Friday, September 20, 2024

ಪ್ರಾಯೋಗಿಕ ಆವೃತ್ತಿ

ಸ್ವಾವಲಂಬಿ ಜೀವನಕ್ಕೆ ಮುಂದಾದರೆ ಸಬಲೀಕರಣ: ನೆಲ್ಲಿತ್ತಾಯ

ಸ್ತ್ರೀಯರು ಆತ್ಮಗೌರವ ಹಾಗೂ ಸ್ವಾವಲಂಬಿ ಜೀವನಕ್ಕೆ ಮುಂದಾದಾಗ ಮಾತ್ರ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಮೈಸೂರು ಪ್ರಾದೇಶಿಕ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ತಿಳಿಸಿದರು.

ಮಳವಳ್ಳಿ ಪಟ್ಟಣದ ರೈತ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಮತ್ತು ಮನೆಯಲ್ಲಿ ಸಾಮರಸ್ಯದ ಬದುಕು ರೂಪಿಸಲು ಮಹಿಳೆಯರಿಂದ ಮಾತ್ರ ಸಾಧ್ಯ. ಹೆಣ್ಣಾದವಳು ಬದುಕಿನ ಸುಖ ದುಃಖ ಕಷ್ಟನಷ್ಟಗಳು ನಾನು ಬಯಸಿ ಸದಾ ಹಸನ್ಮುಖಿಯಾಗಿ ಸಮಾಜವನ್ನು ಎದುರಿಸುತ್ತಾಳೆ. ಪುರುಷ ಸಮಾನವಾಗಿ ಮಹಿಳೆ ಬದುಕು ರೂಪಿಸಲು ಪ್ರಯತ್ನ ಮಾಡಿದಾಗ ನಿರ್ಮಾಣ ಸಾಧ್ಯ ಮಹಿಳೆಯರಲ್ಲಿ ಆತ್ಮವಿಶ್ವಾಸ ದೃಢತೆ ಹಾಗೂ ಸಕ್ರಾತ್ಮಕ ಭಾವನಾದ ಜೊತೆ ಪ್ರತಿದಿನಗೊಳ್ಳಬೇಕಾಗಿದೆ ಎಂದರು.

ನಂತರ ಜಿಲ್ಲಾ ಕ.ಸಾ. ಪ ಗೌರವ ಕಾರ್ಯದರ್ಶಿ ಕೃಷ್ಣೇಗೌಡ ಮಾತನಾಡಿ ಬಾಲ್ಯ ವಿವಾಹ. ದುಶ್ಚಟ.ಮಧ್ಯ ಸೇವನೆಯಿಂದ ಮಕ್ಕಳನ್ನು ದೂರ ಇಡಬೇಕಾಗಿದೆ. ಮಹಿಳೆಯರು ಈ ದೇಶದ ಶಕ್ತಿಯಾಗಿದ್ದಾರೆ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮಹಿಳೆಯರ ಸ್ವಬಲಂಬನೆ ಜೀವನಕ್ಕೆ ಅಡಿಪಾಯಕ್ಕೆ ಕೊಟ್ಟಿದೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕಿ ಚೇತನ. ಮಹಿಳಾ ಸಾಹಿತಿ ಮಲ್ಲಿಕಾ. ಆಯುಷ್ ವೈದ್ಯಾಧಿಕಾರಿ ಡಾ. ಶೋಭಾ. ಪದ್ಮಾವತಿ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!