Thursday, September 19, 2024

ಪ್ರಾಯೋಗಿಕ ಆವೃತ್ತಿ

ಚುನಾವಣೆ 2023 | ನಾಳೆಯಿಂದ ಬ್ಯಾಲೆಟ್ ಪೇಪರ್ ಮತದಾನ ಆರಂಭ

ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ನಾಳೆಯಿಂದ (ಏ.29) ಬ್ಯಾಲೆಟ್ ಪೇಪರ್ ಮತದಾನ ಶುರುವಾಗಲಿದೆ.

80 ವರ್ಷ ಮೇಲ್ಪಟ್ಟ ವೃದ್ಧರು, ವಿಕಲಚೇತನರು, ಪೊಲೀಸರು, ಚುನಾವಣಾ ಸಿಬ್ಬಂದಿಗಳು ಮತ್ತು ಪತ್ರಕರ್ತರು ಬ್ಯಾಲೆಟ್ ಪೇಪರ್ ಮೂಲಕ ನಾಳೆಯಿಂದ ತಮ್ಮ ಹಕ್ಕು ಚಲಾಯಿಸುತ್ತಾರೆ. ಏಪ್ರಿಲ್ 29 ರಿಂದ ಮೇ 6ರವರೆಗೆ ಬ್ಯಾಲೆಟ್ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

80 ವರ್ಷ ಮೇಲ್ಪಟ್ಟ ವೃದ್ಧರಿಗೆ ಹಾಗೂ ಅಂಗವಿಕಲರಿಗೆ ಮನೆ ಬಳಿಯೇ ವೋಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ, ಚುನಾವಣಾ ಕೆಲಸಕ್ಕೆ ನಿಯೋಜನೆ ಆಗಿರುವ ಅಧಿಕಾರಿಗಳು ಮತ್ತು ಪತ್ರಕರ್ತರು ಅವರವರ ಕ್ಷೇತ್ರಗಳಲ್ಲಿ ನಾಳೆಯಿಂದ ಬ್ಯಾಲೆಟ್ ವೋಟಿಂಗ್ ಮಾಡಬಹುದಾಗಿದೆ. ಇನ್ನುಳಿದವರು ಮೇ 10ರಂದೇ ಮತಗಟ್ಟೆಗೆ ಹೋಗಿ ಮತದಾನ ಮಾಡಬೇಕು.

ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಬೆ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ರಾಜ್ಯದಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ ಮತದಾರರು 80,250 ಇದ್ದಾರೆ. ಇವೆಲ್ಲರೂ ಮನೆಯಿಂದಲೇ ಮತದಾನ ಮಾಡುವುದಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಸುಮಾರು 47,488 ಯೋಧರಿಗೆ ಚುನಾವಣಾ ಆಯೋಗ ಈಗಾಗಲೇ ಮತಪತ್ರ ಕಳುಹಿಸಿದೆ. 19279 ವಿಕಲ ಚೇತನರು, 13771 ಅಗತ್ಯ ಸೇವೆ ಒದಗಿಸುವವರು ನೋಂದಾಯಿಸಿದ್ದಾರೆ.

ಮನೆಯಿಂದಲೇ ಮತದಾನ ಪ್ರಕ್ರಿಯೆ ಹೇಗೆ ನಡೆಯಲಿದೆ?

ಚುನಾವಣಾ ಆಯೋಗದ ಸಿಬ್ಬಂದಿಗಳು 80 ವರ್ಷ ಮೇಲ್ಪಟ್ಟ ವೃದ್ಧರ ಮನೆ ಬಾಗಿಲಿಗೆ ಬ್ಯಾಲೆಟ್ ಪೇಪರ್ ನೀಡುತ್ತಾರೆ. ಈ ಮೂಲಕ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಗೌಪ್ಯವಾಗಿ ಮತ ಚಲಾವಣೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ಗೌಪ್ಯ ಮತ ಚಲಾಯಿಸುವಾಗ ಸ್ಥಳದಲ್ಲಿ ಚುನಾವಣೆ ಸಿಬ್ಬಂದಿ ಸೇರಿದಂತೆ ಸ್ಥಳೀಯ ಪೊಲೀಸರು ಇರಲಿದ್ದಾರೆ. ಅಲ್ಲದೇ ಮತದಾನದ ಪ್ರಕ್ರಿಯೆಯನ್ನು ಚಿತ್ರೀಕರಣ ಮಾಡಲಾಗುತ್ತದೆ. ಇನ್ನು ಮತದಾನದ ನಂತರ ಮತ ಪೆಟ್ಟಿಗೆಗಳನ್ನು ಈಗಾಗಲೇ ಮೀಸಲಿಟ್ಟಿರುವ ಸ್ಟ್ರಾಂಗ್ ರೂಮ್ ಗೆ ಶಿಫ್ಟ್ ಮಾಡಲಾಗುತ್ತದೆ.

ಬ್ಯಾಲೆಟ್ ಪೇಪರ್ ಮತಗಳನ್ನೂ ಸಹ ಮೇ 13ರಂದು ಎಣಿಕೆ ಮಾಡಲಾಗುತ್ತದೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!