Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಕಟ್ಟಡ ವಲಯದ ಕಾರ್ಮಿಕರ ಪ್ರತಿಭಟನೆ

ಮಳವಳ್ಳಿ ಪಟ್ಟಣದ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರ ಸಮಸ್ಯೆ ಬಗ್ಗೆಯರಿಸಲು ಒತ್ತಾಯಿಸಿ ಕಾರ್ಮಿಕ ನಿರೀಕ್ಷಕರ ಕಚೇರಿ ಎದುರು ನೂರಾರು ಕಟ್ಟಡ ಕಾರ್ಮಿಕರು ಪ್ರತಿಭಟನೆ ಮಾಡಿದರು.

ಸಿಐಟಿಯು ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಾತನಾಡಿ, ಕೋವಿಡ್ ಮೊದಲು ಮತ್ತು ಎರಡನೇ ಅಲೆಯಲ್ಲಿ ಘೋಷಿಸಲಾದ ಕೋವಿಡ್ ಪರಿಹಾರ ರೂ 5000 ಮತ್ತು 3000 ಪರಿಹಾರ ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಿಲ್ಲ, ಕಟ್ಟಡ ಕಾರ್ಮಿಕರ ಪಿಂಚಣಿಯನ್ನು ಕನಿಷ್ಠರ ರೂ 5000 ಮತ್ತು ಕುಟುಂಬ ಪಿಂಚಣಿಯನ್ನು ರೂ 3000 ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಕಟ್ಟಡ ಕಾರ್ಮಿಕರು ಸೌಲಭ್ಯ ಗಳಿಗಾಗಿ ಸಲ್ಲಿಸಲಾದ ಅರ್ಜಿಗಳು ತಿರಸ್ಕೃತಗೊಂಡಾಗ ಪುನರ್ ಸಲ್ಲಿಸಲು ಮೇಲ್ಮನವಿ  ಸಮಿತಿಗಳನ್ನು ಕಾರ್ಮಿಕ ಸಂಘಗಳನ್ನು ಒಳಗೊಂಡು ರಚಿಸಬೇಕು, ಒರಿಸ್ಸಾ ರಾಜ್ಯದ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಮಂಡಳಿಯ ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ಕನಿಷ್ಠ 5 ಲಕ್ಷಗಳ ಹಣಕಾಸಿನ ಸಹಾಯಧನವನ್ನು ನೀಡಬೇಕೆಂದು ತಾಲ್ಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ ಹೆಚ್.ಕೆ ಒತ್ತಾಯಿಸಿದರು.

ಮಳವಳ್ಳಿ ಪಟ್ಟಣದ ಪುರಸಭೆ ಕಚೇರಿಯಿಂದ 300 ಕ್ಕೂ ಹೆಚ್ಚು ಕಾರ್ಮಿಕರು ಮಳವಳ್ಳಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಕಾರ್ಮಿಕ ನಿರೀಕ್ಷಕರ ಮುಖಾಂತರ ಕಾರ್ಮಿಕ ಮಂತ್ರಿ ಸಂತೋಷ್ ಲಾಡ್ ರವರಿಗೆ ಮಾನವಿ ಸಲಿಸಿದರು.

ಪ್ರತಿಭಟನೆಯಲ್ಲಿ CITU ಮಹದೇವಮ್ಮ, ಕಟ್ಟಡ ಕಾರ್ಮಿಕ ಸಂಘದ ತಾಲ್ಲೂಕು ಖಜಾಂಚಿ ಬಿ.ಮಂಟೇಸ್ವಾಮಿ, ಉಪಾಧ್ಯಕ್ಷರಾದ ಶಿವಮ್ಮ, ನಾರಾಯಣ, ಸಹ ಕಾರ್ಯದರ್ಶಿಗಳಾದ ಕುಮಾರ ಸ್ವಾಮಿ, ಮಾದಪ್ಪ ಮುಂತಾದವರಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!