Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೇ.28 ಮತ್ತು 29ರಂದು ಯುವ ಸಂಸತ್ ಅಧಿವೇಶನ

ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮೇ.28 ಮತ್ತು 29ರಂದು ರಾಜ್ಯಮಟ್ಟದ ಪ್ರಥಮ ‘ಯುವ ಸಂಸತ್ ಅಧಿವೇಶನ’ ನಡೆಸಲಾಗಿದೆ ಎಂದು ಮಾಯಿಗೌಡ ಪ್ರಕಟಿಸಿದರು.

ಮಂಡ್ಯದಲ್ಲಿ ಸುದ್ದಿಘೋಷ್ಠಿ ನಡೆಸಿ ಮಾತನಾಡಿದ ಇವರು, ರಾಜ್ಯ ಸಂಶೋಧನಾ ಪರಿಷತ್‌ನಿಂದ ನಡೆಯುತ್ತಿರುವ ಅಧಿವೇಶನವನ್ನು 28 ರಂದು ಬೆಳಗ್ಗೆ 10.30ಕ್ಕೆ ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್‌ಕುಮಾರ್ ಉದ್ಘಾಟಿಸಲಿದ್ದಾರೆ. ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ‘ಯುವಜನತೆ ಮತ್ತು ಚಲನಚಿತ್ರ’ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಡಿಸಿ ಎಸ್.ಅಶ್ವತಿ, ಭಾರತೀಯ ರೆಡ್‌ಕ್ರಾಸ್‌ನ ಸಭಾಪತಿ ವಿಜಯಕುಮಾರ್ ಪಾಟೀಲ್ ಭಾಗವಹಿಸಿದ್ದರು.

ಮಧ್ಯಾಹ್ನ 12.30ಕ್ಕೆ ಕೆ.ಮಾಯಿಗೌಡ ಅಧ್ಯಕ್ಷತೆಯಲ್ಲಿ ವಕೀಲ ಪ್ರೊ.ರವಿವರ್ಮಕುಮಾರ್ ‘ಪ್ರಸ್ತುತ ಸಾಮಾಜಿಕ ತಲ್ಲಣ’ ವಿಷಯ ಮಂಡಿಸಲಿದ್ದು, 2.30ಕ್ಕೆ ಪರಿಷತ್‌ನ ಜಿಲ್ಲಾಧ್ಯಕ್ಷ ಎಂ.ವಿ.ಕೃಷ್ಣ ಅಧ್ಯಕ್ಷತೆಯಲ್ಲಿ ‘ಸಂವಿಧಾನ ಓದು’ ಕುರಿತು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಮತ್ತು 3.30ಕ್ಕೆ ಪರಿಷತ್‌ನ ರಾಜ್ಯಾಧ್ಯಕ್ಷ ಡಾ.ಯಮದೂರು ಸಿದ್ದಾಬಲರಾಜು ಅಧ್ಯಕ್ಷತೆಯಲ್ಲಿ ‘ಮನೋಭ್ಯಾಸ ಸಂವರ್ಧನೆ’ ಕುರಿತು ಚಿಂತಕ ಯೋಗೀಶ್ ಮಾಸ್ಟರ್ ವಿಷಯ ಮಂಡಿಸಲಿದ್ದಾರೆ.

5ಗಂಟೆಗೆ ಪರಿಷತ್‌ನ ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ಬಸವರಾಜು ಅಧ್ಯಕ್ಷತೆಯಲ್ಲಿ ಪರಿಷತ್‌ನ ರಾಜ್ಯ ಸಂಘದ ಕಾರ್ಯದರ್ಶಿ ವಿ.ಟಿ.ಸ್ವಾಮಿ ‘ಪರಿಷತ್‌ನ ಧ್ಯೇಯೋದ್ಧೇಶ’ ಕುರಿತು ಮತ್ತು 6 ಗಂಟೆಗೆ ಪರಿಷತ್‌ನ ಜಿಲ್ಲಾ ಉಪಾಧ್ಯಕ್ಷ ಗುರುಮೂರ್ತಿ ಅಧ್ಯಕ್ಷತೆಯಲ್ಲಿ ಡಾ.ಹುಲಿಕಲ್ ನಟರಾಜು ಅವರು ‘ಪ್ರಯೋಗದ ಚಿಂತನೆ’ ಕುರಿತು ವಿಷಯ ಮಂಡಿಸಲಿದ್ದಾರೆ.

29ರಂದು ಬೆಳಗ್ಗೆ 10.30ಕ್ಕೆ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಅಧ್ಯಕ್ಷತೆಯಲ್ಲಿ ‘ನನ್ನೊಳಗಿನ ಚೈತನ್ಯ’ ವಿಷಯ ಕುರಿತು, ವಿಶೇಷ ಚೇತನ ವಿಜ್ಞಾನಿ ಡಾ.ಮಾಲತಿ ಕೆ.ಹೊಳ್ಳ ವಿಷಯ ಮಂಡಿಸಲಿದ್ದಾರೆ. 11.30ಕ್ಕೆ ಪರಿಷತ್‌ನ ರಾಜ್ಯ ಉಪಾಧ್ಯಕ್ಷ ಡಾ.ಟಿ.ಎಚ್.ಆಂಜನಪ್ಪ ಅಧ್ಯಕ್ಷತೆಯಲ್ಲಿ ಸಾಹಿತಿ ಡಾ.ಸಿ.ಆರ್.ಚಂದ್ರಶೇಖರ್ ‘ಯುವ ಮನಸ್ಸಿನ ಖಿನ್ನತೆ’ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ.

12.30ಕ್ಕೆ ಪರಿಷತ್‌ನ ರಾಜ್ಯ ನಿರ್ದೇಶಕಿ ಎಸ್.ಡಿ.ಪ್ರಭಾವತಿ ಅಧ್ಯಕ್ಷತೆಯಲ್ಲಿ ಸಾಹಿತಿ ಡಾ.ಎಚ್.ಎಸ್.ಅನುಪಮಾ ‘ಯುವ ಜನತೆ ಮತ್ತು ಪ್ರಸ್ತುತ ಸವಾಲು’ ಮತ್ತು 2.30ಕ್ಕೆ ಎಸ್‌ಆರ್‌ಸಿ ನಿವೃತ್ತ ನಿರ್ದೇಶಕ ತುಕರಾಂ ಅಧ್ಯಕ್ಷತೆಯಲ್ಲಿ ನಿವೃತ್ತ ಎಸ್ಪಿ ಎಸ್.ಕೆ.ಉಮೇಶ್ ಯುವ ಜನತೆ ಹಾಗೂ ಸಮೂಹ ಮಾಧ್ಯಮದ ವಿಷಯ ಮಂಡನೆ ನಡೆಯಲಿದೆ. . ಸಂಜೆ 4ಕ್ಕೆ ಪರಿಷತ್‌ನ ಜಿಲ್ಲಾಧ್ಯಕ್ಷ ಸಿ.ಶಿವಲಿಂಗಯ್ಯ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವಿದೆ.

ಡಾ.ಯಮದೂರು ಸಿದ್ದರಾಜು, ಸುನಂದಾ ಜಯರಾಂ, ಗುರುಮೂರ್ತಿ, ಶಿವಲಿಂಗಯ್ಯ, ಲಂಕೇಶ್, ವಿನಯ್‌ಕುಮಾರ್ ಇತರರು ಇದ್ದರು.

ಇದನ್ನು ಓದಿ: ಮನುವಾದಿಗಳ ಕುತಂತ್ರಕ್ಕೆ ತಿರುಗೇಟು ನೀಡಬೇಕಾಗಿದೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!