Tuesday, May 14, 2024

ಪ್ರಾಯೋಗಿಕ ಆವೃತ್ತಿ

ಯೋಧನ ಪತ್ನಿ ಅಯ್ಕೆ ಮಾಡಲು ಮನವಿ

ದಕ್ಷಿಣ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ದೇಶ ಕಾಯುವ ಯೋಧರ ಪತ್ನಿ ಕಾವ್ಯಶ್ರೀ ಬೀರೇಶ್ ಅವರು ಸ್ಪರ್ಧೆ ಮಾಡಿದ್ದು. ಮೊದಲ ಪ್ರಾಶಸ್ತ್ಯದ ಮತವನ್ನು ಕೊಡುವುದರ ಮೂಲಕ ಜನಸೇವೆ ಮಾಡಲು ಯೋಧರ ಪತ್ನಿಗೆ ಅವಕಾಶ ಕಲ್ಪಿಸಬೇಕೆಂದು ಸಮಾನ ಮನಸ್ಕರ ತಂಡದ ಸದಸ್ಯ ಡಾ. ಗಿರೀಶ್ ಮನವಿ ಮಾಡಿದರು.

ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಮೆಳಹಳ್ಳಿಯಲ್ಲಿ ಹುತಾತ್ಮ ಯೋಧ ಗುರು ಸಮಾಧಿಗೆ ಪೂಜೆ ಸಲ್ಲಿಸುವುರದ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದ ಅವರು, ಮದ್ದೂರು ತಾಲ್ಲೂಕಿನ ಛತ್ರದ ಹೊಸಹಳ್ಳಿ ಗ್ರಾಮದ ಬೀರೇಶ್ ಅವರು ಹಲವು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ ಶಕ್ತಿ ಇದ್ದರೆ ಹೆಚ್ಚಿನ ಜನ ಸೇವೆ ಮಾಡಬಹುದೆಂದು ಕಾವ್ಯಶ್ರೀ ಬೀರೇಶ್ ಅವರು ದಕ್ಷಿಣ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ.

ವಿದ್ಯಾವಂತ ಮತದಾರರು ಎನಿಸಿಕೊಂಡಿರುವ ಪದವೀಧರರು ಮೊದಲ ಪ್ರಾಶಸ್ತ್ಯದ ಮತವನ್ನು ಕೊಟ್ಟು ಗೆಲ್ಲಿಸಬೇಕೆಂದು ಕೋರಿದರು.

ಶಿವಬೀರೇಂದ್ರ ಮಾತನಾಡಿ, ಮೊದಲ ಬಾರಿಗೆ ಚುನಾವಣೆಗೆ ಯೋಧರ ಪತ್ನಿಯೊಬ್ಬರು ಸ್ಪರ್ಧೆ ಮಾಡಿರುವುದರಿಂದ ದೇಶ ಭಕ್ತರು ಎನಿಸಿಕೊಂಡಿರುವ ಪ್ರತಿಯೊಬ್ಬರು ಕಾವ್ಯಶ್ರೀ ಬೀರೇಶ್ ಅವರಿಗೆ ಮತವನ್ನು ನೀಡುವುದರ ಮೂಲಕ ಯೋಧರಿಗೆ ಗೌರವ ಸಲ್ಲಿಸಬೇಕಿದೆ ಎಂದರು.

ಕಾವ್ಯಶ್ರೀ ಅವರು ಸಮಾಜ ಸೇವೆ ಮಾಡಬೇಕೆಂದಿರುವುದಕ್ಕೆ ಪ್ರತಿಯೊಬ್ಬರ ಸಹಕಾರ ಇರುವುದರಿಂದ ಪಕ್ಷಾತೀತವಾಗಿ ಹಾಗೂ ಜಾತ್ಯಾತೀತ ಗಾಗಿ ಬೆಂಬಲಿಸಿ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಕೋರಿದರು.

ಇದೇ ಸಂದರ್ಭದಲ್ಲಿ ಜಮ್ಮು ಕಾಶ್ಮೀರದಲ್ಲಿ ಅಪಘಾತದಲ್ಲಿ ಮೃತರಾದ ಯೋಧರಿಗೆ ಸಮಾನ ಮನಸ್ಕರ ವೇದಿಕೆ ತಂಡದ ಕೃಷ್ಣ,ಕುಮಾರ್ ಹೆಗಡೆ, ಅರವಿಂದ್, ಪುನೀತ್, ಯತೀಶ್,ಬಾಷ, ಸಿ.ಕೆ. ತೇಜರಾಜು, ನಂದನ್, ಬೀರೇಶಣ್ಣ ಸೇರಿದಂತೆ ಇತರರು ಗೌರವ ಸಲ್ಲುಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!