕಲೆ ಇಂದಿಗೂ ಮಾದರಿಯಾಗಿ ಆಗಿರುವುದು ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ ಎಂದು ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಕೃಷ್ಣಚಾರ್ ತಿಳಿಸಿದರು.

ನಾಗಮಂಗಲ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ವಿಶ್ವಕರ್ಮ ಸಮಾಜ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ವಿಶ್ವಕರ್ಮ ಸಮುದಾಯಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಲುಪಿಸಲು ಪೂರಕವಾದ ವ್ಯವಸ್ಥೆ ಕಲ್ಪಿಸಿದಲ್ಲಿ ಸಮುದಾಯವು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ,ಯಾವುದೇ ಕಾಲಘಟ್ಟದ ಇತಿಹಾಸವನ್ನು ಆ ಪ್ರದೇಶದ ವಾಸ್ತುಶಿಲ್ಪ ಕಲೆಗಳನ್ನು ಅಭ್ಯಾಸ ಮಾಡುವುದರ ಮೂಲಕ ಅರಿಯಬಹುದು, ವಿಶ್ವಕರ್ಮರ ಕೆತ್ತನೆ ಕಾರ್ಯಗಳ ಕಲೆಯು ಇಂದಿನ ಸಮಾಜಕ್ಕೆ ಕೊಡುಗೆ ನೀಡಿರುವುದನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ.

ವಿಶ್ವಕರ್ಮ ಸಮುದಾಯವು ಅನಾದಿಕಾಲದಿಂದಲೂ ಸಮುದಾಯದ ಕುಲ ಕಸುಬುಗಳನ್ನು ಮಾಡುತ್ತ ತಮ್ಮ ಕಲೆ ತಮ್ಮ ಶ್ರಮ ಎರಡನ್ನು ಮೈಗೂಡಿಸಿಕೊಂಡು ಸಮುದಾಯ ನಾಡಿಗೆ ಗುರುತಿಸಿದ್ದರು, ಇಂದು ನಮ್ಮಗಳ ಶ್ರಮ ಸಾರ್ಥಕತೆಗೆ ಸಮುದಾಯದ ಕಲಾಪ್ರೌಡಿಮೆ ವಿಶ್ವಕರ್ಮರಿಗೆ ಸಲ್ಲುತ್ತದೆ ಎಂದರು.

ಸಮಾರಂಭದಲ್ಲಿ ಶಿಕ್ಷಕರಾದ ರವಿಕುಮಾರ್ ಮೀನಾಕ್ಷಮ್ಮ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಕವಿತಾ, ಪದಾಧಿಕಾರಿಗಳಾದ ಉಮೇಶ್, ಅಶೋಕ್, ಯೋಗೇಶ್, ರಾಜು, ಬಾಬು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!