Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿದ್ಯುನ್ಮಾನ ಮತ ಯಂತ್ರಗಳ ಪ್ರಥಮ ಹಂತದ ಪರಿಶೀಲನೆ ಪ್ರಾರಂಭ

ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ – 2023ರ ವಿದ್ಯುನ್ಮಾನ ಮತ ಯಂತ್ರಗಳ ಪ್ರಥಮ ಹಂತದ ಪರಶೀಲನೆ ಕಾರ್ಯ ಜಿಲ್ಲೆಯಲ್ಲಿ ಇಂದಿನಿಂದ (ಜನವರಿ 31) ಪ್ರಾರಂಭವಾಗಿದೆ.

ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ರಾಜೇಂದ್ರ ಚೋಳನ್ ಅವರು ಇಂದು ಮತಯಂತ್ರಗಳ ಭದ್ರತಾ ಕೊಠಡಿಗೆ ಭೇಟಿ ನೀಡಿ ಕೆಲಸಗಳ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಇಂದಿನಿಂದ ಎಫ್ಎಲ್ ಸಿ (ಫಸ್ಟ್ ಲೇವೆಲ್ ಚೆಕಿಂಗ್) ಜಿಲ್ಲೆಯಲ್ಲಿ ಪ್ರಾರಂಭವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.

ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿ ಪ್ಯಾಟ್ ಗಳು ಮಂಡ್ಯ ಜಿಲ್ಲೆಗೆ ನೀಡಲಾಗಿದ್ದು ವಿದ್ಯುನ್ಮಾನ ಮತ ಯಂತ್ರಗಳು ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ. 6 ದಿನಗಳ ಕಾಲ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮುಖಂಡರ ಸಮಕ್ಷಮದಲ್ಲಿ ಪರಿಶೀಲನೆ ನಡೆಸಲಾಗುತ್ತದೆ. 96 ವೋಟ್ ನ್ನು ಪೋಲ್ ಮಾಡಿ ವಿದ್ಯುನ್ಮಾನ ಮತ ಯಂತ್ರಗಳನ್ನು ಪರಿಶೀಲನೆ ಮಾಡಿತ್ತಿದೇವೆ ಎಂದರು.

nudikarnataka.com

ಹೈದರಾಬಾದ್ ನಿಂದ 24 ತಜ್ಞರ ತಂಡ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಯಗಳು ಪರಿಶೀಲನಾ ಕಾರ್ಯಕ್ಕೆ ನಿಯೋಜನೆಗೊಂಡು ಪರೀಶಿಲಿಸುತ್ತಿದ್ದಾರೆ. 22 ಟೇಬಲ್ ಗಳಲ್ಲಿ ದಿನಕ್ಕೆ 350 ಇವಿಎಂ ಮಿಷನ್ ಅನ್ನು ಪರಿಶೀಲನೆ ಮಾಡುತ್ತೇವೆ.‌ ನಂತರ ಚುನಾವಣಾ ಆಯೋಗದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ನಂತರ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್ ನಾಗಾರಾಜು ಅವರು, ಭಾರತದ ಚುನಾವಣಾ ಆಯೋಗದಿಂದ 2023 ರ ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಉದ್ದೇಶಕ್ಕಾಗಿ 2359 ಕಂಟ್ರೋಲ್ ಯೂನಿಟ್, 3359 ಬ್ಯಾಲೆಟ್ ಯುನಿಟ್, ಮತ್ತೆ ವಿವಿ ಪ್ಯಾಟ್ ಗಳನ್ನ ನೀಡಲಾಗಿದೆ. ಪ್ರತಿ‌ ವಿದ್ಯುನ್ಮಾನ ಮತಯಂತ್ರಕ್ಕೆ 96 ವೋಟ್ ಗಳನ್ನ ಚಲಾಯಿಸಿ ಫಸ್ಟ್ ಲೆವೆಲ್ ಚೆಕಿಂಗ್ ಮಾಡಲಾಗುವುದು. ಮಂಡ್ಯ ಜಿಲ್ಲೆಗೆ ಬಂದಿರುವ ಎಲ್ಲಾ ಎಲೆಕ್ಟ್ರಾನಿಕ್ ವೊಟಿಂಗ್ ಮಿಷನ್ ಗಳ ಸಾಮಾರ್ಥ್ಯ ಪರಿಶೀಲನೆ ಮಾಡುತ್ತಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಹೆಚ್ ಎಸ್ ಕೀರ್ತನ, ತಹಶೀಲ್ದಾರ್ ಕುಞ಼ಂ ಅಹಮ್ಮದ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!