ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಂಡ್ಯದ ಮಹಮದ್ ಜಫ್ರುಲ್ಲಾ ಖಾನ್ ಅವರ ಹುಟ್ಟುಹಬ್ಬದ ಅಂಗವಾಗಿ ಕೆ.ಎನ್.ನವೀನ್ ಕುಮಾರ್ ಅವರ ನೇತೃತ್ವದಲ್ಲಿ ಮಂಡ್ಯನಗರದ ಮಿಮ್ಸ್ ಆವರಣದಲ್ಲಿರುವ ಮಮತೆಯ ಮಡಿಲು ನಿತ್ಯ ಅನ್ನದಾಸೋಹ ಕೇಂದ್ರದಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರು ಮತ್ತು ಅವರ ಸಂಬಂಧಿಕರಿಗೆ ಬೆಳಗಿನ ತಿಂಡಿ ಹಾಗೂ ಗಂಜಿ ವಿತರಿಸುವ ಮೂಲಕ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿದರು.
ಇಂದು ನಗರದ ಮಿಮ್ಸ್ ಆವರಣದಲ್ಲಿರುವ ಮಮತೆಯ ಮಡಿಲು ನಿತ್ಯ ಅನ್ನದಾಸೋಹ ಕೇಂದ್ರದಲ್ಲಿ ನೂರಾರು ಮಂದಿಗೆ ಅನ್ನದಾನ ಮಾಡುವ ಮೂಲಕ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಂಡ್ಯದ ಮಹಮದ್ ಜಫ್ರುಲ್ಲಾ ಖಾನ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಶುಭಕೋರಿದರು.
ನಂತರ ಮಾತನಾಡಿದ ಕೆ.ಎನ್.ನವೀನ್ ಕುಮಾರ್ , ಮಂಡ್ಯದ ಹೆಮ್ಮೆಯ ನಮ್ಮ ಜಫ್ರುಲ್ಲಾ ಖಾನ್ ಅವರ ಹುಟ್ಟುಹಬ್ಬದ ಅಂಗವಾಗಿ ಜನರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಮಿಮ್ಸ್ ಆವರಣದಲ್ಲಿರುವ ಮಮತೆಯ ಮಡಿಲು ನಿತ್ಯ ಅನ್ನದಾಸೋಹ ಕೇಂದ್ರದಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರು ಮತ್ತು ಅವರ ಸಂಬಂಧಿಕರಿಗೆ ಬೆಳಗಿನ ತಿಂಡಿ ಹಾಗೂ ಗಂಜಿ ವಿತರಿಸಿದ್ದೇವೆ ಎಂದರು.
ಜಫ್ರುಲ್ಲಾ ಖಾನ್ ಅವರು ಹಲವಾರು ವರ್ಷಗಳಿಂದ ಸಮಾಜಸೇವೆ ಮಾಡುತ್ತ ಬಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಈ ವರ್ಷ ಅವರ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿದ್ದೇವೆ ಮುಂದಿನ ದಿನಗಳಲ್ಲಿ ಅವರು ಸಕ್ರಿಯವಾಗಿ ಸಮಾಜಸೇವೆಯಲ್ಲಿ ತೊಡಗಲಿದ್ದಾರೆ ಅವರಿಗೆ ಹಾಗೂ ಅವರ ಕುಟುಂಬಸ್ಥರಿಗೆ ದೇವರು ಆಯಸ್ಸು,ಆರೋಗ್ಯ ಭಾಗ್ಯವನ್ನು ನೀಡಿ ಸಮಾಜದಲ್ಲಿ ಉತ್ತಮ ಕೆಲಸವನ್ನು ಮಾಡುವ ಶಕ್ತಿ ನೀಡಲಿ ಎಂದರು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಶಶಿಕುಮಾರ್, ಮಂಗಲ ಯೋಗೇಶ್ , ಹಾಜರಿದ್ದರು.