Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲಾಸ್ಪತ್ರೆ | ದಾದಿಯರ ಮುಷ್ಕರ : ಎಳೆ ಕಂದಮ್ಮಗಳಿಗೆ ತಟ್ಟಿದ ಬಿಸಿ – ಲಸಿಕೆ ಹಾಕದೆ ಆತಂಕಕ್ಕೀಡಾದ ಪೋಷಕರು

ವರದಿ : ನ.ಲಿ.ಕೃಷ್ಣ. ಕೃಷಿಕರು.

ಎನ್ ಎಚ್ ಎಮ್ ಕಾರ್ಯಕ್ರಮದಡಿ ಕಾರ್ಯನಿರ್ವಹಿಸುವ ದಾದಿಯರ ಮುಷ್ಕರದ ಪರಿಣಾಮ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಜನಸಿದ ಶಿಶುಗಳಿಗೆ ತಕ್ಷಣಕ್ಕೆ ನೀಡಬೇಕಾದ ಲಸಿಕೆ ಹಾಕದೆ ನಿರ್ಲಕ್ಷ್ಯ ತೋರಿರುವ ಘಟನೆ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ದಾದಿಯರ ಮುಷ್ಕರ ಇರುವುದನ್ನು ಮನಗಂಡು ಪರ್ಯಾಯ ವ್ಯವಸ್ಥೆ ಮಾಡಬೇಕಾದ, ಇಲ್ಲಿನ ವ್ಯವಸ್ಥಾಪನ ಮಂಡಳಿಯವರು ಎಂದಿನಂತೆ ನಿರ್ಲಕ್ಷ್ಯ ಧೋರಣೆ ತೋರುವ ಮೂಲಕ ನವಜಾತ ಶಿಶುಗಳ ಜೀವದ ವಿಷಯದಲ್ಲಿ ಜವಬ್ದಾರಿರಹಿತವಾಗಿ ನಡೆದುಕೊಂಡಿರುವ ಗಂಭೀರ ಲೋಪ ಬೆಳಕಿಗೆ ಬಂದಿದೆ.

ಲಸಿಕೆ ಹಾಕದ ಕುರಿತು ಪೊಷಕರ ಜೊತೆ ಚರ್ಚಿಸುವ ವ್ಯವದಾನವನ್ನು ತೋರಿಸದ, ಇಲ್ಲಿನ ವೈದ್ಯರ ಧೋರಣೆಗೆ ಬೇಸತ್ತು ಆತಂಕಕ್ಕೀಡಾದ ಇಲ್ಲಿನ ಪೋಷಕರು ಮದ್ದೂರು ಸರ್ಕಾರಿ ಆಸ್ಪತ್ರೆ ಯ ರೋಗಿಗಳಿಗೆ ಗರಿಷ್ಠ ಪ್ರಮಾಣದ ಸೇವೆ ಸಿಗುವುದನ್ನು ಖಾತರಿಪಡಿಸಿಕ್ಕೊಳ್ಳುವಲ್ಲಿ ರೋಗಿ ಹಾಗೂ ವೈದ್ಯರ ನಡುವೆ ಸಂವಹನ ನಡೆಸುವ ನಿಟ್ಟಿನಲ್ಲಿ ರಚನೆಗೊಂಡಿರುವ ” ಮದ್ದಿನಮನೆ ನೆರವಿಗರ ಕೂಟ” ಕ್ಕೆ ದೂರು ಸಲ್ಲಿಸಿದ್ದರ ಪರಿಣಾಮ ಈ ಲೋಪ ಬೆಳಕಿಗೆ ಬಂದಿದೆ.

ಇದನ್ನೂ ಓದಿ : “ಮದ್ದಿನಮನೆ ನೆರವಿಗರ ಕೂಟ” ಸರ್ಕಾರಿ ಆಸ್ಪತ್ರೆಯ ರೋಗಿಗಳ ನೆರವಿಗಾಗಿ ಸೇವಾ ತಂಡ ರಚನೆ

ಮದ್ದಿನಮನೆ ನೆರವಿಗರ ಕೂಟದ ಸದಸ್ಯರು ತಕ್ಷಣ ಕಾರ್ಯಪ್ರವೃತ್ತರಾಗಿ ಆಸ್ಪತ್ರೆಯ ಸೂಪರಿಡೆಟೆಂಟ್ ಹಾಗೂ ನಿರ್ದೇಶಕರೊಟ್ಟಿಗೆ ಈ ಕುರಿತು ಸಂವಹನ ನಡೆಸಲಾಗಿ ದಾದಿಯರ ಮುಷ್ಕರ ಕುರಿತು ಮಾಹಿತಿ ನೀಡಿ ಆಗಿರುವ ವ್ಯತ್ಯಯ ಕುರಿತು ಒಪ್ಪಿಕ್ಕೊಂಡಿರುತ್ತಾರೆ.

ನಾಳೆ ಪರ್ಯಾಯ ವ್ಯವಸ್ಥೆ ಮೂಲಕ ನರ್ಸಿಂಗ್ ಅಥಾವ ವೈದ್ಯಕೀಯ ವಿಧ್ಯಾರ್ಥಿಗಳನ್ನು ಬಳಸಿಕೊಂಡು ಲಸಿಕೆಯಾಕಿಸುವ ಭರವಸೆಯನ್ನು ನೀರ್ದೆಶಕರಾದ ಮಹೇಂದ್ರ ರವರು ನೀಡಿದ್ದಾರೆ.

ಚಾಮರಾಜನಗರದ ಆಕ್ಸಿಜನ್ ಪ್ರಕರಣ ಇನ್ನು ಜನರ ಮನಸ್ಸಿನಿಂದ ಮಾಸುವ ಮುನ್ನವೇ ವೈದ್ಯರ ಹಾಗೂ ಇಲ್ಲಿನ ವ್ಯವಸ್ಥಾಪನಾ ಮಡಳಿಯು ಬೇಜಾವಬ್ದಾರಿತನದಿಂದ ನವಜಾತ ಶಿಶುಗಳ ಆರೋಗ್ಯದ ವಿಷಯದಲ್ಲಿ ದುಷ್ಪರಿಣಾಮ ಬೀರುವಾ ಗಂಭೀರ ಪರಿಸ್ಥಿತಿ ಎದುರಾಗಿದೆ.

ತಾಯಿ ಹಾಗು ಶಿಶು ಮರಣ ತಗ್ಗಿಸಲೆಂದೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವ ಹೊತ್ತಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಇಂತಹ ಬೇಜಾವಬ್ದಾರಿ ಕಂಡು ಬಂದಿರುವುದು ಇನ್ನು ತಾಲ್ಲೂಕು ಹಾಗು ಕೆಳಹಂತದ ಆಸ್ಪತ್ರೆಗಳ ಪರಿಸ್ಥಿಯ ಗಂಭೀರತೆ ಇನ್ನು ತೀವ್ರವಾಗಿರುವುದನ್ನ ಪ್ರತಿಬಿಂಬಿಸಿದೆ.

ನಿರ್ದೇಶಕರು ತಿಳಿಸಿರುವಂತೆ ನಾಳೆ ತಪ್ಪದೆ ಎಲ್ಲಾ ಮಕ್ಕಳಿಗೂ ಅಗತ್ಯ ಲಸಿಕೆ ಹಾಕಿಸಲು ಮುಂದಾಗುವ ಮೂಲಕ ಆಗಿರುವ ಲೋಪ ಸರಿಪಡಿಸಬೇಕಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!