Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೇಂದ್ರ ಬಜೆಟ್| ಉತ್ತರ ಭಾರತಕ್ಕೆ ಶೇ.400ರಷ್ಟು ಪಾಲು, ದಕ್ಷಿಣಕ್ಕೆ ವಂಚನೆ: ನರೇಂದ್ರಸ್ವಾಮಿ

ಕೇಂದ್ರದ ಇವತ್ತಿನ ಬಜೆಟ್ ನೋಡಿದರೆ ನಮ್ಮ ಪಾಲಿಗೆ ಕೇವಲ 13% ಮಾತ್ರ ಹಣಕಾಸು ಸೌಲಭ್ಯವನ್ನು ನೀಡಿದ್ದು 300 ರಿಂದ 400 ಪಟ್ಟು ಉತ್ತರ ಭಾರತದ ಬೇರೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಣಕಾಸಿನ ಪಾಲನ್ನು ನೀಡಲಾಗಿದೆ ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ಕಿಡಿಕಾರಿದರು.

ಮಳವಳ್ಳಿ ತಾಲೂಕಿನ ಕಲ್ಕುಣಿ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಮತ್ತು ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಣಕಾಸು ನೀತಿಯಲ್ಲಿ ತಾರತಮ್ಯ ಮಾಡಿ, ನಮ್ಮ ರಾಜ್ಯ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಈ ಧೋರಣೆಗೆ ಕುಗ್ಗದೆ ನಮ್ಮ ನಮ್ಮಲ್ಲಿ ಸಹಕಾರ ತತ್ವಗಳನ್ನು ಅಳವಡಿಸಿ ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಸದೃಢಗೊಳಿಸುವ ಅವಶ್ಯಕತೆ ಈ ದಿನಗಳಲ್ಲಿ ಬೇಕಾಗಿದೆ ಎಂದರು.

ಭಾರತದ ಸ್ವಾತಂತ್ರ್ಯ ಬಂದಾಗ ಕಡು ಬಡತನದ ರಾಷ್ಟ್ರವಾಗಿದ್ದು, ಸಾಂಕ್ರಾಮಿಕ ಕಾಯಿಲೆಗಳಿಗೆ ಔಷಧಿಗಳನ್ನ ತೆಗೆದುಕೊಳ್ಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇತ್ತು. ಕಾಲಕ್ರಮೇಣ ಅಭಿವೃದ್ಧಿಯ ಪಥದತ್ತ ಭಾರತವು ಹೆಜ್ಜೆ ಇಟ್ಟಿತು. ಇದಕ್ಕೆ ಜವಾಹರ್ ಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ವಿ.ಪಿ.ಸಿಂಗ್ ನರಸಿಂಹರಾವ್, ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ದೂರದೃಷ್ಟಿಯು ಕಾರಣವಾಗಿದೆ. ನಾನು ಬಡವರಿಗೆ ಸೂರು ಕೊಡುವ ನಿಟ್ಟಿನಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದೇನೆ. ಅದೇ ರೀತಿ ಸರ್ಕಾರದ ಯೋಜನೆಗಳನ್ನ ಗ್ಯಾರಂಟಿ ಯೋಜನೆಗಳು ಎಲ್ಲಾ ಬಡವರನ್ನು ತಲುಪುವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಕಾರ್ಖಾನೆಗಳನ್ನು ತರಲು ಈಗಾಗಲೇ ಮಾತುಕತೆ ನಡೆಸಲಾಗಿದೆ.ಮನೆ ಬಾಗಿಲಿನಲ್ಲಿ ಕೆಲಸವನ್ನು ನೀಡುವಂತಹ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಎಂ ಡಿ ಸಿ ಸಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವನಜಶ್ರೀ, ಸಂಘದ ಅಧ್ಯಕ್ಷ ಮಹೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾರತೀ ಸುರೇಶ್, ನಿರ್ದೇಶಕರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!