Sunday, May 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಕಟ್ಟಡ ಕಾರ್ಮಿಕರಿಗೆ ಜಾತಿ ಇಲ್ಲ ವೃತ್ತಿಯೇ ಜಾತಿ : ಶ್ರೀಕ ಶ್ರೀನಿವಾಸ್


  • ಜಾತಿ ಧರ್ಮದ ಸಂಕೋಲೆ ಕಳಚಿ ಸಂಘಟಿತರಾಗಿ ಶ್ರೀಕ ಶ್ರೀನಿವಾಸ್

  • ದುಡಿಮೆಯ ಬೆವರಿನ ಪಾಲನ್ನು ಹೋರಾಟದ ಮೂಲಕ ಪಡೆಯಬೇಕಿದೆ

ಕಟ್ಟಡ ಕಾರ್ಮಿಕರು ಯಾವುದೇ ಯಾವ ಜಾತಿಗೆ ಸೀಮಿತವಲ್ಲದಾಗಿದ್ದು ನಮ್ಮನ್ನು ಯಾವುದೇ ಜಾತಿ ಧರ್ಮವಾಗಿರಲಿ ನಾವು ಮಾಡುವ ವೃತ್ತಿಯ ಮೇಲೆ ನಮ್ಮನ್ನು ಗುರುತಿಸಲಾಗುತ್ತಿದೆ, ಆದ್ದರಿಂದ ಕಟ್ಟಡ ಕಾರ್ಮಿಕರು ಧರ್ಮ, ಜಾತಿ ಸಂಕೋಲೆಯನ್ನು ಕಳಚಿ ಸಂಘಟಿತರಾಗಿ ನಮ್ಮ ದುಡಿಮೆಯ ಬೆವರಿನ ಪಾಲನ್ನು ಹೋರಾಟದ ಮೂಲಕ ಪಡೆಯಬೇಕಿದೆ ಎಂದು ಕಟ್ಟಡ ನಿರ್ಮಾಣ ಮತ್ತು ಇತರ ಕಾರ್ಮಿಕರ ಸಂಘದ ಅಧ್ಯಕ್ಷ ಶ್ರೀಕ ಶ್ರೀನಿವಾಸ ಹೇಳಿದರು.

ಮದ್ದೂರು ಪಟ್ಟಣದಲ್ಲಿ ಸಂಘದ ವತಿಯಿಂದ ಕಾರ್ಮಿಕರ ದಿನಾಚರಣೆ ಮತ್ತು ಪ್ರಸ್ತುತ ರಾಜಕೀಯ ಕುರಿತು ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮದ್ದೂರು ತಾಲೂಕಿನಲ್ಲಿ ಕಟ್ಟಡ ಕಾರ್ಮಿಕರು 5,544 ಪುರುಷರು 2,155 ಮಹಿಳೆಯರು ನೋಂದಣಿಯಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ ತಾಲ್ಲೂಕಿನಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರಿದ್ದು ಇವರೆಲ್ಲರೂ ತಮ್ಮ ವೃತ್ತಿಯನ್ನು ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡುವ ಮೂಲಕ ಅಸಂಘಟಿತ ಕಾರ್ಮಿಕ ವರ್ಗ ಸಂಘಟಿತರಾಗಬೇಕಿದೆ ಎಂದರು.

ಈಗಾಗಲೇ ನೊಂದಣಿ ಮಾಡಿಸಿರುವ ಕಾರ್ಮಿಕರಲ್ಲಿ ಅನೇಕ ಕಾರ್ಮಿಕರು ನವೀಕರಿಸದ ಕಾರಣ ಗುರುತಿನ ಚೀಟಿ ರದ್ದಾಗುತ್ತಿದ್ದು, ಕಾರ್ಮಿಕರು ಸವಲತ್ತು ವಂಚಿತರಾಗಿದ್ದು, ಇವರನ್ನು ಗುರುತಿಸಿ ಸಂಘಟನೆ ಗುರುತಿನ ಚೀಟಿ ಮಾಡಿಸುವ ಕೆಲಸದಲ್ಲಿ ಶ್ರಮಿಸುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೇಮಂತ್ ಕುಮಾರ್ ವಹಿಸಿದ್ದರು. ಸಭೆಯಲ್ಲಿ ಗುಂಡಣ್ಣ, ಸೈಯದ್, ಶಶಿಕುಮಾರ್, ರಾಜೇಶ್, ಶಿವಲಿಂಗಯ್ಯ, ಸಂಪತ್, ಅನಿಲ್, ಧನುಷ್, ಮಹೇಶ್, ಭರತ್ ಇತರರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!