ಮದ್ದೂರು ಪಟ್ಟಣದ ಮತ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಅಶ್ವತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮತಗಟ್ಟೆ ಅಧಿಕಾರಿಗಳಿಂದ ಮತದಾನದ ಬಗ್ಗೆ ಮಾಹಿತಿ ಪಡೆದು ಯಾವುದೇ ಅಹಿತಕರ ಘಟನೆ ನಡೆಯದ ಹಾಗೆ ನಿಗಾವಹಿಸಿ,ಸುಗಮ ಮತದಾನಕ್ಕೆ ಸಹಕರಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಅಶ್ವತಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಲಾಗಿದ್ದು, ಸುಗಮವಾಗಿ ಮತದಾನ ನಡೆಯುತ್ತಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 45 ಮತ ಕೇಂದ್ರಗಳಿವೆ. ಈಗಾಗಲೇ ಎಲ್ಲಡೆ ಮತದಾನ ಬಿರುಸಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಈ ವೇಳೆ ತಹಸಿಲ್ದಾರ್ ನರಸಿಂಹಮೂರ್ತಿ, ಅಧಿಕಾರಿಗಳಾದ ಮಂಜುನಾಥ್, ಜಗದೀಶ್, ಪವನ್, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್, ಹರೀಶ್ ಗೌಡ. ಸೇರಿದಂತೆ ಇತರರು ಹಾಜರಿದ್ದರು.