Thursday, September 19, 2024

ಪ್ರಾಯೋಗಿಕ ಆವೃತ್ತಿ

ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲುತ್ತೇವೆ: ಸಿಎಂ ಸಿದ್ದರಾಮಯ್ಯ

ಲೋಕಸಭಾ ಚುನಾವಣೆಗೆ ತಯಾರಿ ಮಾಡ್ತಾ ಇದೀವಿ, ಈ ಬಾರಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲುತ್ತೇವೆ.
ಬಿಜೆಪಿ ಅವರು ಬರಿ ಬುರುಡೆ ಹೊಡೆಯುತ್ತಾ ಇದ್ದಾರೆ. ಜನ ಈ‌ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಕೂಡ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿ ಎಂದ ಮಹದೇವಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ಥಳೀಯ ಮಟ್ಟದಲ್ಲಿ ಯಾರಿಗೆ ಒಲವು ಇರುತ್ತೆ ಅವರು ಅಭ್ಯರ್ಥಿ ಆಗ್ತಾರೆ. ಸ್ಥಳೀಯರು ಯಾರು ಹೆಸರು ಹೇಳ್ತಾರೆ ಅವರಿಗೆ‌ ಕೊಡ್ತೀವಿ.
ಮಹದೇವಪ್ಪ ಅವರ ಹೆಸರು ಹೇಳಿದ್ರೆ ಮಹದೇವಪ್ಪಗೆ, ಬೇರೆ ಅವರ ಹೆಸರು ಹೇಳಿದ್ರೆ ಬೇರೆ ಅವರಿಗೆ ಕೊಡ್ತೀವಿ ಎಂದರು.

ಮೈಸೂರಿನಿಂದ ಕಾಂಗ್ರೆಸ್‌ನಿಂದ ಡಾಲಿ ಧನಂಜಯ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಆ ಬಗ್ಗೆ  ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ಅದರ ಬಗ್ಗೆ ಚರ್ಚೆ ಆಗಿಲ್ಲ. ನನಗೆ ಗೊತ್ತು ಇಲ್ಲ, ಚರ್ಚೆನೂ ಇಲ್ಲಾ ಆತರದ್ದು ಇಲ್ಲ ಎಂದರು.

ವಿರೋಧ ಪಕ್ಷ ಇರುವುದು ಒಂದೇ

ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಸಿದ್ಧತೆ ನಡೆಸಿವೆ, ರಾಜ್ಯದಲ್ಲಿ ವಿರೋಧ ಪಕ್ಷ ಇರೋದು ಒಂದೇ ಪಕ್ಷ. ಎರಡು ವಿರೋಧ ಪಕ್ಷ ಇಲ್ಲ. ಬಿಜೆಪಿ ಜೊತೆ ಜೆಡಿಎಸ್ ಮರ್ಜ್ ಆಗಿದೆ, ಜೆಡಿಎಸ್ ಅವರು ಜೆಡಿಎಸ್‌ ರೀತಿಯೂ ಕೆಲಸ ಮಾಡ್ತಾ ಇಲ್ಲ. ಪ್ರತ್ಯೇಕ ಪಕ್ಷವಾಗಿ ಜೆಡಿಎಸ್ ಇಲ್ಲ. ಬಿಜೆಪಿ ಜೊತೆ ಸೇರಿದ ರೀತಿ ಅವರು ಕೆಲಸ ಮಾಡ್ತಾ ಇದಾರೆ ಎಂದರು.

ವಿಪಕ್ಷಗಳಿಗೆ |ಬಜೆಟ್ ಅರ್ಥ ಆಗಿಲ್ಲ. ಬಡವರ ವಿರೋಧಿಗಳಿಗೆ ಬಜೆಟ್ ಅರ್ಥ ಆಗಲ್ಲ. ನಾವು ಬಡವರ ಪರ ಮಾಡಿರೋ ಬಜೆಟ್. ನಾವು ಗ್ಯಾರಂಟಿ ಮಾತ್ರ ತಂದಿಲ್ಲ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡಿದ್ದೇವೆ. ನಮಗೆ ಕೇಂದ್ರದಿಂದ 1 ಲಕ್ಷದ 87 ಸಾವಿರ ಕೋಟಿ ನಷ್ಟ ಆಗಿದೆ. ಅದು ಬಂದರೆ ಇನ್ನೂ ಹೆಚ್ಚು ಅಭಿವೃದ್ಧಿ ಮಾಡಬಹುದು ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!