Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

ಜೂನ್ 4 ರಂದು ಶ್ರೀರಂಗಪಟ್ಟಣದ ಬಸ್ ನಿಲ್ದಾಣದಿಂದ ಜಾಮಿಯಾ ಮಸೀದಿಯವರೆಗೆ ಹನುಮಾನ್ ಮಂದಿರ ಚಲೋ ಕಾರ್ಯಕ್ರಮ ನಡೆಸುವ ಮೂಲಕ ಜಿಲ್ಲೆಯಲ್ಲಿ ಶಾಂತಿ ಕದಡಲು ಹೊರಟಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಮ್ ಒಕ್ಕೂಟ,ಮಂಡ್ಯ ಆಗ್ರಹಿಸಿದೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾನ ಮನಸ್ಕ ವೇದಿಕೆಯ ಲಕ್ಷ್ಮಣ್ ಚೀರನಹಳ್ಳಿ, ಜಿಲ್ಲೆಯಲ್ಲಿ ತಲೆಕೆಡಿಸಿಕೊಳ್ಳಲು ಹಲವಾರು ಸಮಸ್ಯೆಗಳಿವೆ ಮೈಷುಗರ್, ರೈತರ ಆತ್ಮಹತ್ಯೆ,ಮಹಿಳೆಯರ ಸಂಕಷ್ಟ ,ನಿರುದ್ಯೋಗ ಮೊದಲಾದ ಸಮಸ್ಯೆಗಳಿದ್ದರೂ, ಅದನ್ನು ಬಗೆಹರಿಸುವುದನ್ನು ಬಿಟ್ಟು ಶಾಂತಿಯಿಂದ ಬಾಳುವೆ ಮಾಡುತ್ತಿರುವ ಹಿಂದೂ-ಮುಸ್ಲಿಮರ ಮಧ್ಯೆ ಬೆಂಕಿ ಹೆಚ್ಚಿ ಅಶಾಂತಿ ಉಂಟು ಮಾಡುವ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಹನುಮಾನ್ ಚಲೋ ಮಾಡುವ ಮೂಲಕ ಅಶಾಂತಿ ಸೃಷ್ಟಿಸಲು ಹೊರಟಿದ್ದಾರೆ.ಇವರ ವಿರುದ್ಧ ಕೂಡಲೇ ಡಿಸಿ ಮತ್ತು ಎಸ್ಬಿ ಕ್ರಮ ಜರುಗಿಸಬೇಕು ಎಂದರು.

ವಕೀಲ ನದೀಂ ಅಹಮದ್‌ ಮಾತನಾಡಿ,ಮಂಡ್ಯ ಜಿಲ್ಲೆಯಲ್ಲಿ ಹಿಂದು- ಮುಸ್ಲಿಮರು ಅಣ್ಣ- ತಮ್ಮಂದಿರ ರೀತಿ ಭಾವೈಕ್ಯ ದಿಂದ ನಡೆದುಕೊಂಡ ಬರುತ್ತಿದ್ದಾರೆ.ಶ್ರೀರಂಗಪಟ್ಟವು ವಿಶ್ವದ ಒಂದು ಪ್ರವಾಸಿ ತಾಣವಾಗಿದೆ. ದೇಶ- ವಿದೇಶದಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ಇತಂಹ ಶಾಂತಿಯ ಜಿಲ್ಲೆಯಲ್ಲಿ ಅಶಾಂತಿ ಉಂಟು ಮಾಡಲು ಕೆಲವು ಪುಂಡರು ಯತ್ನಿಸುತ್ತಿದ್ದು, ಅವರನ್ನು ಪೊಲೀಸ್ ಇಲಾಖೆ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೈಸೂರಿನ ಹುಲಿ ಟಿಪ್ಪು ಸುಲ್ತಾನ ಒಬ್ಬ ರಾಷ್ಟ್ರದ್ರೋಹಿ, ಕನ್ನಡ ವಿರೋಧಿ, ಹಿಂದೂ ವಿರೋಧಿ, ಮತಾಂಧ ಎಂದು ಸುಳ್ಳು ಸುದ್ದಿಯನ್ನು ತಮ್ಮ ಕರಪತ್ರದಲ್ಲಿ ಪ್ರಕಟಿಸಿರುತ್ತಾರೆ. 1991ರ ಪ್ಲೇಸಸ್ ಆಫ್ ವರ್ಶಿಪ್ ಕಾಯ್ದೆ ಪ್ರಕಾರ ಸ್ವಾತಂತ್ರ್ಯಾ ನಂತರ ಇರುವ ದೇವಸ್ಥಾನ, ಮಸೀದಿ, ಚರ್ಚು ಎಲ್ಲೆಲ್ಲಿ ಇದೆಯೋ ಅಲ್ಲೇ ಇರಬೇಕು.ತೊಂದರೆ ನೀಡಬಾರದು.ಆದರೆ ಕರಪತ್ರದಿಂದ ಮುಸ್ಲಿಂ ಸಮಾಜದಲ್ಲಿ ಅತಂಕವುಂಟಾಗಿದೆ ಎಂದರು.

ಎಸ್ಡಿಪಿಐ ಮಾಜಿ ಅಧ್ಯಕ್ಷ ರಫೀಕ್, ಮುನಾವರ್ ಖಾನ್, ಇರ್ಫಾನ್ ಪಾಷ, ಶಿವಶಂಕರ್, ಮುಕ್ತಾರ್ ಅಹ್ಮದ್ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!